ಭೀಮಾ ಯೋಜನೆ ಪರಿಹಾರ ವಿಳಂಬ ಅಧಿಕಾರಿಗಳ ನಿಸ್ಕಾಳಜಿ ಯರಗಟ್ಟಿಯಲ್ಲಿ ಸಂಸದ ಸುರೇಶ ಅಂಗಡಿ ಆರೋಪ

ಲೋಕದರ್ಶನ ವರದಿ 

ಯರಗಟ್ಟಿ: ಸತತ ಬರಗಾಲದಿಂದ ತತ್ತರಿಸಿರುವ ರೈತರಿಗೆ ಜಿಲ್ಲೆಯ ಹಲವಾರು ತಾಲೂಕಿನ ರೈತರಿಗೆ ಪಸಲ ಭೀಮಾ ಯೋಜನೆಯ ಪರಿಹಾರ ದೊರಕದಿರುವುದು ಅಧಿಕಾರಿಗಳ ನಿರ್ಲಕ್ಷವೇ ಕಾರಣ. ಯರಗಟ್ಟಿ ಹೋಬಳಿಮಟ್ಟದಲ್ಲಿ ರೈತರ ಜಮೀನಿಗೆ ತೆರಳಿ ವೀಕ್ಷಣೆ ಮಾಡಿದಾಗ ಮಳೆಯಿಲ್ಲದೆ ಗೋವಿನ ಜೋಳ, ಸಜ್ಜೆ, ಹತ್ತಿ, ಈರುಳ್ಳಿ ಹೀಗೆ ಹಲವಾರು ಬೆಳೆಗಳು ಒಣಗಿ ನಿಂತಿವೆ ಅಧಿಕಾರಿಗಳು ಸ್ಥಾನಿಕವಾಗಿ ಇದ್ದು ರಜಾ ತೆಗೆದುಕೊಳ್ಳದೇ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು, ನೀರಿನ ಅಭಾವ ಉಂಟಾಗುವ ಮುವ್ಸೂಚನೆಗೆ ಎಚ್ಚತ್ತುಕೊಂಡು ಜಾನುವಾರುಗಳಿಗೆ ಮೇವು ಸಂಗ್ರಹಣೆಗೆ ಈಗಿಂದಲೇ ಹೆಚ್ಚಿನ ಗಮನ ಕೊಡಬೇಕು ಎಂದು ಸಂಸದ ಸುರೇಶ ಅಂಗಡಿ ಅಧಿಕಾರಿಗಳಿಗೆ ಹೇಳಿದರು.

ಸ್ಥಳೀಯ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ ರಾಜ್ಯ ಸಕರ್ಾರ ರೈತರ ಸಾಲ ಮನ್ನಾ ಘೋಷಣೆ ಮುಗಿಗೆ ತುಪ್ಪ ಸವರಿದಂತಿದೆ ಇಲ್ಲಿಯವರೆಗೂ ನಿಕರವಾಗಿ ರೈತರ ಸಾಲ ಮನ್ನಾ ಆಗದಿರುವುದೆ ಬೇರೆ ರಾಜ್ಯಗಳ ಬ್ಯಾಂಕಗಳ ಮೂಲಕ ರೈತರಿಗೆ ಬಂಧನ ಬೀತಿ ಉಂಟಾಗಿದ್ದು ಇದಕ್ಕೆ ರಾಜ್ಯ ಸಕರ್ಾರ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಕಾರಣ,  ಒಂದು ವೇಳೆ ರೈತರ ಬಂಧನವಾದರೆ ಅಂತಹ ಬ್ಯಾಂಕಗಳ ನಿಷೇದಕ್ಕೆ ರೈತರೊಂದಿಗೆ ಹೋರಾಟ ಮಾಡಲಾಗುವುದು ಎಂದರು.

ಈ ಸಂಧರ್ಭದಲ್ಲಿ ಡಾ.ಕೆವ್ಹಿ.ಪಾಟೀಲ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಈರಣ್ಣ ಚಂದರಗಿ, ಎಪಿಎಮ್ಸಿ ಮಾಜಿ ಉಪಾದ್ಯಕ್ಷ ಚಂದ್ರು ಅಳಗೋಡಿ, ಸದಾನಂದ ಪಾಟೀಲ, ರಂಗಪ್ಪ ಅಣ್ಣೀಗೇರಿ, ಬುದ್ನಿಗೌಡರ ಮೆಳ್ಳಿಕೇರಿ, ವೆಂಕಣ್ಣ ಕೊಪ್ಪದ ಮುಂತಾದವರಿದ್ದರು.