29ರಿಂದ ಸುಕ್ಷೇತ್ರ ಇಂಚಲ ವ್ಮಠದಲ್ಲಿ ವಿವಿಧ ಧಾಮರ್ಿಕ ಕಾರ್ಯಕ್ರಮ

ಬೈಲಹೊಂಗಲ- ಸಮೀಪದ ಸುಕ್ಷೇತ್ರ ಇಂಚಲದ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮಿಗಳ 79 ನೇ ಜಯಂತ್ಯೋತ್ಸವ, ವಿಶ್ವಶಾಂತಿಗಾಗಿ 49 ನೇ ಅಖಿಲ ಭಾರತ ವೇದಾಂತ ಪರಿಷತ್, ರಜತ ರಥೋತ್ಸವ ಹಾಗೂ ಮಹಾರಥೋತ್ಸವ, ಶ್ರೀಗಳ ಸುವರ್ಣ ಸಿಂಹಾಸನಾರೋಹಣ ಮತ್ತು ಕನಕ ಕಿರೀಟಧಾರಣೆ ಹಾಗೂ ಮಹಾಮಂಗಲ ಕಾರ್ಯಕ್ರಮಗಳು ಶನಿವಾರ ದಿ.29 ರಿಂದ ಜನೆವರಿ 2 ರವರೆಗೆ 5 ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿವೆ ಎಂದು ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಬಿ.ಮಲ್ಲೂರ ಹೇಳಿದರು.

      ಅವರು ರವಿವಾರ ಇಂಚಲದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶನಿವಾರ ದಿ.29 ರಂದು ಮುಂಜಾನೆ 7 ಕ್ಕೆ ಶಿವರಾಮಾವಧೂತಾಶ್ರಮ, ಹೇಮಕೂಟ ಹಂಪಿಯ ವಿದ್ಯಾನಂದ ಭಾರತಿ ಸ್ವಾಮಿಗಳು ಪ್ರಣವ ಧ್ವಜಾರೋಹಣ, ಕಳಸ ಸ್ಥಾಪನೆ ನೆರವೇರಿಸುವರು. 8.30 ಕ್ಕೆ ನೆಮ್ಮಿ ನಿಜವನು  ಹಾಗೂ ಸಂಜೆ 6.30 ಕ್ಕೆ ಚತುವರ್ಿದ ಭಜಂತೇಮಾಮ್ ಕುರಿತು ಅಧ್ಯಾತ್ಮ ಪ್ರವಚನ ಜರಗುವುದು. ಡಾ.ಶಿವಾನಂದ ಭಾರತಿ ಶ್ರೀಗಳು ಸಾನಿಧ್ಯ ವಹಿಸುವರು.ವಿದ್ಯಾನಂದ ಭಾರತಿ ಸ್ವಾಮಿಗಳು, ರಾಮಾನಂದ ಭಾರತಿ ಸ್ವಾಮಿಗಳು ಉಪಸ್ಥಿತರಿರುವರು.

    ರವಿವಾರ ದಿ.30 ರಂದು ಬೆಳಿಗ್ಗೆ 8.30 ಕ್ಕೆ ಗುರುವೇ ನಿಮ್ಮಯ ಕರುಣದೊಳು, ಸಂಜೆ 6.30 ಕ್ಕೆ ಮಾಡಲಿಲ್ಲವೇ ತಪವನು ಕುರಿತು ಪ್ರವಚನ ಜರುಗುವದು. ಡಾ.ಶಿವಾನಂದ ಭಾರತಿ ಸ್ವಾಮಿಗಳು ಸಾನಿಧ್ಯದಲ್ಲಿ ಖುರ್ದಕಂಚನಹಳ್ಳಿಯ ಸುಬ್ರಮಣ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ವಿದ್ಯಾನಂದ ಭಾರತಿ ಸ್ವಾಮಿಗಳು, ರಾಮಾನಂದ ಭಾರತಿ ಸ್ವಾಮಿಗಳು ಉಪಸ್ಥಿತರಿರುವರು.

