ಸರ್ಕಾರಿ ಶಾಲೆ ಉಳಿವಿಗಾಗಿ ಧಾರವಾಡ ಜಿಲ್ಲಾ ಮಟ್ಟದ ಪ್ರತಿಭಟನಾ ಸಮಾವೇಶ- ಕೆಪಿಎಸ್ ಮ್ಯಾಗ್ನೆಟ್‌ಯೋಜನೆ ವಿರುದ್ಧ ಭುಗಿಲೆದ್ದ ಜನತೆಯ ಆಕ್ರೋಶ!

ಸರ್ಕಾರಿ ಶಾಲೆ ಉಳಿವಿಗಾಗಿ ಧಾರವಾಡ ಜಿಲ್ಲಾ ಮಟ್ಟದ ಪ್ರತಿಭಟನಾ ಸಮಾವೇಶ- ಕೆಪಿಎಸ್ ಮ್ಯಾಗ್ನೆಟ್‌ಯೋಜನೆ ವಿರುದ್ಧ ಭುಗಿಲೆದ್ದ ಜನತೆಯ ಆಕ್ರೋಶ! Dharwad district-level protest rally for the survival of government schools - Public outrage erupts

ಧಾರವಾಡ 11: ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಹೆಸರಿನಲ್ಲಿ ಧಾರವಾಡ ಜಿಲ್ಲೆಯ 600ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು ವಿರೋಧಿಸಿ ಇಂದು ನಗರದ ವಿದ್ಯಾವರ್ಧಕ ಸಂಘ ದಲ್ಲಿ ನಮ್ಮೂರ ಸರ್ಕಾರ ಶಾಲೆ ಉಳಿಸಲು ಜಿಲ್ಲಾ ಮಟ್ಟದ ಪ್ರತಿಭಟನೆ ಸಮಾವೇಶವನ್ನು ಹಮ್ಮಿಕೊಳ್ಳಲಾಯಿತು.  ಮುಖ್ಯ ಭಾಷಣಕಾರರಾಗಿ ಎಐಡಿಎ ರಾಜ್ಯಉಪಾಧ್ಯಕ್ಷೆ ಅಪೂರ್ವರವರು ಮಾತನಾಡುತ್ತಾ, "ಇಂದು ಸಾವಿತ್ರಿ ಬಾಯ್‌ರವರ ಸ್ಮರಣ ದಿನ. ಹೆಣ್ಣು ಮಕ್ಕಳ, ಶೋಷಿತರ ಶಿಕ್ಷಣಕ್ಕಾಗಿ ದುಡಿದವರು ಅವರು. ಆದರೆಅವರ ಆಶಯಗಳನ್ನು ಸಾಕಾರಗೊಳಿಸುವ ಬದಲಾಗಿ, ಇಂದು ಸರ್ಕಾರಗಳು ಶಿಕ್ಷಣವನ್ನು ಬಡವರಿಂದ ಕಸಿಯುತ್ತಿದೆ. ಈ ನಿಟ್ಟಿನಲ್ಲಿರಾಜ್ಯ ಸರ್ಕಾರತಂದಿರುವ ನೀತಿಯೇ ಕೆಪಿಎಸ್ ಮ್ಯಾಗ್ನೆಟ್‌ಯೋಜನೆ. ಇತ್ತೀಚಿಗೆ ರಾಜ್ಯ ಬಜೆಟ್ ನಲ್ಲಿ,  "ಉನ್ನತ ಶಿಕ್ಷಣದ ಪರಿವರ್ತನೆ" ಮತ್ತು "ಗುಣಮಟ್ಟದ ಕಲಿಕೆ" ಎಂಬ ಆಕರ್ಷಕ ಪದಗಳ ಹೆಸರಿನಲ್ಲಿ ಶಿಕ್ಷಣವನ್ನು ಕೇಂದ್ರೀಕೃತಗೊಳಿಸುವ ಒಂದು ವ್ಯವಸ್ಥಿತ ಸಂಚಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಲಾದ ಪಾಲನ್ನು ಗಮನಿಸಿದರೆ, ಒಟ್ಟಾರೆ ಬಜೆಟ್ ಪ್ರಮಾಣದಲ್ಲಿ ಶಿಕ್ಷಣದ ಪಾಲು ಕಳೆದ ವರ್ಷಕ್ಕಿಂತ ಕುಸಿದಿರುವುದು (ಸುಮಾರು 10.5ಅ ಕ್ಕೆ ಇಳಿಕೆ) ಆತಂಕಕಾರಿ ಸಂಗತಿಯಾಗಿದೆ. ಇದು ಸರ್ಕಾರಕ್ಕೆ ಸಾರ್ವಜನಿಕ ಶಿಕ್ಷಣದ ಮೇಲಿರುವ ಬದ್ಧತೆಯಕೊರತೆಯನ್ನುಎತ್ತಿತೋರಿಸುತ್ತದೆ." 

