ಮಹಿಳೆಯರ ಮತ್ತು ಮಕ್ಕಳ ಜೀವಿಸುವ ಹಕ್ಕಿಗಾಗಿ ಧ್ವನಿಗೆ ಒಂದಾಗಿ

Unite in voice for the right to life of women and children

ಮಹಿಳೆಯರ ಮತ್ತು ಮಕ್ಕಳ ಜೀವಿಸುವ ಹಕ್ಕಿಗಾಗಿ ಧ್ವನಿಗೆ ಒಂದಾಗಿ  

ಧಾರವಾಡ 08: ಮಹಿಳೆಯರ ಮತ್ತು ಮಕ್ಕಳ ಜೀವಿಸುವ ಹಕ್ಕಿಗಾಗಿ ಧ್ವನಿ ಎತ್ತಿ! ಆರೋಗ್ಯ-ಶಿಕ್ಷಣ-ಸುರಕ್ಷತೆ ಮತ್ತುಆರ್ಥಿಕ ಭದ್ರತೆಯನ್ನು ಖಾತ್ರಿಪಡಿಸಿ!! ಎಂಬ ಘೋಷ ವಾಕ್ಯದೊಂದಿಗೆ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಎ. ಐ. ಎಂ. ಎಸ್‌. ಎಸ್ ಧಾರವಾಡಜಿಲ್ಲಾ ಸಮಿತಿಯಿಂದಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  

ಎ. ಐ. ಎಂ. ಎಸ್‌. ಎಸ್  ನ ರಾಜ್ಯ  ಸೆಕ್ರೆಟರಿಯೆಟ್ ಸದ್ಯಸ್ಯರಾದ ರಶ್ಮಿಯವರು ಮಾತನಾಡುತ್ತ- ಮಾರ್ಚ್‌ 8,1908 ಅಮೆರಿಕದ ನ್ಯೂಯಾರ್ಕ್‌ ನಲ್ಲಿ ಸಿದ್ಧ ಉಡುಪುಕಾರ್ಖಾನೆಯ ಸಾವಿರಾರು ಮಹಿಳಾ ಕಾರ್ಮಿಕರು ಬೀದಿಗಿಳಿದರು. ದುಡಿಯುವ ಸ್ಥಳಗಳಲ್ಲಿ  ಉಸಿರುಗಟ್ಟಿಸುವ ವಾತಾವರಣವನ್ನು ಖಂಡಿಸಿ, ದುಡಿಮೆಯಕಾಲಾವಧಿ ದಿನಕ್ಕೆ ಎಂಟುಗಂಟೆಗೆ ನಿಗದಿಪಡಿಸಬೇಕೆಂದು ಆಗ್ರಹಿಸಿ, ಸಮಾನ ವೇತನಕ್ಕಾಗಿ, ಹೆರಿಗೆಯರಜೆ ಹಕ್ಕಿಗಾಗಿ ಧ್ವನಿ ಎತ್ತಿದರು.  

