ಲೋಕದರ್ಶನ ವರದಿ
ಬೆಳಗಾವಿ, 11: "ಬೆರಳೆಣಿಕೆಯಷ್ಟು ಪದಕಗಳಿಕೆಯ ಕಳಪೆ ಸಾಧನೆ ಹಿಮ್ಮೆಟ್ಟಿ, ಪದಕ ಪಟ್ಟಿಯಲ್ಲಿ ವಿಶ್ವಕ್ಕೆ ಪ್ರಥಮ ಸ್ಥಾನ ಗಿಟ್ಟಿಸುವ ನಿಟ್ಟಿನಲ್ಲಿ ಕ್ರೀಡಾ ತರಬೇತಿ ಮತ್ತು ಸೌಲಭ್ಯ-ಸವಲತ್ತುಗಳನ್ನು ಬಳಸಿಕೊಳ್ಳುವ ಮೂಲಕ ರಾಷ್ಟ್ರಕ್ಕೆ ಕೀತರ್ಿ ತರುವ ಜವಾಬ್ದಾರಿಯನ್ನು ಇಂದಿನ ಯುವ ಕೀಡಾಳುಗಳು ಹೊತ್ತು ಕೊಳ್ಳಬೇಕು. ಸಾಧನೆಗೆ ಪೂರಕವಾದ ಪರಿಶ್ರಮ ಮತ್ತು ಸತತ ಪ್ರಯತ್ನಗಳನ್ನು ನಡೆಸಬೇಕು.ಸಾದಿಸಿಯೇ ತೀರುವೆನೆಂಬ ಛಲವು ಸಾಧನೆಯ ದಡವನ್ನು ತಲುಪಿಸಬಲ್ಲುದು. ಸದೃಢ ಶರೀರ ಅಚಲ ಮನಸ್ಸು ಹೊಂದಬೇಕು.
ಮುಂಬರುವ ದಿನಗಳಲ್ಲಿ ಎಲ್ಲಾ ಕ್ರೀಡಾ ವಿಭಾಗಗಳಲ್ಲಿ ದೇಶವನ್ನು ಪ್ರಥಮ ಸ್ಥಾನದಲ್ಲಿ ಇರಿಸುವ ಪ್ರತಿಜ್ಙ ಮಾಡಬೇಕು." ಎಂದು ರಾಮಣ್ಣ ಮುಳ್ಳೂರ. ನಿವೃತ್ತ ಆಯುಕ್ತರು ವಾಣಿಜ್ಯ ತೆರಿಗೆ ಇಲಾಖೆ ಬೆಳಗಾವಿ ಹಾಗೂ ಅಧ್ಯಕ್ಷರು, ಬೆಳಗಾವಿ ರಡ್ಡಿ ಸಮಾಜ ಸಂಘ, ಬೆಳಗಾವಿ ಯವರು ತಿಳಿಸಿದರು. ಅವರು ನಗರದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪ್ರೌಢ ಶಾಲೆಯ ವಾಷರ್ಿಕ ಕ್ರೀಡಾಕೂಟದ ಮುಖ್ಯ ಅತಿಥಿಯಾಗಿ ಇಂದು ಶುಕ್ರವಾರ ಮುಂಜಾನೆ ಆಗಮಿಸಿ, ವಿದ್ಯಾಥರ್ಿ-ವಿದ್ಯಾಥರ್ಿನಿಯರಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಧ ಕೆ ಎಮ್ ಗಿರೀಶ. ಬೆಳಗಾವಿ ಜಿಲ್ಲಾ ಮೀಸಲು ಪಡೆಯ ಪೋಲಿಸ ಇನ್ಸಪೆಕ್ಟರ್ ಬೆಳಗಾವಿ ಮಾತನಾಡಿ , ವ್ಯಾಯಾಮ ಯೋಗ ರೂಢಿಸಿಕೊಂಡರೆ ಆರೋಗ್ಯ, ಶಿಸ್ತು, ಸಂಯಮ ಹಾಗೂ ಕ್ರೀಡೆಗಳಲ್ಲಿ ಜಯಿಸುವೆನೆಂಬ ವಿಶ್ವಾಸ ತಾನಾಗೇ ಬೆಳೆಯುತ್ತದೆ. ಆಟದ ಜೊತೆಯಲ್ಲಿ ಪಾಠದ ಲವಲವಿಕೆ - ಆಸಕ್ತಿ ಮೂಡುತ್ತದೆ. ಸ್ಪಧರ್ಾತ್ಮಕ ಪರೀಕ್ಷೆಗಳ ಕುರಿತು ಈಗಿನಿಂದಲೇ ರೂಢಿ ಬೆಳೆಸಿಕೊಳ್ಳಬೇಕು "ಸತತ ಪ್ರಯತ್ನ ಹಾಗೂ ಶ್ರಮದಿಂದ ಯಶಸ್ಸು ಖಂಡಿತ , ಎಂದು ಕರೆ ನೀಡಿದರು. ಅತಿಥಿಗಳಾಗಿ ಆಗಮಿಸಿದ ಡಾ|| ಬಿ.ಜಿ. ಧಾರವಾಡ ,ಹಿರಿಯ ಉಪನ್ಯಾಸಕರು. ಕೆ.ಎಸ್.ಆರ್. ಶಿಕ್ಷಣ ಮಹಾವಿದ್ಯಾಲಯ, ನೆಹರು ನಗರ ಬೆಳಗಾವಿ. ಇವರು ಶಾಲಾ ಮಕ್ಕಳಿಗೆ ಹಿತೋಪದೇಶ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಾಧ್ಯಾಪಕರಾದ ಶ್ರೀಯುತ ಬಿ ಪಿ ಲಮಾಣಿ ಅವರು ವಹಿಸಿದ್ದರು ಸಮಾರಂಭದಲ್ಲಿ ಶಾಲೆಯ ಅಧ್ಯಕ್ಷರಾದ ಆರ್ ಪಿ. ಪಮ್ಮಾರ ಉಪಸ್ಥಿತರಿದ್ದರು.
ಆರಂಭದಲ್ಲಿ ಮಕ್ಕಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಕುಮಾರ ರವಿಚಂದ್ರ ಗುಡೆನ್ನವರ ಕ್ರೀಡಾ ಜ್ಯೋತಿ ಹೊತ್ತು .ಪ್ರತಿಷ್ಠಾಪಿಸಿದನು. ಒಟ್ಟು ಎಂಟು ತಂಡಗಳುಳ್ಳ ಬಾಲಕ-ಬಾಲಕಿಯರು ಎರಡು ದಿನಗಳ ವರೆಗೆ ವಿವಿಧ ಆಟೋಟಗಳ ಸ್ಪದರ್ೆಗಳಲ್ಲಿ ಭಾಗವಹಿಸಲಿದ್ದಾರೆ ಆರಂಭದಲ್ಲಿ ಬಿ. ಎಮ್. ಮಠ ಸ್ವಾಗತಿಸಿದರೆ ಕೊನೆಯಲ್ಲಿ ಶ್ರೀಮತಿ ವಿ.ಎಸ್. ಭೂತಿ ವಂದಿಸಿದರು.ದೈಹಿಕ ಶಿಕ್ಷಕರಾದ ಎಸ್.ಎಸ್. ಲಮಾಣಿಯವರು ಪಥ ಸಂಚಲನದ ನೇತೃತ್ವ ವಹಿಸಿದ್ದರು. ಎಲ್. ಕೆ. ಪಮ್ಮಾರ ಕಾರ್ಯಕ್ರಮ ನಿರೂಪಿಸಿದರು.