  ಸೋಮವಾರ ದಿ.31 ರಂದು ಬೆಳಿಗ್ಗೆ 8.30 ಕ್ಕೆ ಇಹಚೇದ ವೇದಿತ, ಸಂಜೆ 6.30 ಕ್ಕೆ ಕರುಣಿಸು ನೀನೆನ್ನ ಕರಣನಿಕರದೊಳ್ ಎಂಬ ವಿಷಯ ಕುರಿತು ಪ್ರವಚನ ಜರುಗುವದು. ಡಾ.ಶಿವಾನಂದ ಭಾರತಿ ಸ್ವಾಮಿಗಳು ಸಾನಿಧ್ಯದಲ್ಲಿ ಷಣ್ಮುಖಾರೂಡ ಮಠದ ಶ್ರೀಮದಭಿನವ ಶಿವಪುತ್ರ ಮಹಾಸ್ವಾಮಿಗಳು ನೇತೃತ್ವ ವಹಿಸುವರು. ಹುಕ್ಕೇರಿ ಗುರುಶಾಂತೇಶ್ವರಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸುವರು.

   ಮಂಗಳವಾರ ದಿ.1 ರಂದು ಬೆಳಿಗ್ಗೆ8.30 ಕ್ಕೆ ಗುರುಚರಣಾಂಭುಜ ನಿರ್ಭರ ಭಕ್ತ, ಸಂಜೆ 6.30 ಕ್ಕೆಕ್ಷಣಮಪಿಸಜ್ಜನ ಸಂಗತಿ ರೇಕಾ ಕುರಿತು ಪ್ರವಚನ ಜರಗುವುದು. ಡಾ.ಶಿವಾನಂದ ಭಾರತಿ ಸ್ವಾಮಿಗಳು ಸಾನಿಧ್ಯದಲ್ಲಿ ನೀಡಸೋಸಿ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮಿಗಳು ನೇತೃತ್ವ ವಹಿಸುವರು. ಷಣ್ಮುಖಾರೂಡ ಮಠದ ಶ್ರೀಮದಭಿನವ ಶಿವಪುತ್ರ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ರಾತ್ರಿ 9 ಗಂಟೆಗೆ ಶ್ರೀಗಳಿಗೆ ತೊಟ್ಟಿಲೋತ್ಸವ, ಸುವರ್ಣ ಸಿಂಹಾಸನಾರೋಹಣ, ಕನಕ ಕಿರೀಟಧಾರಣೆ ಜರಗುವುದು.

  ಬುಧವಾರ ದಿ.2 ರಂದು ಬೆಳಿಗ್ಗೆ8.30 ಕ್ಕೆ ಯೋಗಿಯ ನೊಲಿಸಿದೊಡೆ ಇಹಪರ ಸಿದ್ದಿ ಕುರಿತು ಪ್ರವಚನ ಜರುಗುವದು. ಡಾ.ಶಿವಾನಂದ ಭಾರತಿ ಸ್ವಾಮಿಗಳು ಸಾನಿಧ್ಯದಲ್ಲಿ ಬೀದರ ಶಿವಾದ್ವೈತ ಭೂಷಣ ಶಿವಕುಮಾರೇಶ್ವರ ಸ್ವಾಮಿಗಳು ನೇತೃತ್ವ ವಹಿಸುವರು. ಷಣ್ಮುಖಾರೂಡ ಮಠದ ಶ್ರೀಮದಭಿನವ ಶಿವಪುತ್ರ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸುವರು.