ಹೋರಾಟನಿರತ ಮಹಿಳಾ ಕಾರ್ಮಿಕರ ಮೇಲೆ ಅಲ್ಲಿನ ಆಳ್ವಿಕರು ಗುಂಡಿನ ಮಳೆಗರೆದರು! ಹೋರಾಟದಕದನದಿಂದ ಹಿಂದೆ ಸರಿಯದಕೆಚ್ಚೆದೆಯ ಮಹಿಳಾ ಕಾರ್ಮಿಕರುಗುಂಡಿಗೆಎದೆಯೊಡ್ಡಿ ನಿಂತರು. ನ್ಯೂಯಾರ್ಕ್‌ ಬೀದಿಗಳು ಕೆಂಪಾದವು! ಈ ಐತಿಹಾಸಿಕ ಹೋರಾಟದ ಸ್ಪೂರ್ತಿ ವಿಶ್ವದಾದ್ಯಂತ ಹಲವು ಮಹಿಳಾ ಹೋರಾಟಗಳಿಗೆ ನಾಂದಿ ಹಾಡಿತು. ಖ್ಯಾತ ಸಮಾಜವಾದಿ ನಾಯಕಿಕ್ಲಾರಾಜೆಟ್‌ಕಿನ್ 1910 ರಅಂತರಾಷ್ಟ್ರೀಯ ಸಮಾಜವಾದಿ ಮಹಿಳಾ ಕಾಂಗ್ರೆಸ್ ನಲ್ಲಿ ಮಾರ್ಚ್‌ 8ನ್ನು ಅಂತರಾಷ್ಟ್ರೀಯ ಮಹಿಳಾ ದಿನವೆಂದು ಘೋಷಿಸಿದರು ಹಾಗೂ ಈ ದಿನದಂದು ಮಹಿಳೆಯರು ತಮ್ಮತಮ್ಮ ದೇಶಗಳಲ್ಲಿನ ವಿವಿಧ ಸಮಸ್ಯೆಗಳ ವಿರುದ್ಧಧ್ವನಿ ಎತ್ತಲುಕರೆ ನೀಡಿದರು! ಅಂದಿನಿಂದ ವಿಶ್ವದಾದ್ಯಂತ ಮಹಿಳೆಯರು ಮಾರ್ಚ್‌ 8ನ್ನು ತಮ್ಮ ಬೇಡಿಕೆಗಳ ವೇದಿಕೆಯನ್ನಾಗಿ ಮಾಡಿಕೊಂಡುಅತ್ಯಂತ ಸ್ಪೂರ್ತಿದಾಯಕ ಹೋರಾಟಗಳಿಗೆ ನಾಂದಿ ಹಾಡುತ ನೆನೆಯುತ್ತಾ ಬಂದಿದ್ದಾರೆಎಂದು ಮಾರ್ಚ್‌ 8ರ ಐತಿಹಾಸಿಕ ಮಹತ್ವವನ್ನು ಹಂಚಿಕೊಂಡರು. 

ಅವರು ಮುಂದುವರೆದು  -ಇವತ್ತಿಗೂ  ಸ್ತ್ರೀ  ಬ್ರೂಣಹತ್ಯೆ, ವರದಕ್ಷಿಣೆ ಕೊಲೆ, ಮರ್ಯಾದೆ ಹತ್ಯೆ, ಅತ್ಯಾಚಾರ-ಗುಂಪು ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಆಸಿಡ್ ದಾಳಿ ಹೀಗೆ ಬ್ರೂಣಾವಸ್ಥೆಯಿಂದ ಹಿಡಿದು ಮಸಣ ಸೇರುವವರೆಗೂ ಹಲವು ಬಗೆಯ ದೌರ್ಜನ್ಯಗಳಿಗೆ ಮಹಿಳೆ ಬಲಿಯಾಗುತ್ತಿದ್ದಾಳೆ. ಇದು ಸಂಭ್ರಮದಆಚರಣೆಯ ದಿನವಲ್ಲ. ಬದಲಿಗೆಮಹಿಳೆಯರ ಮೇಲೆ ದಿನನಿತ್ಯ ನಡೆಯುತ್ತಿರುವ ವಿವಿಧರೀತಿಯಅಗೌರವ -ದೌರ್ಜನ್ಯಗಳಿಗೆ ಕೊನೆಹಾಡುವೆವುಎಂದು ಪಣತೊಡುವ ದಿನ ಎಂದು ಕರೆ ನೀಡಿದರು. 