"ಸಾರ್ವಜನಿಕ ಶಿಕ್ಷಣವನ್ನು ಉಳಿಸಿ" ಎಂಬ ಘೋಷಣೆಯಡಿಯಲ್ಲಿ, 'ಉತ್ತಮ ಕಲಿಕೆ, ಉಜ್ವಲ ಭವಿಷ್ಯ' ಎಂಬ ಧ್ಯೇಯವಾಕ್ಯದೊಂದಿಗೆ ?3,900 ಕೋಟಿಅನುದಾನದಲ್ಲಿ 800 ಶಾಲೆಗಳನ್ನು ಕರ್ನಾಟಕಪಬ್ಲಿಕ್ ಶಾಲೆಗಳನ್ನಾಗಿ (ಏಕಖ) ಮೇಲ್ದರ್ಜೆಗೇರಿಸುವ ಸರ್ಕಾರದ ಈ ಹಠಾತ್‌ಧೋರಣೆಯನ್ನು ನಾವು ಖಂಡಿಸಲೇಬೇಕು. ಕೇವಲ ಬೆರಳೆಣಿಕೆಯಷ್ಟು "ಮಾದರಿ" ಸಂಸ್ಥೆಗಳ ಮೇಲೆ ಮಾತ್ರ ಸಂಪನ್ಮೂಲಗಳನ್ನು ಕೇಂದ್ರೀಕರಿಸುವ ಮೂಲಕ, ಗ್ರಾಮೀಣ ಶಿಕ್ಷಣದ ಬೆನ್ನೆಲುಬಾಗಿರುವ ಸಾವಿರಾರು ನೆರೆಹೊರೆಯ ಪ್ರಾಥಮಿಕ ಶಾಲೆಗಳನ್ನು ಸರ್ಕಾರವುಅನಾಥವಾಗಿಸುತ್ತಿದೆ. ಇಡೀರಾಜ್ಯದ ಶಾಲೆಗಳ ಹೊಸ ಕೊಠಡಿ ನಿರ್ಮಾಣ ಮತ್ತು ದುಸ್ತಿಗೆ ನೀಡಲಾಗಿರುವ ಕೇವಲ ?565 ಕೋಟಿಅನುದಾನವು ಲಕ್ಷಾಂತರ ವಿದ್ಯಾರ್ಥಿಗಳ ಅಗತ್ಯಕ್ಕೆ ಹೋಲಿಸಿದರೆ ಅತ್ಯಲ್ಪವಾಗಿದೆ. ಅದೇರೀತಿ ಶೌಚಾಲಯಗಳಿಗೆ ?75 ಕೋಟಿ ಹಾಗೂ ಪೀಠೋಪಕರಣಗಳಿಗೆ ?25 ಕೋಟಿ ಮೀಸಲಿಟ್ಟಿರುವುದು ನಮ್ಮ ಶಾಲಾ ಕಟ್ಟಡಗಳ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ. ಕೆ.ಪಿ.ಎಸ್ (ಏಕಖ) ನೀತಿಯುಅಭಿವೃದ್ಧಿ ನಿಧಿಯ ಸಿಂಹಪಾಲನ್ನು ಕಬಳಿಸುತ್ತಿರುವುದರಿಂದ ಸಾಮಾನ್ಯ ಶಾಲೆಗಳು ಸೊರಗುತ್ತಿವೆ, ಎಂದು ವಿಷದ ವ್ಯಕ್ತಪಡಿಸಿದರು. 

ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಕಲಾವಿದರಾದ ಬಿ. ಮಾರುತಿರವರು ಪೋಷಕರನ್ನು ಉದ್ದೇಶಿಸಿ ಮಾತನಾಡುತ್ತಾ, ಶಿಕ್ಷಣವು ಸಾರ್ವತ್ರಿಕವಾಗಿ ಸಿಗಬೇಕೆಂದು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟವರು ಫುಲೆ ದಂಪತಿಗಳು. ಅವರ ಸಂಘರ್ಷದಿಂದ ಇಂದು ನಾವು ಶಿಕ್ಷಣವನ್ನು ಪಡೆಯಲು ಸಾಧ್ಯವಾಗಿದೆ. ಅಂತಹ ಶಿಕ್ಷಣ ಸಂಸ್ಥೆಗಳನ್ನು ಮತ್ತಷ್ಟು  ಸುಸಜ್ಜಿತಗೊಳಿಸಬೇಕಾದ ಸರ್ಕಾರಗಳು ಅದಕ್ಕೆ ವಿರುದ್ಧವಾಗಿ ಕೆಲಸಗಳನ್ನು ಮಾಡುತ್ತಿದೆ. ಸರ್ಕಾರದ ಈ ನೀತಿಯನ್ನು ತೀವ್ರವಾಗಿ ಖಂಡಿಸುವುದರೊಂದಿಗೆ ಸರ್ಕಾರಿ ಶಾಲೆ ಉಳಿಸಿ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತೇನೆ." ಎಂದರು.  ಮತ್ತೋರ್ವ ಅತಿಥಿಗಳಾಗಿ ಮಾತನಾಡಿದದಲಿತ ಸಂಘರ್ಷ ಸಮಿತಿಯರಾಜ್ಯ ಮುಖಂಡರಾದ ಲಕ್ಷ್ಮಣ್ ಬಸಪ್ಪದೊಡ್ಮನಿ ರವರು, ಇಂದು ಶೋಷಿತ ವರ್ಗದಜನರಿಗೆ, ದಲಿತರಿಗೆ, ಬಡವರಿಗೆ ಶಿಕ್ಷಣ ದೊರಕಲು ಸಾಧ್ಯವಾಗಿದ್ದು ಈ ಫುಲೆ ದಂಪತಿಗಳಿಂದ. ಆ ಶಿಕ್ಷಣ ಈ ವರ್ಗದಜನರಿಗೆ ಸಿಗಬೇಕೆಂದರೆ, ಸರ್ಕಾರಿ ಶಾಲೆಗಳ ಉಳಿವಿಗೆ ಹೋರಾಡಬೇಕಿದೆ.