ಎಮ್ಮಿಗನೂರು ಗ್ರಾಮದಲ್ಲಿ ಸಾಂಕೇತಿಕ ಧರಣಿ

ಲೋಕದರ್ಶನ ವರದಿ

ಕಂಪ್ಲಿ:.ಎಮ್ಮಿಗನೂರು ಗ್ರಾಮವನ್ನು ನೂತನ ಕಂಪ್ಲಿ ತಾಲೂಕಿಗೆ ಸೇರ್ಪಡೆಗೊಳಿಸಿ, ಸಕರ್ಾರದ ನೋಟಿಫಿಕೇಷನ್ ಆಗಿದೆ. ಆದರೆ, ಇನ್ನು ಕಂಪ್ಲಿ ತಾಲೂಕಿನಲ್ಲಿ ರೈತರ ಕೆಲಸಗಳು ಆಗದೆ ಅಧಿಕಾರಿಗಳ ವಿಳಂಬ ನೀತಿ ಹಾಗೂ ಕಂಪ್ಲಿ ತಾಲೂಕಿನಲ್ಲಿ ಎಮ್ಮಿಗನೂರು ಗ್ರಾಮವನ್ನು ಉಳಿಸಬೇಕೆಂದು ಆಗ್ರಹಿಸಿ, ತಾಲೂಕು ಸಮೀಪದ ಎಮ್ಮಿಗನೂರು ಗ್ರಾಮದ ಮಸೀದಿ ಆವರಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನಾನಾ ಸಂಘಟನೆಗಳ ಸಹಕಾರದಿಂದ ಸಾಂಕೇತಿಕ ಧರಣಿ ನಡೆಸಲಾಯಿತು. 

    ಈ ಧರಣಿ ಸಂದರ್ಭದಲ್ಲಿ ಮುಖಂಡರು ಮಾತನಾಡಿ, ಬ್ಯಾಂಕಿನಲ್ಲಿ ಬೆಳೆಸಾಲ, ಭೂಮಿ ಖರೀದಿ, ಮುಟೇಷನ್ ಹಾಗೂ ಪಹಣಿ ಸೇರಿ ಇತರೆ ದಾಖಲೆಗಳನ್ನು ಪಡೆಯಲು ಕಷ್ಟಕರವಾಗಿದೆ. ಈಗಾಗಲೇ ರಾಜ್ಯ ಪತ್ರದಲ್ಲಿ ಎಮ್ಮಿಗನೂರು ಗ್ರಾಮವನ್ನು ಕಂಪ್ಲಿ ತಾಲೂಕಿಗೆ ಸೇರಿಸಲಾಗಿದೆ. ಇನ್ನೂ ಕಂಪ್ಲಿ ತಾಲೂಕಿನಿಂದ ಎಮ್ಮಿಗನೂರನ್ನು ಬೇರ್ಪಡಿಸಬಾರದು. ಮುಂದಿನ ದಿನದಲ್ಲಿ ಎಮ್ಮಿಗನೂರು ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿಸಬೇಕು ಎಂದರು. 

     ಧರಣಿ ಸ್ಥಳಕ್ಕೆ ತಹಶೀಲ್ದಾರ ಎಂ.ರೇಣುಕಾ ಭೇಟಿ ನೀಡಿ, ಮನವಿ ಪತ್ರ ಸ್ವೀಕರಿಸಿದ ನಂತರ ಮಾತನಾಡಿ, ಕಂಪ್ಲಿ ತಾಲೂಕಿಗೆ ಎಮ್ಮಿಗನೂರು ಸೇರ್ಪಡೆಗೊಂಡಿದೆ. ಹೊಸಪೇಟೆಯಲ್ಲಿ ರೈತರು ಪಹಣಿಗಳನ್ನು ಪಡೆಯಬಹುದು. ಈಗಾಗಲೇ ಆನ್ಲೈನ್ನಲ್ಲಿ ದೊರಕುತ್ತಿದೆ. ರೈತರಿಗೆ ತೊಂದರೆಯಾಗದಿರಲು ಸಿಬ್ಬಂದಿ ವರ್ಗ ಶ್ರಮಿಸುತ್ತಿದ್ದಾರೆ ಎಂದರು. 

    ಈ ಧರಣಿ ವೇಳೆ ಮಾಜಿ ಗ್ರಾಪಂ ಸದಸ್ಯ ಟಿ.ರಾಮು, ಸಿದ್ದಲಿಂಗಪ್ಪ, ವೀರೇಂದ್ರರೆಡ್ಡಿ, ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಖಾಸಿಂಸಾಬ್, ತಾಪಂ ಸದಸ್ಯ ವೆಂಕಟರಾಜು, ಗ್ರಾಪಂ ಸದಸ್ಯರಾದ ಎಚ್.ರಾಮಾಂಜಿನಿ, ಕಿಶೋರ್ಕುಮಾರ್, ಖಾದರ್ಭಾಷ, ಶೇಖರಪ್ಪ, ಮೌನೇಶ್, ಕರಿಯಪ್ಪ, ತಿಪ್ಪಯ್ಯ, ರಾಮಾಂಜಿನಿ, ಮುಖಂಡರಾದ ಕಾಂತರೆಡ್ಡಿ, ಕಾಗಿ ಈರಣ್ಣ, ವೈ.ಸಿದ್ದಲಿಂಗಪ್ಪ, ಬಾಗೋಡಿ ಈರಣ್ಣ, ಪಿಡ್ಡಪ್ಪ, ಕೊಲ್ಮಿಸಾದಿಕ್ಅಲಿ ಸಾಬ್, ನೆಲ್ಲೂಡಿ ಸಿದ್ದಪ್ಪ, ಬಿ.ಯಮನೂರಪ್ಪ, ನೀರು ಬಳಕೆದಾರರ ಆರು ಸಂಘಟನೆಗಳು, ಎಮ್ಮಿಗನೂರು ಜಡಿತಾತ ಶ್ರಮಿಕ ಹಮಾಲರ ಸಂಘ, ಗಂಗಾಮತ ಸಮಾಜ ಸಂಘ, ವಿದ್ಯಾಥರ್ಿ ಸಂಘ, ವಿದ್ಯಾಥರ್ಿ ಯೂನಿಯನ್ನ ಸೇರಿ ಗ್ರಾಮಸ್ಥರು ಪಾಲ್ಗೊಂಡಿದ್ದರು. ಕುರುಗೋಡು ಪಿಎಸ್ಐ ಚೈತನ್ಯ ಅವರು ಬಿಗಿಬಂದೋಬಸ್ತು ಒದಗಿಸಿದ್ದರು.