ನಗರಸಭೆಯ ಅಧಿಕಾರಿಗಳ ದಿಟ್ಟ ಹೆಜ್ಜೆ

ಲೋಕದರ್ಶನ ವರದಿ

ಕಾರವಾರ 17: ನಗರದ ಮಾಲಾದೇವಿ ಮೈದಾನದ  ಎದುರಿನ ನಗರಸಭೆ ಒಡೆತನದ ಬೃಹತ್  ಕಟ್ಟಡವನ್ನು ನಗರಾಭಿವೃದ್ಧಿಕೋಶದ ಕಾರ್ಯನಿವರ್ಾಹಕ ಎಂಜಿನಿಯರ್ ಎಸ್.ಪಿ.ವಿರಕ್ತಿಮಠ ಮಾರ್ಗದರ್ಶನದಲ್ಲಿ ನಗರಸಭೆ ಪೌರಾಯುಕ್ತರು ಹಾಗೂ ಅಧಿಕಾರಿಗಳು ಸೋಮವಾರ ವಶಕ್ಕೆ ಪಡೆದರು. ಇಡೀ ದಿನ ಕಾಯರ್ಾಚರಣೆ ಮಾಡಿ ಕಟ್ಟಡದಲ್ಲಿದ್ದ ಪೀಠೋಪಕರಣಗಳನ್ನು ಸಹ ನಗರಸಭೆಯ ಅಧೀನಕ್ಕೆ ತೆಗೆದುಕೊಂಡರು. 

ಪೊಲೀಸ್ ಭದ್ರತೆಯೊಂದಿಗೆ ನಗರಸಭೆ ಪೌರಾಯುಕ್ತ ಎಸ್.ಯೋಗೇಶ್ವರ ಹಾಗೂ  ನಗರಸಭೆಯ ಕಾರ್ಯನಿವರ್ಾಹಕ ಎಂಜಿನಿಯರ್ ಮೋಹನ್ ರಾಜ್  ನಡೆದ ಕಾಯರ್ಾಚರಣೆಯಲ್ಲಿ ನಗರಸಭೆ ಸಿಬ್ಬಂದಿಗಳಿಂದ ಅಂಗಡಿಯೊಳಗಿನ ಪೀಠೋಪಕರಣಗಳನ್ನು ಹೊರ ತರಲಾಯಿತು. ಈ ಸಂದರ್ಭದಲ್ಲಿ ಅಕ್ರಮವಾಗಿ ಅಂಗಡಿ ನಡೆಸುತ್ತಿದ್ದವರ  ಸಂಬಂಧಿಗಳು ಹಾಗೂ  ಸಮಾಜ ಸೇವಕರೋರ್ವರು  ವಿರೋಧ ವ್ಯಕ್ತಪಡಿಸಿ ನಗರಸಭೆಯ ಕಾಯರ್ಾಚರಣೆಗೆ ಅಡ್ಡಿ ಪಡಿಸಲು ಪ್ರಯತ್ನಿಸಿದರು. ಅಧಿಕಾರಿಗಳ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಯವರಿಗೆ ದೂರು ನೀಡುವುದಾಗಿ ಬೆದರಿಕೆ ಹೇಳಿದರು. ಇದಕ್ಕೆ ಪ್ರತಿಯಾಗಿ ಕಾನೂನು ಪ್ರಕಾರ ಕೆಲಸ ಮಾಡುತ್ತಿದ್ದೇವೆ. ಕರ್ತವ್ಯಕ್ಕೆ ಅಡ್ಡಿಪಡಿಸಬೇಡಿ ಎಂದು ಪೋಲೀಸರ ಸಮ್ಮುಖದಲ್ಲಿ ಅಧಿಕಾರಿಗಳು ಹೇಳಿದರು. ಅನ್ಯರ ಒತ್ತಡಕ್ಕೆ ಬಗ್ಗದೇ ನಗರಾಭಿವೃದ್ಧಿಕೊಶ ಮತ್ತು ನಗರಸಭೆಯ ಅಧಿಕಾರಿಗಳ ತಂಡ ಕಟ್ಟಡದೊಳಗಿನ ಸಾಮಾಗ್ರಿ ಖುಲ್ಲಾಪಡಿಸಿ, ಕಟ್ಟಡವನ್ನು ನಗರಸಭೆಯ ವಶಕ್ಕೆ ಪಡೆದರು.

