ಸಾಮಾಜಿಕ ಕಾರ್ಯಗಳು ಮತ್ತು ಧರ್ಮ ಬೋಧನೆಗಳು ನಮ್ಮೆಲ್ಲರಿಗೆ ದಾರೀದೀಪಗಳಾಗಿವೆ

ಸಾಮಾಜಿಕ ಕಾರ್ಯಗಳು ಮತ್ತು ಧರ್ಮ ಬೋಧನೆಗಳು ನಮ್ಮೆಲ್ಲರಿಗೆ ದಾರೀದೀಪಗಳಾಗಿವೆ Social work and religious teachings are beacons of light for all of us

         ಶಿಗ್ಗಾವಿ 10 : ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಮಾಡುವ ಸಾಮಾಜಿಕ ಕಾರ್ಯಗಳು ಮತ್ತು ಧರ್ಮ ಬೋಧನೆಗಳು ನಮ್ಮೆಲ್ಲರಿಗೆ ದಾರೀದೀಪಗಳಾಗಿವೆ. ಜಾತಿಗಳಲ್ಲಿ ವಿಶ್ವಾಸವಿಡದೆ ಮಾನವೀಯತೆಯ ಧರ್ಮವನ್ನು ನಂಬಿ ಶ್ರೀಗಳು ಕಾರ್ಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವ ನೀರಲಗಿ ಹೇಳಿದರು. 

ಪಟ್ಟಣದ ವಿರಕ್ತಮಠದಲ್ಲಿ ನಡೆಯುತ್ತಿರುವ 33ನೇ ಶರಣ ಸಂಸ್ಕೃತಿ ಉತ್ಸವದ 5ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರೋಗ್ಯವನ್ನು ಕಳೆದುಕೊಂಡು ನಿರುತ್ಸಾಹಿಗಳಾಗುವ ಮುನ್ನ ಶರಣ ತತ್ವಗಳನ್ನು ಪಾಲಿಸಿ, ಉತ್ತಮ ಬದುಕನ್ನು ನಮ್ಮದಾಗಿಸಿಕೊಳ್ಳಬೇಕು.

         ಶರಣರ ವಚನಗಳು ವೈಚಾರಿಕತೆ, ಸಮಾನತೆ ಮತ್ತು ಸರ್ವೋದಯದ ಕಲ್ಪನೆಯನ್ನು ಬಿತ್ತಿದ್ದರಿಂದ ಸ್ತ್ರೀಯರಿಗೂ ಸಮಾನ ಅವಕಾಶಗಳು ಸಿಗುವಂತಾಯಿತು. ಜಗತ್ತಿನ ಬಹುತೇಕ ದೇಶಗಳು ಭಾರತೀಯ ಸಂಸ್ಕೃತಿಯನ್ನು ಅಪ್ಪಿಕೊಂಡು ಜೀವನದಲ್ಲಿ ನೆಮ್ಮದಿಯನ್ನು ಪಡೆಯುತ್ತಿದ್ದಾರೆ. ರಾಜ್ಯದ ಬಹುತೇಕ ಮಠಗಳು ಶರಣ ಸಂಸ್ಕೃತಿ ಉತ್ಸವವನ್ನು ಮಾಡುವ ಮೂಲಕ ಸಮಾಜದಲ್ಲಿ ಶಾಂತಿ ನೆಲಸಲು ಕಾರಣವಾಗುತ್ತಿವೆ ಎಂದರು. 

ಸದ್ಗುರು ಸಮರ್ಥ ಡಾಽ ಎ.ಸಿ.ವಾಲಿ ಮಹರಾಜರು ಮಾತನಾಡಿ, ಕಬೀರರು ಅಷ್ಠ ಐಶ್ವರ್ಯಗಳನ್ನು ದಿಕ್ಕರಿಸಿ ಹುಬ್ಬಳ್ಳಿಯ ಸಿದ್ದಾರೂಢರನ್ನು ನೋಡಲು ದೂರದ ಆಂದ್ರದಿಂದ ಹುಬ್ಬಳ್ಳಿಗೆ ಬಂದಿದ್ದರು. ಸಿದ್ದಾರೂಢರ ಸಾನಿಧ್ಯ ಕರುಣಿಸಿಕೊಂಡು ನಾನು ಯಾರು ಎಂಬುವ ಒಳಗಿನ ಜ್ಞಾನದ ತಿಳಿಯನ್ನು ತಿಳಿದುಕೊಂಡರು. ಗುರುವಿನಲ್ಲಿ ಆಳವಾದ ವಿಶ್ವಾಸವನ್ನು ಇಟ್ಟುಕೊಂಡವರಿಗೆ ಜೀವನದಲ್ಲಿ ಯಶಸ್ಸು ದೊರೆಯುತ್ತದೆ. ಯಾರಲ್ಲಿ ವಿನಯ ಮತ್ತು ನಮೃತೆ ಇರುತ್ತದೊ ಅವರಿಗೆ ಜ್ಞಾನದ ಭಲ ಸಿಗುತ್ತದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಸಂಗನಬಸವ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಬಸವಲಿಂಗ ದೇವರು ಮಾತನಾಡಿದರು. ದೇವರಾಜ ಸುಣಗಾರ, ಪ್ರಕಾಶ ಕೊಳಲ, ಶಿವಾನಂದ ಮಾದರ, ಶಶಿಕಾಂತ ರಾಠೋಡ, ನಾಗಪ್ಪ ಬೆಂತೂರ, ಸಿ.ಡಿ.ಯತ್ತನಹಳ್ಳಿ, ಶಮಕ್ರ​‍್ಪ ಮಡ್ಲಿಕರ, ಪರಶುರಾಮ ಕುದರಿ, ರುದ್ರಯ್ಯ ಕುಂಬಾರಗೇರಿಮಠ, ಬಸವಂತಪ್ಪ ದುಂಡಪ್ಪನವರ, ಹನುಮಂತಪ್ಪ ಜವಳಗಟ್ಟಿ  ಇತರರಿದ್ದರಿ.