ಅಸ್ಪೃಶ್ಯತಾ ಅರಿವು ಜಾಗೃತಿಗೆ ಬೀದಿ ನಾಟಕ
ಹೂವಿನಹಡಗಲಿ 04: ಮನುಷ್ಯ ಜಾತಿ ಧರ್ಮದ ಮುಖಾಂತರ ಹಾಗೂ ಮಾನವೀಯತೆಯಿಂದ ಎಲ್ಲರೂ ಸಾಮರಸ್ಯ ಜೀವನದಲ್ಲಿ ಹಾಗೂ ಆಚಾರ ವಿಚಾರ ನಡೆ-ನುಡಿ ಇಂದ ನಡೆದು ಎಲ್ಲರೂ ಒಂದಾಗಿ ಚೆಂದಾಗಿ ಬಾಳಬೇಕು ಎಂದು ದಲಿತ ಮುಖಂಡ ವಕೀಲರಾದ ಎಚ್ ಪೂಜಪ್ಪ ಕರೆ ನೀಡಿದರು. ತಾಲೂಕಿನ ಸೋಗಿ ಗ್ರಾಮದಲ್ಲಿ ತಾಲೂಕ್ ಆಡಳಿತ ತಾಲೂಕಹ ಪಂಚಾಯಿತಿ ಸಮಾಜ ಕಲ್ಯಾಣ ಇಲಾಖೆ ಪೊಲೀಸ್ ಇಲಾಖೆ ಇವರ ಸಯುಕ್ತ ಆಶ್ರಯದಲ್ಲಿ ಅಸ್ಪೃಶ್ಯತಾ ಅರಿವು ಜಾಗೃತಿ ಹಾಗೂ ಬೀದಿ ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಿವೃತ್ತ ಶಿಕ್ಷಕ ಎಸ್ ನಾಗರಾಜಪ್ಪ ಮಾತನಾಡಿ ಭವ್ಯ ಭಾರತ ಸಂಸ್ಕೃತಿ ಪರಂಪರೆ ಹಾಗೂ ಕನ್ನಡ ನಾಡು ನುಡಿ ಭಾಷೆ ಕಲೆ ಸಾಹಿತ್ಯ ಒಳಗೊಂಡ ಸಂಗಮವಾಗಿದೆ ಇಂಥ ಸಂಗಮದಲ್ಲಿ ಮಾನವ ಜಾತಿ ಎಣಿಸದೆ ನಾವೆಲ್ಲ ಭಾವೈಕ್ಯತೆದಿಂದ ಬದುಕಬೇಕೆಂದರು. ಗ್ರಾ.ಪಂ. ಸದಸ್ಯ ಧರ್ಮ ನಾಯಕ್ ಹೊನ್ನಾ ನಾಯಕ್ ಮುಖಂಡರಾದ ಕುಬೇರ್ಪ ಹಾಲಯ್ಯ ಶಾಸ್ತ್ರಿಗಳು ಅಂಗನವಾಡಿ ಕಾರ್ಯಕರ್ತರು ಗ್ರಾಮ ಪಂಚಾಯತಿಯ ಸದಸ್ಯರು ಉಪಸ್ಥಿತರಿದ್ದರು ನಂತರ ಅಸ್ಪೃಶ್ಯತಾ ಜಾಗೃತಿ ಗೀತೆಗಳು ಬೀದಿ ನಾಟಕ ಅಂಗೂರಿನ ಚಂದ್ರಶೇಖರ್ ಕಲಾಬಳಗದ ಕಲಾವಿದರಾದ ಕೆ ಸಿ ಪರಶುರಾಮ್ ಕೆ ಅಶೋಕ್ ನಾಗಪ್ಪ ಹಾವೇರಿ, ನೀಲಮ್ಮ ಕಿರಣ್ ಕುಮಾರ್ ಕೆ ಭೀಮೇಶ್ ಬಿ ರಾಜು ಸಂಗಡಿಗರು ಜಾಗೃತಿ ಗೀತೆ ಮತ್ತು ಬೀದಿ ನಾಟಕ ಪ್ರದರ್ಶನ ಗೊಳಿಸಿ ಜಾಗೃತಿ ಮೂಡಿಸಿದರು ಆರಂಭದಲ್ಲಿ ನಿಲಯ ಪಾಲಕ ಮಹಮ್ಮದ್ ರಫಿ ಸ್ವಾಗತಿಸಿ ಕೊನೆಯಲ್ಲಿ ಸಿದ್ದಲಿಂಗೇಶ ಹಾಲಿಗೆ ನಿರೂಪಿಸಿ ಅಭಿನಂದಿಸಿದರು