ನಗರದ ಮಾಲಾದೇವಿ ಮೈದಾನದ ಬಳಿಯ ಜಿಲ್ಲಾ ರಂಗಮಂದಿರದ ಎದುರು ತರಕಾರಿ ಮತ್ತು ಪ್ಲವರ್ ಮಾಕರ್ೆಟ್ ಉದ್ದೇಶಕ್ಕೆ ಕನರ್ಾಟಕ ನಗರಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆ (ಕೆಯುಐಡಿಎಫ್ಸಿ) ನಿಧಿಯ ನೆರವಿನಿಂದ 2006 ರಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣದ ಕಟ್ಟಡವನ್ನು ನಿಮರ್ಿಸಲಾಗಿತ್ತು. ನಗರಸಭೆಗೆ ಸೇರಿದ ವಾಣಿಜ್ಯ ಮಳಿಗೆಯನ್ನು ಸುಮಾರು 12 ವರ್ಷಗಳ ಹಿಂದೆ ಗಜಾನನ.ಆರ್.ರಾವ್ ಎಂಬುವವರಿಗೆ ಪ್ರತಿತಿಂಗಳು 10,000 ರೂ. ಬಾಡಿಗೆಯನ್ನು ಕೊಡಬೇಕು. 1.5 ಲಕ್ಷ ರೂ.ಠೇವಣಿ ಇಡಬೇಕು. ಪ್ರತಿ ಮೂರು ವರ್ಷಕ್ಕೆ  ಒಮ್ಮೆ ಕಟ್ಟಡದ ಬಾಡಿಗೆ ಹೆಚ್ಚಳ ಮಾಡುವ ಕರಾರಿಗೆ ಒಳಪಟ್ಟು ಅಂಗಡಿ ನಡೆಸಲು ನೀಡಲಾಗಿತ್ತು. ಆದರೆ ಅವರು ಕಾನೂನು ಬಾಹೀರವಾಗಿ ಮತ್ತೊಬ್ಬ ಉದ್ಯಮಿಗೆ ಪಿಠೋಪಕರಣ ಅಂಗಡಿ ನಡೆಸಲು ನೀಡಿದ್ದರು.

ಠೇವಣಿ ಇಟ್ಟಿರಲಿಲ್ಲ:

ಮೂಲ ಬಾಡಿಗೆದಾರ ಗಜಾನನ ರಾವ್ ಅವರು ನಗರಸಭೆಗೆ ಸಲ್ಲಿಸಬೇಕಿದ್ದ ಠೇವಣಿ ಮತ್ತು ಕರಾರು ಪತ್ರಗಳನ್ನು ಹಾಗೂ ಬಾಡಿಗೆ ಸಹ ಸಂದಾಯ ಮಾಡಿರಲಿಲ್ಲ. ಇದುವರೆಗೆ ಕಟ್ಟಡಕ್ಕೆ ಬರಬೇಕಾದ ಬಾಡಿಗೆ ಹಣ ಹಾಗೂ ದಂಡ ಸಹಿತ ಕಟ್ಟಿಲ್ಲ. ಈಗ ಬಾಡಿಗೆದಾರನಿಂದ ಅಂದಾಜು 35 ಲಕ್ಷ ರೂ. ಬಾಕಿ ಇರುವ ಹಿನ್ನೆಲೆಯಲ್ಲಿ ಕಟ್ಟಡದೊಳಗಿನ ಅಂಗಡಿಯ ಸರಂಜಾಮುಗಳನ್ನು ಖಾಲಿ ಮಾಡಲು ನಗರಸಭೆಯು ಶನಿವಾರವೇ  ನೋಟೀಸ್ ಜಾರಿ ಮಾಡಿತ್ತು.