          ಂಋಖಖ ಜಿಲ್ಲಾಅಧ್ಯಕ್ಷರಾದ ಮಧುಲತಾಗೌಡರ್‌ರವರು ಮಾತನಾಡುತ್ತ -ಇಂದು ಮಹಿಳೆ ಒಂದೆಡೆ ಪುರುಷ ಪ್ರಧಾನಧೋರಣೆಗೆತುತ್ತಾಗುತ್ತಿದ್ದರೆ, ಇನ್ನೊಂದೆಡೆ ಲಾಭದಾಹಿ ಬಂಡವಾಳಶಾಹಿ ವ್ಯವಸ್ಥೆಯಆರ್ಥಿಕ ಶೋಷಣೆಯಿಂದ ತತ್ತರಿಸಿದ್ದಾಳೆ. ಭಾರತದಆರ್ಥಿಕತೆಯಲ್ಲಿ ಶೇ. 93 ರಷ್ಟು ಮಹಿಳೆಯರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆಕನಿಷ್ಠ ಜೀವನ ಭದ್ರತೆಯಿಲ್ಲ. ಜೊತೆಗೆಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ.   ಜೀವನ ನಿರ್ವಹಣೆಯ ಅನಿವಾರ್ಯತೆಯಿಂದ ಮಹಿಳೆಯರು ಸಾಲದ ಶೂಲದಲ್ಲಿ ಸಿಲುಕಿದ್ದಾರೆ. ಪರಿಣಾಮವಾಗಿರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ ಕಿರುಕುಳದಿಂದ ತಲೆಮರಿಸಿಕೊಳ್ಳಲು ಊರುಗಳನ್ನು ತೊರೆಯುವ, ಆತ್ಮಹತ್ಯೆ ಮೊರೆ ಹೋಗುವವರ ಸಂಖ್ಯೆ ದಿನೇ-ದಿನೇ ಹೆಚ್ಚುತ್ತಿದೆ. ಕ್ರೂರ ವ್ಯವಸ್ಥೆಯ ಭಾಗವಾಗಿರುವ ಸರ್ಕಾರಗಳು ಸಾರ್ವಜನಿಕ ಶಿಕ್ಷಣ -ಆರೋಗ್ಯ ಕ್ಷೇತ್ರಗಳನ್ನು ಹರಾಜಿಗಿಟ್ಟಿವೆ. ನೂರಾರು ಬಾಣಂತಿಯರ ಸಾವು-ಶಿಶು ಮರಣ ಹದಗೆಟ್ಟ ಸಾರ್ವಜನಿಕಆರೋಗ್ಯ ವ್ಯವಸ್ಥೆಗೆ ಹಿಡಿದಕೈಗನ್ನಡಿಯಾಗಿದೆ. ಪ್ರಜಾತಾಂತ್ರಿಕ ಮೌಲ್ಯಗಳನ್ನು ಎತ್ತಿ ಹಿಡಿಯುತ್ತ ಮಹಿಳೆಯರು ಕಾರ್ಮಿಕ ವರ್ಗದಜೊತೆ ಸೇರಿ ಅಸ್ತಿತ್ವದಲ್ಲಿರುವ ಶೋಷಿತ ಬಂಡವಾಳಶಾಹಿ ವ್ಯವಸ್ಥೆಗೆ ಕೊನೆ ಹಾಕಬೇಕಿದೆ. ಎಲ್ಲರೂ ಪರಸ್ಪರ ಗೌರವಗಳಿಂದ ಬಾಳುವ ಹೊಸ ಸಮಾಜವನ್ನುತರುವ ದಿಕ್ಕಿನಲ್ಲಿ ಸಾಗಬೇಕಿದೆಎಂದರು. 

         ಎ ಐ ಎಮ್‌ಎಸ್‌ಎಸ್ ನ ಜಿಲ್ಲಾ ಕಾರ್ಯದರ್ಶಿಗಳಾದ ಗಂಗೂಬಾಯಿ ಕೊಕರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಜಿಲ್ಲಾಉಪಾಧ್ಯಕ್ಷೆದೇವಮ್ಮದೇವತ್ಕಲ್, ಜಿಲ್ಲಾಕಾರ್ಯಕಾರಿ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು. ವಿವಿಧ ಹಳ್ಳಿ ಹಾಗೂ ಬಡಾವಣೆಗಳ ಮಹಿಳೆಯರು ಭಾಗವಹಿಸಿದ್ದರು.