ಶರಣರು ಮುಂದಿನ ಪೀಳಿಗೆಗೆ ಬೆಳಕಾದವರು: ಮಠಪತಿ

ಲೋಕದರ್ಶನ ವರದಿ

ಬೆಳಗಾವಿ:  "ಅರೆಭಕ್ತರಾದವರ ನೆರೆಬೇಡ" ಶರಣರು ಸಮತ್ವವನ್ನು ಕಾಯ್ದುಕೊಂಡು ಆದರ್ಶ ಬದುಕನ್ನು ಬಾಳಿ ಮುಂದಿನ ಪೀಳಿಗೆಗೆ ಬೆಳಕಾದವರು. ಲಿಂಗಾಯಿತ ಧಮರ್ಿಯರೆಲ್ಲರೂ  ಶರಣ ಸಿದ್ಧಾಂತದ ನಿಷ್ಠೆಯು ಮತ್ತೊಬ್ಬರಿಗೆ ಮಾದರಿಯಾಗಿ, ಕಷ್ಟಕೋಟಲೆಗಳನ್ನು ಎದುರಿಸಿ ಹೇಗೆ ಬದುಕಬೇಕು ಅಂತಾ ಕಲಿಸಿಕೊಟ್ಟಿದ್ದಾರೆ. ಪ್ರಕೃತರ್ಿಯನ್ನು ಪ್ರೀತಿಸಿ ಸಕಲ ಜೀವಾತ್ಮರಿಗೆ ಲೇಸನೇ ಬಯಸಿ, ಕಾಯಕ ದಾಸೋಹ ತತ್ವದಡಿಯಲ್ಲಿ ಬದುಕಬೇಕೆಂದು ಶರಣರು ಹೇಳಿದ್ದನ್ನು ವಚನ ನಿರ್ವಚನ ಮಾಡುತ್ತ  ತಿಳಿಸಿದ ಅವರು ಜಾತಿ ಮತ ಧರ್ಮ ವರ್ಣಬೇಧಗಳನ್ನ ತೊಡೆದು ಹಾಕುವ ನಿಟ್ಟಿನಲ್ಲಿ ಎಲ್ಲರೂ ಇಷ್ಟಲಿಂಗಧಾರಿಗಳಾಗುವುದು ಅವಶ್ಯವಾಗಿದೆ ಎಂದು ಶರಣವಾಹಿನಿ ಕೇಂದ್ರ ಹಾರೂಗೇರಿಯ ಸಂಚಾಲಕರಾದ ಶರಣ ಆಯ್. ಆರ. ಮಠಪತಿಯವರು ಇಂದಿಲ್ಲಿ ಹೇಳಿದರು.

ನಗರದ ಜಾಗತಿಕ ಲಿಂಗಾಯಿತ ಮಹಾಸಭಾ(ರಿ) ಮತ್ತು ರಾಷ್ಟ್ರೀಯ ಬಸವ ಸೇನಾ ಸಂಘನಟನೆಗಳು ಸಂಯುಕ್ತವಾಗಿ ಮಹಾಂತೇಶನಗರದ ಮಹಾಂತ  ಭವನದಲ್ಲಿ  ಹಮ್ಮಿಕೊಳ್ಳಲಾಗಿದ್ದ ಮಾಸಿಕ ಅನುಭಾವ ಶರಣ ಸತ್ಸಂಗ ಹಾಗೂ ಗುರವಂದನಾ ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಮಠಪತಿಯವರು ಮೇಲಿನಂತೆ ಅಭಿಪ್ರಾಯ ಪಟ್ಟರು. 


ನಾಗನೂರು ಶ್ರೀರುದ್ರಾಕ್ಷಿ ಮಠದ ಜವಾಬ್ಧಾರಿಯನ್ನು ಉತ್ತರಾಧಿಕಾರಿಗಳಿಗೆ ಒಪ್ಪಿಸಿ   ಅಂತರಮುಖಿಯಾಗಿ ಧಾಮರ್ಿಕ ಸಾಹಿತ್ಯ ರಚಿಸುವ ಕುರಿತಂತೆ ಚಿಂತನೆಯಲ್ಲಿದ್ದೆ ಆದರೆ ನಾನೊಂದು ಬಗೆದರೆ ದೈವವೊಂದು ಬಗೆಯುವುದು ಎಂಬಂತೆ ಗದುಗಿನ ತೋಂಟದಾರ್ಯ ಮಠದ ಜವಾಬ್ಧಾರಿಯೂ ನನ್ನ ಮೇಲೆ ಬಿದ್ದುದು ಅನಿವಾರ್ಯ. ಲಿಂಗೈಕ್ಯ ಡಾ. ಸಿದ್ದಲಿಂಗ ಮಹಾಸ್ವಾಮಿಜಿಯವರ ಆಶಯವನ್ನು ಮೀರಲಾಗದೇ ಹಾಗೂ ನಮ್ಮ ಸಮಾಜದ ಒಳಿತನ್ನು ಗಮನದಲ್ಲಿಟ್ಟುಕೊಂಡು  ನಾನೀ ಜವಾಬ್ಧಾರಿಯನ್ನು ಒಪ್ಪಿಕೊಳ್ಳಬೇಕಾಯಿತೆ ವಿನಃ ಬೇರಾವ ಸ್ವಾರ್ಥ ಇದರಲಿಲ್ಲ ಎಂದು ಡಾ. ಸಿದ್ಧರಾಮ ಮಹಾಸ್ವಾಮಿಗಳು ಇಂದಿಲ್ಲಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು. ಮುಂದೆ ಮಾತನಾಡುತ್ತ ಅವರು ಲಿಂಗಾಯಿತ ಸ್ವತಂತ್ರ ಧರ್ಮ ಸಾಂವಿಧಾನಿಕ  ಮಾನ್ಯತೆ ಸಿಗವವರೆಗೆ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದರು.