ನೂತನ ಕಟ್ಟಡ ನಿಮರ್ಾಣಕ್ಕಾಗಿ ಹಳೆಯ  

ಕಚೇರಿ ಸ್ಥಳಾಂತರ:

ನಗರಸಭೆಯ ಹಳೆಯ ಕಟ್ಟಡ ಕೆಡವಿ ನೂತನ ಕಟ್ಟಡ ನಿಮರ್ಾಣಮಾಡಬೇಕಾದ ಹಿನ್ನೆಲೆಯಲ್ಲಿ, ಇಂದು ವಶಕ್ಕೆ ಪಡೆದ ನಗರಸಭೆಯ ಒಡೆತನದ ಕಟ್ಟಡಕ್ಕೆ ನಗರ ಸಭೆಯ ಕಚೇರಿ ಸ್ಥಳಾಂತರವಾಗಲಿದೆ ಎಂದು ನಗರಸಭೆಯ ಅಧಿಕಾರಿಗಳು ಇದೇ ವೇಳೆ ಹೇಳಿದರು. ನಗರದ ಮಧ್ಯೆ ಇರುವ ಕಾರಣ ಜನರಿಗೆ ಸಹ ಇದರಿಂದ ಅನುಕೂಲವಾಗಲಿದೆ ಎಂದು ಅವರು ಸ್ಥಳದಲ್ಲಿದ್ದ ಮಾಧ್ಯಮಗಳಿಗೆ ವಿವರಿಸಿದರು.

ತರಕಾರಿ ಮಾರುಕಟ್ಟೆಯ ಕತೆ:

ನಗರಸಭೆಯ ಕೋಟ್ಯಾಂತರ ಮೌಲ್ಯದ ಈ ಆಸ್ತಿಯನ್ನು ಕಾನೂನು ಬಾಹೀರವಾಗಿ ಬಾಡಿಗೆದಾರರಿಗೆ ನೀಡಲಾಗಿತ್ತು. 2006 ರಲ್ಲಿ ಅಂದಿನ ಪೌರಾಯುಕ್ತರು ನಗರಸಭೆಯ ಕೆಲ ಆಸ್ತಿಗಳನ್ನು ಕೆಲವರಿಗೆ  ಲೀಜ್ ಮೇಲೆ ನೀಡಿದ್ದರು. ಆದರೆ ಕರಾರು ಪತ್ರ,ಠೇವಣಿ,ಬಾಡಿಗೆ ಇಲ್ಲದೇ ಮೂಲ ಬಾಡಿಗೆದಾರರು ಬೇರೆಯವರಿಗೆ ಪೀಠೋಪಕರಣ ಅಂಗಡಿ ನಡೆಸಲು ಅಕ್ರಮವಾಗಿ ಪರಭಾರೆ ಮಾಡಿದ್ದರು. ಈ ಪ್ರಕರಣವನ್ನು ಹಾಲಿ ಪೌರಾಯುಕ್ತ ಎಸ್.ಯೋಗೇಶ್ವರ ಬೆಳಕಿಗೆ ತಂದು ಕೋಟ್ಯಾಂತರ ರೂ.ಬೆಲೆ ಬಾಳುವ ನಗರಸಭೆಯ ಆಸ್ತಿಯನ್ನು ಮರಳಿ ನಗರಸಭೆಯ ವಶಕ್ಕೆ ಪಡೆದಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೇರೆಡೆ ಇರುವ ನಗರಸಭೆ ಆಸ್ತಿ ವಶಕ್ಕೆ ಕ್ರಮ..

ನಗರದಲ್ಲಿ ನಗರಸಭೆಯ ಮಾಲೀಕತ್ವದ ಇಂತಹ ಹಲವಾರು ಕಟ್ಟಡಗಳು ಪ್ರಭಾವಿ ಜನರ ವಶದಲ್ಲಿವೆ. ಪ್ರಭಾವಿಗಳು  ನ್ಯಾಯಾಲಯಗಳ ಮೂಲಕ ತಡೆಯಾಜ್ಞೆ ತಂದು, ನಗರಸಭೆಯ ಆಸ್ತಿಯನ್ನು ನಗರಸಭೆಗೆ ಮರಳಿಸದೇ ದಿನದೂಡುತ್ತಿದ್ದಾರೆ. ತಡೆಯಾಜ್ಞೆ ತೆರುವುಗೊಂಡ ಬಳಿಕ ಅವೆಲ್ಲವುಗಳನ್ನು ಮುಂದಿನ ವಾರದೊಳಗೆ ಇದೇ ರೀತಿಯ ಕಾಯರ್ಾಚರಣೆ ಮೂಲಕ ನಗರಸಭೆಯ ವಶಕ್ಕೆ ಪಡೆಯಲಾಗುವುದು ಎಂದು ಪೌರಾಯುಕ್ತ ಎಸ್.ಯೋಗೇಶ್ವರ ಹೇಳಿದರು.