ವಿದ್ಯಾಥರ್ಿಗಳಿಗೆ ಶಿಕ್ಷಕರು ಸಾಮಾಜಿಕ ಜ್ಞಾನ ಬೋಧಿಸಲಿ: ಮನಗೂಳಿ

ಬೆಳಗಾವಿ 07: ಆಧುನಿಕ ಯುಗದಲ್ಲಿ ಶಿಕ್ಷಕರು ವಿದ್ಯಾಥರ್ಿಯ ಮಾನಸಿಕ, ಸಾಮಾಜಿಕ, ಆಥರ್ಿಕ ಸ್ಥಿತಿಗತಿಗಳನ್ನು ಅರ್ಥಮಾಡಿಕೊಂಡು ಬೋಧನೆಯನ್ನು ಮಾಡಬೇಕು. ಶಿಕ್ಷಕರು ಯಾವಾಗಲೂ ಅಧ್ಯಯನ ಶೀಲರಾಗುವುದರ ಜೊತೆಗೆ ಪ್ರಸ್ತುತ ಜ್ಞಾನದ ಅರಿವು ಹೊಂದಿರಬೇಕೆಂದು  ನಿದರ್ೇಶಕರು ಮತ್ತು ಅದ್ಯಕ್ಷರು ಅಪರಾಧಶಾಸ್ತ್ರ ಮತ್ತು ಅಪರಾಧ ನ್ಯಾಯ ಅಧ್ಯಯನ ವಿಭಾಗ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಡಾ.ಆರ್.ಎನ್. ಮನಗೂಳಿ ಹೇಳಿದರು.

ಸ್ಥಳೀಯ ಮಹಾಂತೇಶ ನಗರದ ರಹವಾಸಿಗಳ ಸಂಘ ಶಿಕ್ಷಣ ಮಹಾವಿದ್ಯಾಲಯ ಸಭಾಭವನದಲ್ಲಿ ಶುಕ್ರವಾರ 05 ರಂದು  4ನೇ ಸೆಮೆಸ್ಟರ ಪ್ರಶಿಕ್ಷಣಾಥರ್ಿಗಳ ವಾಷರ್ಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ರಂಗ ಸಂಪದ ಅಧ್ಯಕ್ಷ ಡಾ.ಅರವಿಂದ ಕುಲಕಣರ್ಿ  ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯು ತನ್ನ  ಸಾಮಥ್ರ್ಯಗಳನ್ನು ಧನಾತ್ಮಕವಾಗಿ ಬಳಸಿಕೊಂಡು ನಾನು ಸರ್ವರಲ್ಲಿ ಉತ್ತಮ ಎಂಬ ಪರಿಕಲ್ಪನೆಯನ್ನು ಹೊಂದಿರಬೇಕು. ಅಂತಹ ಭಾವನೆಯನ್ನು ಬೆಳೆಸಿಕೊಳ್ಳುವುದರ ಮೂಲಕ ಶಿಕ್ಷಕ ಮಕ್ಕಳಲ್ಲಿ ಸ್ವಅರಿವು ಸ್ವಪ್ರತಿಷ್ಠೆ ಬೆಳೆಸಿದರೆ ಮಕ್ಕಳಲ್ಲಿಯ ಕೀಳರಿಮೆಯನ್ನು ಹೊಡೆದೋಡಿಸಲು ಸಾಧ್ಯ ಇದರಿಂದ ಉತ್ತಮ ವ್ಯಕ್ತಿತ್ವದ ವಿಧ್ಯಾಥರ್ಿಗಳನ್ನು ನಿಮರ್ಾಣ ಮಾಡಲು ಶಿಕ್ಷಕರಿಂದ ಮಾತ್ರ ಸಾಧ್ಯಎಂದು ಹೇಳಿದರು.

ಅತಿಥಿಯಾಗಿ ಬಸವರಾಜ ಸುಲ್ತಾನಪುರೆ   ಮಾತನಾಡಿ, ಶಿಕ್ಷಕರು ಪದವಿಯ  ಜೊತೆಗೆ ಇಂದಿನ ಆಧುನಿಕ ಸಮಾಜಕ್ಕೆ ಬೇಕಾಗುವ ವೃತ್ತಿಪರ ಕೌಶಲ್ಯಗಳನ್ನು ಹೊಂದಿರಬೇಕು ಎಂದು ಹೇಳಿದರು. 

ಅಧ್ಯಕ್ಷರು ಮನರ ಸಂಘ ರಾಜಶೇಖರ ಭಾವಿಕಟ್ಟಿ ಮಾತನಾಡಿ, ಪ್ರಶಿಕ್ಷಣಾಥರ್ಿಗಳು ಉತ್ತಮ ಶಿಕ್ಷಕರಾಗಿ ಕಲಿತ ಮಹಾವಿದ್ಯಾಲಯಕ್ಕೆ ಮತ್ತು ಸಂಸ್ಥೆಗೆ ಕೀತರ್ಿಯನ್ನು ತಂದುಕೊಡಬೇಕು ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ  ಪ್ರಾಸ್ತಾವಿಕ ನುಡಿಗಳನ್ನು ಪ್ರಾಚಾರ್ಯರಾಧ   ಡಾ.ಎನ್ ಜಿ ಬಟ್ಟಲ ಮಾತನಾಡಿದರು.

ಬಿ ಆಯ್ ಮಿಡಕನಟ್ಟಿ ನಿರೂಪಿಸಿದರು. ಎಸ್ವಿ.ವಾಲಿಶೆಟ್ಟಿ ಸ್ವಾಗತಿಸಿದರು.  ಎಸ್.ಜಿ. ಚಿನಿವಾಲ ವಂದಿಸಿದರು. ಆರ್.ವಿ. ಅಕ್ಕಿ  ಕಾರ್ಯಕ್ರಮ ನೆರವೇರಿಸಿದರು. ಮಹಾವಿದ್ಯಾಲಯದ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತುಎಲ್ಲ ಪ್ರಶಿಕ್ಷಣಾಥರ್ಿಗಳು ಉಪಸ್ಥಿತರಿದ್ದರು.