ಅದ್ಧೂರಿಯಾಗಿ ನೆರವೇರಿದ ಜಗದ್ಗುರು ಪಂಚಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ
ಕೊಟ್ಟೂರು 04: ಕೊಟ್ಟೂರು ನಗರದಲ್ಲಿ ಗುರುವಾರ ಆದಿ ಜಗದ್ಗುರು ಪಂಚಾಚಾರ್ಯರ ಯುಗಮನೋತ್ಸವ ಹಾಗೂ ಡಾ.ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳವರ ಷಷ್ಠಿ ಸಂಭ್ರಮ ಪ್ರಯುಕ್ತ ಜಗದ್ಗುರು ಪಂಚಾಚಾರ್ಯ ಮಹಾ ಸನ್ನಿಧಿಯವರ ಅಡ್ಡ ಪಲ್ಲಕ್ಕಿ ಮಹೋತ್ಸವವನ್ನು ಸಮಿತಿಯ ಕಾರ್ಯಧ್ಯಕ್ಷರಾದ ಎಂ.ಎಂ.ಜೆ. ಹರ್ಷವರ್ಧನ್ ನೇತೃತ್ವದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಸಾವಿರಾರು ಭಕ್ತರು ಸೇರಿದಂತೆ ವಿವಿಧ ವಾದ್ಯಗೋಷ್ಠಿಗಳು , 1008 ಸುಮಂಗಲೆಯರ ಕುಂಭ ಮೇಳದ ದೃಶ್ಯ ನೋಡುವ ಭಕ್ತರ ಪ್ರಮುಖ ಅರ್ಕಷಣೆಯಾಗಿತ್ತು ಸತತ 5-6 ತಾಸುಗಳ ಕಾಲ ಕುಂಭ ಹೊತ್ತು ಭಕ್ತಿಯ ಪರಕಾಷ್ಠೆ ತೋರಿದ್ದು ಎಲ್ಲರಿಗೂ ಭಕ್ತಿಯ ಅರ್ಕಷಣೆಯಾಗಿತ್ತು ದಾರಿ ಉದ್ದಕ್ಕೂ ಭಕ್ತರು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಜಯ ಘೋಷ ಎಲ್ಲಡೆ ಪಸರಿಸಿತ್ತು ಉಜ್ಜಿನಿ ಜಗದ್ಗುರುಗಳು, ಶ್ರೀಶೈಲ ಜಗದ್ಗುರುಗಳು, ಕಾಶಿ ಜಗದ್ಗರುಗಳಿಗೆ ಜಯಕಾರ ಹಾಕುತ್ತಾ ಸಾಗಿದ ಅಡ್ಡಪಲ್ಲಕ್ಕಿ ಮಹೋತ್ಸವ ಕೊಟ್ಟೂರಿನ ಇತಿಹಾಸದಲ್ಲೇ ಶಾಶ್ವತವಾಗಿ ಉಳಿಯಿತು.