ಷಟಸ್ಥಳ ಧ್ವಜಾರೋಹಣ ಪ್ರೊ. ಸಿದ್ದನಗೌಡ ಚೌಬಾರಿ ಹಾಗೂ ಶರಣೆ ಸುಮಿತ್ರಾ ಚೋಬಾರಿಯವರು ನಡೆಸಿಕೊಟ್ಟರು.

ಪೂಜ್ಯ ವಾಗ್ದೇವಿ ತಾಯಿಯವರು ಹಾಗೂ ಪೂಜ್ಯ ಕುಮುದಿನ ತಾಯಿಯವರು, ವೈಭವನಗರದ ನಾಗರಿಕರು, ಕನರ್ಾಟಕ ರಾಜ್ಯ ಹಿರಿಯ ನಾಗರೀಕ ಸಂಘದ ಪದಾಧಿಕಾರಿಗಳು, ಡಾ. ರವಿ ಪಾಟೀಲ, ಬಸವರಾಜ ರೊಟ್ಟಿ, ಗುರು ಇಂಗಳೇಶ್ವರ ಕಾಡಪ್ಪನವರ, ಮಹಾಂತೇಶ ನಗರ ರಹವಾಸಿಗಳ ಸಂಘದ ಪದಾಧಿಕಾರಿಗಳು, ಜಾಗತಿಕ ಲಿಂಗಾಯಿತ ಮಹಾಸಭಾ ಮತ್ತು ರಾಷ್ಟ್ರೀಯ ಬಸವ ಸೇನೆಯ ವಿವಿಧ ತಾಲೂಕಾ ಘಟಕಗಳ ಪದಾಧಿಕಾರಿಗಳು ಗುರವಂದನಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಡಾ. ಸಿದ್ದರಾಮ ಮಹಾಸ್ವಾಮಿಜಿಯವರನ್ನು ಗೌರವಿಸಿದರು. ಮಹಾಂತದೇವರು ಹಾಗೂ ಶರಣ ಕಾಶಪ್ಪ ಉಪ್ಪಿನ ವೇದಿಕೆ ಮೇಲಿದ್ದರು.

  ಇದೇ ಸಂದರ್ಭದಲ್ಲಿ ಸಂಚಾರಿ ಗುರುಬಸವ ಬಳಗದವರು ಅಕ್ಕಮಹಾದೇವಿ ಅವರ ವಚನಗಳ ಲಿಖಿತ ಸ್ಪಧರ್ೆಯಲ್ಲಿ ವಿಜೇತರಾದವರವನ್ನು ಸ್ವಾಮಿಜಿಯವರು ಸತ್ಕರಿಸಿ ಗೌರವಿಸಿದರು ಅಲ್ಲದೇ  1200 ಶರಣರನ್ನೊಳಗೊಂಡ ಬಸವಭೂಮಿಯಾತ್ರೆಯ ನೇತೃತ್ವ ವಹಿಸಿ ಯಶಸ್ವಿ ಯಾತ್ರೆಯನ್ನು ಮುಗಿಸಿದ ಶರಣ ಎಸ್.ಎಲ್. ಬಾಡಗೆ ಗುರುಗಳನ್ನು ಹಾಗೂ ಶರಣ ಆಯ್. ಆರ್. ಮಠಪತಿಯವರನ್ನು ಸತ್ಕರಿಸಲಾಯಿತು. 

ಶರಣ ಚೆನ್ನಪ್ಪ ನರಸಣ್ಣವರ ಅವರು ಪ್ರಾಸ್ತಾವಿಕ ಮಾತನಾಡಿದರು. ಶರಣ ಆನಂದ ಕಕರ್ಿ  ಸ್ವಾಗತಿಸಿದರು. ಅಶೋಕ ಮಳಗಲಿ ಮತ್ತು ಕು. ಶೃತಿ ಗುಡಸ ನಿರೂಪಿಸಿದರು. ಪ್ರೊ. ಶ್ರೀಕಾಂತ ಶಾನವಾಡ ವಂದಿಸಿದರು.

ಎ. ವಾಯ್ ಬೆಂಡಿಗೇರಿ, ಬಾಪಟ, ಮೋಹನ ಪಾಟೀಲ, ಬಸವರಾಜ ಭಾಗೋಜಿ, ಶಿವಾನಂದ ನಿರಾಕಾರಿ, ಶರಣೆ ದೀಪಾ ತೋಲಗಿ, ಮಹಾಂತೇಶ ತೋರಣಗಟ್ಟಿ, ಲಾಳಸಂಗಿ ಗುರುಗಳು, ಶಿವಾನಂದ ನಾಯಕ, ಶಂಕರ ಗುಡಸ, ಬಸವರಾಜ ಸುಲ್ತಾನಪುರಿ ಮುಂತಾದವರು ಉಪಸ್ಥಿತರಿದ್ದರು.