  ಮದ್ಯಾಹ್ನ 11.30 ಕ್ಕೆ ಸರ್ವಧರ್ಮ ಸಾಮೂಹಿಕ ವಿವಾಹಗಳ ಸಮಾರಂಭದ ಸನ್ನಿದಿಯನ್ನು ಡಾ.ಶಿವಾನಂದ ಭಾರತಿ ಸ್ವಾಮಿಗಳು ವಹಿಸುವರು. ಶಾಸಕ ಮಹಾಂತೇಶ ಕೌಜಲಗಿ, ಕೆ.ಎಲ್.ಇ.ನಿದರ್ೇಶಕ ಡಾ.ವಿಶ್ವನಾಥ ಪಾಟೀಲ ಉಪಸ್ಥಿತರಿರುವರು. ಪಲ್ಲಕ್ಕಿ ಉತ್ಸವ, ಶ್ರೀಗಳ ರಜತ ರಥೋತ್ಸವ, ಸಂಜೆ ಶಿವಯೋಗೀಶ್ವರ ಮಹಾ ರಥೋತ್ಸವ ಜರಗುವುದು.

   5 ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ ರುದ್ರಾಭಿಷೇಕ, ಮದ್ಭಗವದ್ಗೀತಾ ಪಾರಾಯಣ, ಸಂಘೀತ ಸೇವೆ , ಶ್ರೀಗಳ ತುಲಾಭಾರ, ಮಹಾಪೂಜೆ ಜರುಗುವದು ಎಂದರು. ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ವಿದ್ಯಾಥರ್ಿ, ವಿದ್ಯಾಥರ್ಿನಿಯರಿಂದ ಮನರಂಜನಾ ಕಾರ್ಯಕ್ರಮ ಜರುಗುವುವು.

 ಕುಳ್ಳೂರ ಯಡಳ್ಳಿಯ ಬಸವಾನಂದ ಭಾರತಿ ಸ್ವಾಮಿಗಳು, ಶಿವಾನಂದ ಮಠದ ಮಹಾದೇವ ಸರಸ್ವತಿ ಸ್ವಾಮಿಗಳು, ದಾವಣಗೇರಿ ಶಿವಾನಂದ ಸ್ವಾಮಿಗಳು, ಹರಳಿಕಟ್ಟಿ ನಿಜಗುಣ ಸ್ವಾಮಿಗಳು, ಬುದ್ನಿಯ ಪ್ರಭಾನಂದ ಸ್ವಾಮಿಗಳು, ಮಂಟೂರಿನ ಸದಾನಂದ ಸ್ವಾಮಿಗಳು, ರಾಣೆಬೆನ್ನೂರಿನ ಮಲ್ಲಯ್ಯಾ ಸ್ವಾಮಿಗಳು, ಪೂಣರ್ಾನಂದ ಸ್ವಾಮಿಗಳು, ಹುಬ್ಬಳ್ಳಿಯ ವಾಸುದೇವ ಸ್ವಾಮಿಗಳು, ಷಡಕ್ಷರಿ ಸ್ವಾಮಿಗಳು, ಸಚ್ಚಿದಾನಂದ ಸ್ವಾಮಿಗಳು, ಮಹಾಲಿಂಗಪುರದ ಇಬ್ರಾಹಿಂ ಸಾಹೇಬರು ಸುತಾರ, ಗದಗ ದಯಾನಂದ ಸ್ವಾಮಿಗಳು, ಇಂಡಿ ಸ್ವರೂಪಾನಂದ ಸ್ವಾಮಿಗಳು, ಶಿರಗಾಂವ ಶಿವಾನಂದ ಸ್ವಾಮಿಗಳು, ತೊಂಡಿಕಟ್ಟಿಯ ಅಭಿನವ ವೆಂಕಟೇಶ್ವರ ಸ್ವಾಮಿಗಳು, ಖಂಡೇರಾಯನಹಳ್ಳಿಯ ನಾಗರಾಜಾನಂದ ಸ್ವಾಮಿಗಳು, ಹಿಪ್ಪರಗಿಯ ಶಿವರುದ್ರ ಶರಣರು, ಕುಮಾರ ಸಿದ್ದಾರೂಡರು, ದತ್ತವಾಡದ ಅದೃಶ್ಯನಾಂದ ಮಹಾರಾಜರು, ರೂಗಿಯ ನಿತ್ಯಾನಂದ ಸ್ವಾಮಿಗಳು, ಚಿತ್ರಾಭಾನುಕೋಟೆಯ ಸಹಜಾನಂದ ಸರಸ್ವತಿ ಸ್ವಾಮಿಗಳು, ಅರಕೇರಿ ಮಾಧವಾನಂದ ಸ್ವಾಮಿಗಳು, ಮಾಳಚಾಪುರ ಸದ್ರೂಪಾನಂದ ಸ್ವಾಮಿಗಳು, ತೆಲಗಿ ಪೂಣರ್ಾನಂದ ಭಾರತಿ ಸ್ವಾಮಿಗಳು, ಸಂಗಧರಿ ಗುರುನಾಥ ಮಹಾರಾಜರು, ಬೀದರ ಗಣಪತಿ ಮಹಾರಾಜರು, ಮಲ್ಲಾಪುರದ ಚಿದಾನಂದ ಸ್ವಾಮಿಗಳು, ಚಿಕ್ಕೂರ ಅದ್ವೈತಾನಂದ ಸ್ವಾಮಿಗಳು, ಗುಡಸ ಈಶ್ವರಾನಂದ ಸ್ವಾಮಿಗಳು, ಹಡಗಿನಾಳ ಮಲ್ಲೇಶ್ವರ ಶರಣರು, ಹದಡಿ ಮುರಳಿಧರ ಸ್ವಾಮಿಗಳು, ಬೆಣಕಲಕೊಪ್ಪ ಶಿವಾನಂದ ಸ್ವಾಮಿಗಳು, ಸವಟಗಿ ನಿಂಗಯ್ಯಾ ಸ್ವಾಮಿಗಳು, ಹೊಸಕೋಟಿ ಅಭಿನವ ರೇವಯ್ಯ ಸ್ವಾಮಿಗಳು, ಬೆನಕಟ್ಟಿ ಶಿವಾನಂದ ಸ್ವಾಮಿಗಳು, ಯರಗಟ್ಟಿ ಗಣಪತಿ ಮಹಾರಾಜರು, ಕೆರೂರ ಜ್ಯೋತಿಲರ್ಿಂಗ ಸ್ವಾಮಿಗಳು,  ಹೂಲಗೇರಿ ವೀರಯ್ಯಾ ಸ್ವಾಮಿಗಳು, ಕುಳಲಿ ಶಂಕರರಾನಂದ ಸ್ವಾಮಿಗಳು, ಹೊಸೂರಿನ ಪರಮಾನಂದ ಸ್ವಾಮಿಗಳು ಆಗಮಿಸುವರು. 