ಬೆಳ್ಳಿಗ್ಗೆ 5 ರಿಂದಲೇ ಪ್ರಾರಂಭವಾದ ಜಗದ್ಗುರು ಪಂಚಾಚಾರ್ಯ ಮಹಾ ಸನ್ನಿಧಿಯವರ ನೇತೃತ್ವದಲ್ಲಿ ಡಾ. ಸಿದ್ಧಲಿಂಗ ಶಿವಚಾರ್ಯ ಸ್ವಾಮಿಗಳ ಷಷ್ಠಿ ಪೂರ್ತಿ ಪ್ರಯುಕ್ತ ಹರಿದ್ರಾ ಲೇಪನ ಪುಣ್ಯಸ್ನಾನ ಹಾಗೂ ಮಂಗಲ ಕಾರ್ಯಕ್ರಮವು ನೆಡೆದವು. ಕಾರ್ಯಕ್ರಮ ಯಶ್ವಸ್ವಿ ಗೊಳಿಸಿದ ಪ್ರತಿಯೊಬ್ಬರಿಗೂ ಡೋಣೂರು ಚಾನುಕೋಟಿ ಮಠದ ಶ್ರೀಗಳು ಧನ್ಯವಾದ ಅರ್ಿಸಿ, ಅರ್ಶಿವದಿಸಿದ್ದಾರೆ
ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ಮಾಜಿ ಸಚಿವರಾದ ಶ್ರೀರಾಮುಲು, ಕ್ಷೇತ್ರದ ಶಾಸಕರಾದ ನೇಮಿರಾಜನಾಯ್ಕ, ಕಾರ್ಯಧ್ಯಕ್ಷರಾದ ಎಂ.ಎಂ.ಜೆ. ಹರ್ಷವರ್ಧನ್, ಬಿ.ಡಿ.ಸಿ.ಸಿ.ಬ್ಯಾಂಕ್ ಉಪಾಧ್ಯಕ್ಷರಾದ ಐ.ಎಂ.ದಾರುಕೇಶ್, ಎಂ.ಎಂ.ಜೆ. ಶೋಭಿತ್, ಸಿದ್ದಯ್ಯ ಗುರುಜೆರಾಕ್ಸ್ ಕೊಟ್ರೇಶ್, ಚನ್ನಮಲ್ಲಿಕಾರ್ಜುನ, ಎನ್.ಎಂ. ಕೊಟ್ರಯ್ಯ ಗುರುಶಾಂತಪ್ಪ, ಕೆ.ಎಸ್. ಈಶ್ವರಗೌಡ, ಪಿ.ಹೆಚ್. ದೊಡ್ಡರಾಮಣ್ಣ , ಕರಡಿಕೊಟ್ರಯ್ಯ, ಆರ್.ಎಂ.ಗುರು ಕೊಟ್ರೇಶ್, ಹಳ್ಳಿಸುರೇಶ್, ಕೆ.ಮಂಜುನಾಥಗೌಡ, ಟಿ.ನೀಲಕಂಠಯ್ಯ , ಹರಪನಹಳ್ಳಿ ಗುರುಬಸವರಾಜ, ಅಟವಾಳ್ಗಿ ಸಂತೋಷ, ಮಹಾಂತೇಶ್, ಭೋಜರಾಜ, ಅಜ್ಜನಗೌಡ, ಮತ್ತಿಹಳ್ಳಿ ನಾಗರಾಜ ಸೇರಿದಂತೆ, ಸಮಿತಿ ಅಧ್ಯಕ್ಷರಾದ ಚಾಪಿ ಚಂದ್ರ್ಪ, ಆರ್.ಎಂ. ಶಿವಾನಂದಯ್ಯ, ಬಿ.ಎಸ್. ವೀರೇಶ್, ಎಂ.ಮಂಜುನಾಥ, ಸೇರಿದಂತೆ ಸಾವಿರಾರು ಮಠದ ಭಕ್ತರು ಸೇರಿದಂತೆ ಸರ್ವ ಜನಾಂಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿ 13ನೇ ದಿನದ ಅಡ್ಡಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮವನ್ನು ಅತ್ಯಂತ ಯಶ್ವಸ್ವಿ ಗೊಳಿಸಿದರು, ಕೊಟ್ಟೂರು ಇತಿಹಾಸದಲ್ಲೇ ಇದೊಂದು ಮರೆಲಾಗದ ಅದ್ದೂರಿ ಕಾರ್ಯಕ್ರಮವಾಗಿತ್ತು, ಯಾವುದೇ ಧಾರ್ಮಿಕ ಕಾರ್ಯಕ್ರಮ 13 ದಿನಗಳ ಕಾಲ ನೆಡೆಸುವುದು ಹುಡುಗಾಟದ ಮಾತಲ್ಲ ಎಂಬುದು ಅನೇಕ ಬುದ್ದಿಜೀವಿಗಳ ಭಕ್ತರ ಅಭಿಪ್ರಾಯವಾಗಿತ್ತು,.
