ಅವಕಾಶ ಸದುಪಯೋಗಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಿ: ದೇಶಪಾಂಡೆ

ಅಥಣಿ 20: ಕ್ರೀಡೆ, ಆಟ, ಪಾಠಗಳಲ್ಲಿ ಭಾಗವಹಿಸುವುದು ಮುಖ್ಯ. ಸೋಲು ಗೆಲವು ಇದ್ದೇ ಇರುತ್ತದೆ. ಅದನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಇರಬೇಕು ಎಂದು ಜೆ,.ಶಿಕ್ಷಣ ಸಂಸ್ಥೆಯ ಕಾಯರ್ಾಧ್ಯಕ್ಷರಾದ ಅರವಿಂದರಾವ ದೇಶಪಾಂಡೆ ಕಿವಿ ಮಾತು ಹೇಳಿದರು.

         ಇಂದು ಶನಿವಾರ ಜಾಧವಜೀ ಶಿಕ್ಷಣ ಸಂಸ್ಥೆಯ ಜೆ.. ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಅಥಣಿ ಇವರ ಸಹಯೋಗದಲ್ಲಿ 2018 -19 ಪದವಿಪೂರ್ವ ಕಾಲೇಜುಗಳ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಅಥ್ಲೇಟಿಕ್ಸ ಹಾಗೂ ಹ್ಯಾಂಡಬಾಲ್ ಕ್ರೀಡಾಕೋಟದ ಉದ್ಘಾಟನೆಯನ್ನು ಸ್ಥಳಿಯ ಭೋಜರಾಜ ಕ್ರೀಡಾಂಗಣದಲ್ಲಿ ನೆರೆವೇರಿಸುತ್ತಾ ಅವರು ಮಾತನಾಡುತ್ತಿದ್ದರು. ಭಾವಿ ಭವಿಷ್ಯದಲ್ಲಿ ಒಳ್ಳೆಯ ಸ್ಥಾನಮಾನ ಹೊಂದುವುದಕ್ಕೆ, ಇಂದಿನ ಕ್ರೀಡೆಗಳು ಅನುಕೂಲವಾಗುತ್ತವೆ. ಏಷಿಯನ್ ಕ್ರೀಡಾಕೂಟದ ಅಥ್ಲೇಟಿಕ್ಸದಲ್ಲಿ ಬೆಳಗಾವಿ ಜಿಲ್ಲೆಯ ಕುವರಿ ಒಳ್ಳೆಯ ಸ್ಥಾನ ಪಡೆದಳು. ಅದೇ ರೀತಿ ಮೇಘಾಲಯದ ಕುವರಿ ಬಂಗಾರ ಪದಕ ತೊಟ್ಟು, ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ತಾವು ಸಹ ಸೋಲು ಗೆಲುವು ಕಡೆ ಮುಖಮಾಡದೆ, ಪ್ರಯತ್ನದಿಂದ ಭವಿಷ್ಯ ರೂಪಿಸಿಕೊಳ್ಳಿರಿ ಎಂದರು.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ .ಪೂ.ಶಿ ಇಲಾಖೆಯ ಉಪನಿದರ್ೇಶಕ ಜೆ ಎಸ್ ಪೂಜಾರಿಯಿಂದ ಕ್ರೀಡಾ ಧ್ವಜಾರೋಹಣವಾಯಿತು. ಹಿಂದಿ ಉಪನ್ಯಾಸಕ ನವನಾಥ ನಿಕ್ಕಮರರಿಂದ ಪ್ರಾರ್ಥನೆ ಜರುಗಿತು. ಪ್ರಾಚಾರ್ಯ ಎಸ್.ಎಸ್.ಗೌಡರರಿಂದ ಸ್ವಾಗತ ಪ್ರಾಸ್ತಾವಿಕ ನಡೆಯಿತು. ಜೆ ಎಸ್ ಪೂಜಾರಿ ಅಜೇಯ ಮೋನೆ ಇವರ ಸನ್ಮಾನವಾಯಿತು. ಜೆ ಎಸ್ ಪೂಜಾರಿಯವರು ಮುಖ್ಯ ಅತಿಥೀಗಳಾಗಿ ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡಿದರು. ಜೆ ಸಂಸ್ಥೆಯ ಸಂಚಾಲಕ ಮಂಡಳಿಯ ಸದಸ್ಯರಾದ ಎಸ್.ಕೆ.ಸಂಗೋರಾಮ, ಅಧ್ಯಕ್ಷಿಯ ಭಾಷಣ ಮಾಡುತ್ತಾ ಕ್ರೀಡೆಗಳು ಮಾನಸಿಕ, ದೈಹಿಕವಾಗಿ ಸ್ಪೂತರ್ಿ ನೀಡುತ್ತವೆ ಎಂದರು. ಬಿ ಎಸ್, ಲೋಕುರ ವಂದನರ್ಾಪಣೆ ಮಾಡಿದರು.

                   ಕನ್ನಡ ಉಪನ್ಯಾಸಕ ಡಾ. ಆರ್.ಎಸ್.ದೊಡ್ಡನಿಂಗಪ್ಪಗೋಳ, ಇಂಗ್ಲೀಷ ಉಪನ್ಯಾಸಕ ಎನ್.ಚಂದ್ರಶೇಖರ ನಿರೂಪಣೆ ಮಾಡಿದರು. ಡಾ. ರಾಮ ಕುಲಕಣರ್ಿ ಆರ.ಬಿ ದೇಶಪಾಂಡೆ, .ಬಿ ದೇಶಪಾಂಡೆ( ಹಿಡಿಕಲ್), ಅವಿನಾಶ ಸೊಲ್ಲಾಪುರಕರ, ಎಂ.ವ್ಹಿ,ಜೋಶಿ, ಪ್ರಕಾಶ ನರಗಟ್ಟಿಜೆ.ಜಿ. ಪವಾರ, ಎಂ.ಪಿ. ಮೈತ್ರಿ, ಎಸ್.ಆರ್.ಪಾಟೀಲ, ಎಸ್.ವ್ಹಿ ದಾಸರೆಡ್ಡಿ, ಎಸ್.ಎಸ್.ಬಿರಾದಾರ, ಬಿ ಬಿ ಪಾಟೀಲ, ವಿ.ಎನ್.ಮೋರೆ, ಸಿ.ಟಿ.ಶಿವಪ್ರಕಾಶ, ಜಿ..ಜಾಧವ, ಎಸ್.ಎಸ್.ಬಕಾಲಿ, ವಿನಾಯಕ ಬಾಳಪ್ಪನವರ, ಎಚ್..ಬೋಳೊಳ್ಳಿ, ಎಸ್.ಎಸ್. ಜಮಖಂಡಿ, ಆರ್. ಎಂ ಶೀಂಧೆ , ಎಮ್.ಡಿ ಬಸಗೌಡರ ಮತ್ತು ಕ್ರೀಡಾಪಟುಗಳು ಉಪಸ್ಥಿತರಿದ್ದರು.