ಲೋಕದರ್ಶನ ವರದಿ
ಬೆಳಗಾವಿ, 6: ಒಂದು ದೇಶ ತನ್ನ ಸಮಸ್ಯೆಗಳಿಂದ ಮುಕ್ತಿ ಹೊಂದಬೇಕಾದರೆ ಶಿಕ್ಷಣವು ಜ್ಞಾನದ ಆಧಾರದ ಮೇಲೆ ನಡೆಯಬೇಕು ಮತ್ತು ಇಂದಿನ ಜ್ಞಾನದ ಆಥರ್ಿಕತೆಯ ಕಾಲಘಟ್ಟದಲ್ಲಿ ಜ್ಞಾನ ಎನ್ನುವುದು ಉತ್ತಮ ಶಿಕ್ಷಣದಿಂದ ಬರುತ್ತದೆ ಮತ್ತು ವಿವೇಕಾನಂದರ ಆಶಯವವು ಇದೆ ಆಗಿತ್ತೆಂದು ಬೆಳಗಾವಿಯ ಶ್ರೀ ರಾಮಕೃಷ್ಣ ಆಶ್ರಮದ ಮೋಕ್ಷಾತ್ಮಾನಂದ ಜಿ ಸ್ವಾಮೀಜಿ ಹೇಳಿದರು. ಬೆಳಗಾವಿಯ ಭರತೇಶ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಸಂಸ್ಥಾಪಕರ ದಿನ ದಂದು ಸಾನಿಧ್ಯ ವಹಿಸಿ ಮಾತನಾಡಿದ ಅವರು ಭಾರತದ ಪರಂಪರೆ, ಸಂಸ್ಕೃತಿ ಮತ್ತು ಇಲ್ಲಿಯ ವ್ಯೆಕ್ತಿಗಳ ಪರಿಚಯ ಎಲ್ಲರಿಗೂ ಮುಟ್ಟಬೇಕು. ಮಾನವ ಸಂಪನ್ಮೂಲ ಬಹಳ ಅಮೂಲ್ಯ ವಾದ ಸಂಪನ್ಮೂಲ ಯಾವುದೇ ಒಂದು ಸಂಸ್ಥೆ ಬೆಳೆಯಬೇಕಾದರೆ ಅದು ಅಲ್ಲಿಯ ಉದ್ಯೋಗಿಗಳ ಮೇಲೆ ಅಂದರೆ ಆ ಸಂಸ್ಥೆಯ ಮಾನವ ಸಂಪನ್ಮೂಲ ದ ಮೇಲೆ ಅವಲಂಬಿತ ವಾಗಿರುತ್ತದೆ. ಭರತೇಶ ಶಿಕ್ಷಣ ಸಂಸ್ಥೆಯಲ್ಲಿ ಒಂದು "ಣಟಚಿಟಿ ಜಥಛಿಜಟಟಜಟಿಛಿಜ" ಸೆಂಟರ್ ನ್ನು ತೆರೆಯಬೇಕೆಂದು ಸಲಹೆ ನೀಡಿದರು. ಸಾವು ಇರುವುದು ದೇಹಕ್ಕೆ ಮಾತ್ರ ಆತ್ಮಕ್ಕಲ್ಲ ಆದ್ದರಿಂದ ಧ್ಯಾನದ ಅವಶ್ಯಕತೆ ಇಂದಿನ ಯುಗಕ್ಕಿದೆ ಮತ್ತು ಆಧ್ಯಾತ್ಮಿಕ ಧ್ಯಾನದಿಂದ ಮಾನವ ಏನನ್ನಾದರೂ ಸಾಧಿಸಬಹುದು ಎಂದು ಹೇಳಿದರು. ಸ್ವ ಪ್ರಯತ್ನ ಮತ್ತು ನಂಬಿಕೆಗಳಿಂದ ವಿವಿಧ ರೀತಿಯ ಯೋಜನೆಗಳನ್ನು ರೂಪಿಸಿ ವಿದ್ಯಾಥರ್ಿಗಳು ತಮ್ಮ ಜೀವನ ದಲ್ಲಿ ಸಾಧಿಸಬೇಕೆಂದು ಕಿವಿಮಾತು ಹೇಳಿದರು. ಎಲ್ಲ ನಾಗರಿಕರು ತಮ್ಮ ಒಳ್ಳೆಯ ಗುಣ, ಆಚಾರ, ವಿಚಾರ, ಮತ್ತು ಜ್ಞಾನದಿಂದ ಭಾರತದ ರಾಯಭಾರಿಗಳಾಗಬೇಕೆಂದು ಆಶಯ ವ್ಯೆಕ್ತ ಪಡಿಸಿದರು. ಇದೆ ಸಂದರ್ಭದಲ್ಲಿ 2018 ರ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶಿವಾನಂದ ಕೌಜಲಗಿ ಅವರನ್ನು ಸನ್ಮಾನಿಸಲಾಯಿತು ಸನ್ಮಾನ ಸ್ವೀಕರಿಸಿ ಮಾತನಾಡಿದ ಕೌಜಲಗಿಯವರು ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ನನಗಲ್ಲ ಇದು ಬೆಳಗಾವಿ ಜಿಲ್ಲೆಯ ಎಲ್ಲ ಜನರಿಗೆ ಸಿಕ್ಕಿದೆ ಎಂದು ಹೇಳಿದರು. ಭರತೇಶ ಶಿಕ್ಷಣ ಸಂಸ್ಥೆ ಇಂದು ಈ ರೀತಿ ಹೆಮ್ಮರವಾಗಿ ಬೆಳೆಯಬೇಕಾದರೆ ಇದನ್ನು ಪ್ರಾರಂಭಿಸಿದ ಕೋಮಲಣ್ಣ ದೊಡ್ಡಣ್ಣವರ ಅವರ ದೂರದೃಷ್ಟಿತ್ವ ಎದ್ದು ಕಾಣುತ್ತಿದೆ ಮತ್ತು ಸಂಸ್ಥೆ ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದರು. ಇದೆ ಸಂದರ್ಭದಲ್ಲಿ ಬೆಳಗಾವಿಯ ಪ್ರಸಿದ್ಧ ಉದ್ಯಮಿ ಬಾಳಾಸಾಹೇಬ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಪ್ರಾಸ್ತಾವಿಕವಾಗಿ ವಿನೋದ ದೊಡ್ಡಣ್ಣವರ ಅವರು ಮಾತನಾಡಿ ಭರತೇಶ ಶಿಕ್ಷಣ ಸಂಸ್ಥೆ ನಡೆದು ಬಂದ ದಾರಿ ಮತ್ತು ಸಾಧನೆಗಳನ್ನು ವಿವರಿಸಿ ಎಲ್ಲರನ್ನು ಸ್ವಾಗತಿಸಿದರು. ಮತ್ತು ಕೊಡಗು ಜಿಲ್ಲೆಯ ಪ್ರಕ್ರತಿ ವಿಕೋಪಕ್ಕೆ ಭರತೇಶ ಶಿಕ್ಷಣ ಸಂಸ್ಥೆಯ ಕೊಡುಗೆಯನ್ನು ಹೇಳಿದರು. ರಾಜೀವ ದೊಡ್ಡಣ್ಣವರ ಅವರು ಮಾತನಾಡಿ 2019 ರುದ್ದಕ್ಕೂ ನಡೆಯುವ ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮಗಳನ್ನು ವಿವರಿಸಿದರು. ಸಂಸ್ಥೆಗೆ ಸಹಾಯ ಸಹಕಾರ ನೀಡುತ್ತಾ ಬಂದಿರುವ ಮತ್ತು ಸಮಾಜ ಸೇವೆಯಲ್ಲಿ ತಮ್ಮದೇ ಕೊಡುಗೆ ನೀಡಿರುವ ಗಣ್ಯರಾದ ಕುಬೇರ್ ಹಂಜಿ, ಎಸ್. ಜಿ. ಹಂಜಿ, ಸುರೇಶ ಕುಲಕಣರ್ಿ, ಕುಂತಿನಾಥ ಕಲ್ಮನಿ ಮತ್ತು ಸೂರಜ್ ಗಾವಳಿ ಅವರನ್ನು ಸನ್ಮಾನಿಸಲಾಯಿತು. ಇದೆ ಸಂದರ್ಭದಲ್ಲಿ ಸಂಸ್ಥೆಯಲ್ಲಿ 25 ವರ್ಷಗಳಿಂದ ಸೇವೆ ಸಲ್ಲಿಸಿದ ಮತ್ತು ಈ ವರ್ಷದ ಉತ್ತಮ ಉದ್ಯೋಗಿಗಳಿಗೆ ಪ್ರಶಸ್ತಿ ಮತ್ತು ನಗದು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮ ಭರತೇಶ ಶಿಕ್ಷಣ ಸಂಸ್ಥೆಯ ಒಂದು ವಿಶಿಷ್ಟ ಕಾರ್ಯಕ್ರಮ ಎನಿಸಿಕೊಂಡಿದೆ ಏಕೆಂದರೆ ಈ ಸಂದರ್ಭದಲ್ಲಿ ಸಂಸ್ಥೆಯ ಎಲ್ಲ ಉದ್ಯೋಗಿಗಳನ್ನು ಒಂದಿಲ್ಲೊಂದು ಸಾಧನೆ ಗುರುತಿಸಿ ಸನ್ಮಾನಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಪುಷ್ಪದಂತ ದೊಡ್ಡಣ್ಣವರ, ಉಪಾಧ್ಯಕ್ಷರಾದ ಡಾ. ಜಿನದತ್ತ ದೇಸಾಯಿ ಖಜಾಂಚಿಗಳಾದ ಶ್ರೀಪಾಲ ಖೇಮಲಾಪುರೆ, ಸಂಸ್ಥೆಯ ಎಲ್ಲ ಸದಸ್ಯರು, ಉದ್ಯೋಗಿಗಳು ವಿದ್ಯಾಥರ್ಿಗಳು ಉಪಸ್ಥಿತರಿದ್ದರು.
ಡಾ. ಜ್ಯೋತಿ ಕಾಮತ್ ಮತ್ತು ಡಾ. ಅಮೆಯ್ ಜಾಥಾರ್ ಕಾರ್ಯಕ್ರಮ ನಿರೂಪಿಸಿದರು ಮತ್ತು ಡಾ. ಪ್ರಸಾದ ದಡ್ಡಿಕರ ವಂದಿಸಿದರು.