ಒಟ್ಟಾರೆ ಈ ಕಾರ್ಯಕ್ರಮದ ಮೂಲಕ ಕೊಟ್ಟೂರು ಜನತೆಗೆ ಹಾಗೂ ಸುತ್ತು ಮುತ್ತಲಿನ ಎಲ್ಲಾ ಭಕ್ತಾಧಿಗಳಿಗೆ ಒಂದು ಸ್ಪಷ್ಟ ಸಂದೇಶ ರವಾನಿಸಿದಂತೆ ಇತ್ತು, ಧಮೋ ರಕ್ಷಿತಾ, ರಕ್ಷತ: ಧರ್ಮವನ್ನು ನಾವು ಕಾಪಾಡಿದರೇ ಧರ್ಮ ನಮ್ಮನು ಕಾಪಡುತ್ತದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತು. 13 ದಿನಗಳ ಕಾಲ ಕೊಟ್ಟೂರು ನಗರದಲ್ಲಿ ಹಬ್ಬದ ವಾತವಾರಣ ಮನೆ ಮಾಡಿತ್ತು. ಕೊನೆ ದಿನವಾದ ಗುರುವಾರ ಅಡ್ಡಪಲ್ಲಕ್ಕಿ ಮಹೋತ್ಸವ ನಂತರ ತಾಲೂಕು ಕ್ರೀಡಾಂಗಣದಲ್ಲಿ ಧರ್ಮಸಭೆಯನ್ನು ಅಯೋಜಿಸಲಾಗಿತ್ತು. ಕಾರ್ಯಕ್ರಮದ ಪ್ರಸಾದ ವ್ಯವಸ್ಥೆಯನ್ನು ಕೆ.ಎಂ.ಎಫ್ ಅಧ್ಯಕ್ಷರಾದ ಎಸ್.ಭಿಮನಾಯ್ಕ ಹಾಗೂ ಬಳ್ಳಾರಿ ಸಂಸದರಾದ ತುಕಾರಾಂ ವಹಿಸಿಕೊಂಡು ಯಶ್ವಸ್ವಿಗೊಳಿಸಿದರು
ಕಾರ್ಯಕ್ರಮವನ್ನು 13 ದಿನಗಳ ಕಾಲ ಕೊಟ್ಟೂರು ನಗರದಲ್ಲಿ ಯಶಸ್ವಿಯಾಗಿ ನೆರವೇರಿಸಿ ಕೊಟ್ಟಿದ್ದಕ್ಕೆ ಕೊಟ್ಟೂರು ಮಹಾಜನತೆಗೇ ಹಾಗೂ ಸುತ್ತು ಮುತ್ತಲಿನ ಮಠದ ಭಕ್ತಾಧಿಗಳಿಗೆ ಹಾಗೂ ನಾಗರೀಕರಿಗೆ ಪ್ರತ್ಯಕ್ಷವಾಗಿ , ಪರೋಕ್ಷವಾಗಿ ಸಹಕಾರ ನೀಡಿದ ಪ್ರತಿಯೊಬ್ಬರಿಗೆ ಸಮಿತಿಯ ಕಾರ್ಯಧ್ಯಕ್ಷರಾದ ಎಂ.ಎಂ.ಜೆ ಹರ್ಷವರ್ಧನ್ ಸಂತಷ ವ್ಯಕ್ತಪಡಿಸುತ್ತಾ ಧನ್ಯವಾದ ಹೇಳುವುದರ ಮೂಲಕ ನನ್ನ ಜೀವಮಾನದಲ್ಲೇ 13 ದಿನಗಳ ಕಾಲ ಇಂಥಹ ಧಾರ್ಮಿಕ ಕಾರ್ಯಕ್ರಯ ನೋಡಿರಲಿಲ್ಲವೆಂದು ಹೇಳುತ್ತಾ, ಎಲ್ಲಾ ಮಠಾಧೀಶ್ವರರಿಗೆ ನಮಸ್ಕಾರ, ಧನ್ಯವಾದ ತಿಳಿಸಿರುತ್ತಾರೆ.