ಮೌಲ್ಯಾಧಾರಿತ ಶಿಕ್ಷಣ ಮಕ್ಕಳಿಗೆ ಅಗತ್ಯ: ದ್ಯಾಮನಕೊಪ್ಪ

ಧಾರವಾಡ 13: ಶಿಕ್ಷಣ ಎಂಬುದು ಮಾನವೀಯತೆಯ ವಿಕಾಸವಾಗಿದೆ. ಮಕ್ಕಳ ಸವರ್ಾಂಗೀಣ ವಿಕಾಸ ಮಾಡುವುದು ಶಿಕ್ಷಣದ ಗುರಿಯಾಗಿದೆ. ಮೌಲ್ಯಾಧಾರಿತ ಶಿಕ್ಷಣ ಮಕ್ಕಳಿಗೆ ಅಗತ್ಯವಾಗಿದೆ. ಶಿಕ್ಷಕ, ಬಾಲಕ, ಪಾಲಕ ಈ ಮೂರು ಜನರು ಶಿಕ್ಷಣದ ಕೊಂಡಿಯಾಗಿ ಕಾರ್ಯ ನಿರ್ವಹಿಸಿದರೆ, ಮಕ್ಕಳು ಪರಿಪೂರ್ಣ ಶಿಕ್ಷಣವನ್ನು ಪಡೆಯಲು ಸಾಧ್ಯ ಎಂದು ಖ್ಯಾತ ಸಾಹಿತಿ ಹಾಗೂ ಚಿಂತಕರೂ ಆದಂತಹ ನಾಗರಾಜ ದ್ಯಾಮನಕೊಪ್ಪ ಹೇಳಿದರು.

ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕೆ ಇ ಬೋಡರ್ಿನ ಸಂ.ಪ.ಪೂ. ಮಹಾವಿದ್ಯಾಲಯ ಪ್ರೌಢ ಶಾಲಾ ವಿಭಾಗ ಮಾಳಮಡ್ಡಿ ಧಾರವಾಡದಲ್ಲಿ, ದಿ.11ರಂದು ಜರುಗಿದ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಸತ್ಕಾರ ಸಮಾರಂಭಕ್ಕೆ  ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.

 ಭಾರತ ಶ್ರೇಷ್ಠವಾದ ಗುರು ಶಿಷ್ಯ ಪರಂಪರೆ, ಹೊಂದಿದ ರಾಷ್ಟ್ರ. ಈ ಸಂಸ್ಥೆಯಲ್ಲಿ ಈ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದು ಶ್ಲಾಘನೀಯ. ವಿದ್ಯಾಥರ್ಿಗಳು ತಮ್ಮ ಗುರುಗಳ ಬಗ್ಗೆ ಗೌರವಹೊಂದಿ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು. ಕಣ್ಣು ತೆರೆದರೆ ಜನನ, ಕಣ್ಣು ಮುಚ್ಚಿದರೆ ಮರಣ, ಕಣ್ಣು ತೆರೆದು ಮುಚ್ಚುವ ಬಗ್ಗೆ ಕಣ್ಣಾಡಿಸುವುದೇ ಜೀವನ. ಮಾನವನ ಅಲ್ಪಕಾಲಿಕ ಜೀವನವನ್ನು ಮೌಲ್ಯದೊಂದಿಗೆ ಕಳೆಯಬೇಕು ಎಂದು ಹೇಳಿದರು.

ಜಾನಪದ ಕಲಾವಿದ ಸಾಂಬಯ್ಯ ಹಿರೇಮಠ ಅವರು ತಮ್ಮ ತಂಡದೊಂದಿಗೆ ಜಾನಪದ ಗೀತೆಗಳನ್ನು ಹಾಡಿ, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಮಾತುಗಳನ್ನು ಆಡಿದರು. 

ಅಧ್ಯಕ್ಷತೆಯನ್ನು ವಹಿಸಿದ್ದ ಕೆ ಇ ಬೋರ್ಡ ಸಂಸ್ಥೆಯ ಕಾಯರ್ಾಧ್ಯಕ್ಷ ಅರುಣ ನಾಡಗೇರ ಅವರು ಮಾತನಾಡಿ-ಕೆ ಇ ಬೋರ್ಡ ಶಾಲೆ ಗತ ವೈಭವವನ್ನು ಹೊಂದಿದ ಶಾಲೆ. ಅನೇಕ ದಾನಿಗಳು ಬಡ ಹಾಗೂ ಅರ್ಹ ವಿದ್ಯಾಥರ್ಿಗಳಿಗಾಗಿ ಶಿಷ್ಯ ವೇತನ, ದತ್ತು ಯೋಜನೆ ಮುಂತಾದ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಅವರಿಗೆ ಸಂಸ್ಥೆಯು ಚಿರಋಣಿಯಾಗಿದೆ ಎಂದು ಹೇಳಿ ವಿದ್ಯಾಥರ್ಿಗಳಿಗೆ ಶುಭಕೋರಿದರು. 

2018 ಏಪ್ರೀಲ್ನಲ್ಲಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯೊಂದಿಗೆ ಉತ್ತೀರ್ಣಗೊಂಡ ಸಾಧಕರನ್ನು ಸತ್ಕರಿಸಲಾಯಿತು. ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷ ಎಸ್. ಎನ್. ಪರಾಂಡೆ ಸರ್, ಪ್ರಾಚಾರ್ಯ ಸುನಿತಾ ಕಡಪಟ್ಟಿ, ಶಾಲಾ ಪ್ರಧಾನಿ ರಚನಾ ಕಟ್ಟಿ, ಕೆ ಇ ಬೋರ್ಡ ಸಂಸ್ಥೆಯ ಸದಸ್ಯ ರಮೇಶ ಸಿದ್ಧಾಂತಿ ಮುಂತಾದವರು ಉಪಸ್ಥಿತರಿದ್ದರು. ಇಂದುಮತಿ ಕಟ್ಟಿ, ವಂದನಾ ಹರಪನಹಳ್ಳಿ, ಅಭಿನಂದನ ಅವರು ಬಹುಮಾನ ಮತ್ತು ಸತ್ಕಾರ ಕಾರ್ಯಕ್ರಮವನ್ನು ನಿರ್ವಹಿಸಿದರು.

ಉಪ ಪ್ರಾಂಶುಪಾಲ ಪ್ರಕಾಶ ಕವಲಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್. ಎನ್. ಸವಣೂರ ಅತಿಥಿಗಳನ್ನು ಪರಿಚಯಿಸಿದರು. ಆನಂದ ಕುಲಕಣರ್ಿ ಮತ್ತು ಬಸವರಾಜ ಪಾಟೀಲ ನಿರ್ವಹಿಸಿದರು. ಮಂಜುಳಾ ಕೋಳಿವಾಡ, ರೋಹಿಣಿ ಚಿಲುಮಿ ಹಾಗೂ ಶಾಲಾ ವಿದ್ಯಾಥರ್ಿಗಳಿಂದ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಸಿ ಬಿ ಮುತ್ತಗಿ ಅವರು ವಂದಿಸಿದರು.