  ಮಾತಾಜಿಯವರಾದ ಕಲಬುಗರ್ಿ ಲಕ್ಷ್ಮಿತಾಯಿಯವರು, ದೇವರ ಹುಬ್ಬಳ್ಳಿಯ ಜಾನಮ್ಮ ತಾಯಿಯವರು, ಚಿಕ್ಕಪಡಸಲಗಿ ಅಕ್ಕಮಹಾದೇವಿಯವರು,ಬಾದಾಮಿ ದಯಾಭಾರತಿ ತಾಯಿಯವರು, ಗದಗ ಅಕ್ಕಮಹಾಧೇವಿಯರು, ಅನಗವಾಡಿ ಅನೂಸೂಯಾದೇವಿಯವರು,  ಕಲ್ಲೂರಿನ ಲಲಿತಮ್ಮನವರು, ಮಧನಭಾಂವಿಯ ಶಿವದೇವಿ ತಾಯಿಯವರು ಆಗಮಿಸುವರೆಂದು ತಿಳಿಸಿದರು. 

ಪೊಟೊ ಕ್ಯಾಪ್ಸನ:ಎಚ್23-ಬಿಎಲ್ಎಚ್2

ಬೈಲಹೊಂಗಲ ಸಮೀಪ ಇಂಚಲದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ  ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಬಿ.ಮಲ್ಲೂರ ಮಾತನಾಡಿದರು.