ಕನ್ನಡಪರ ಸಂಘಟನೆಗಳ ವತಿಯಿಂದ ಮಂಗಳವಾರದಂದು ಸ್ಥಳೀಯ ಅಂಚೆ ವೃತ್ತದ ಬಳಿ ಪ್ರತಿಭಟಿಸಿ ಸಂಭಂದಿಸಿವರಿಗೆ ಮನವಿ

ಕನ್ನಡಪರ ಸಂಘಟನೆಗಳ ವತಿಯಿಂದ ಮಂಗಳವಾರದಂದು ಸ್ಥಳೀಯ ಅಂಚೆ ವೃತ್ತದ ಬಳಿ ಪ್ರತಿಭಟಿಸಿ ಸಂಭಂದಿಸಿವರಿಗೆ ಮನವಿ Pro-Kannada organizations protest near the local postal circle on Tuesday and appeal to the concerne

        ರಾಣೆಬೆನ್ನೂರ 11 :  ಏಷಿಯಾ ಖಂಡದಲ್ಲಿಯೇ ಬೀಜೋತ್ಪಾದನೆಗೆ  ಹೆಸರುವಾಸಿಯಾಗಿರುವ  ವಾಣಿಜ್ಯ ನಗರಿ ನಗರದ  ಹೃದಯ ಭಾಗದಲ್ಲಿರುವ ನೆಹರು ಮಾರುಕಟ್ಟೆಯನ್ನು  ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ  ವಿವಿಧ ಕನ್ನಡಪರ ಸಂಘಟನೆಗಳ ವತಿಯಿಂದ ಮಂಗಳವಾರದಂದು ಸ್ಥಳೀಯ ಅಂಚೆ ವೃತ್ತದ ಬಳಿ ಪ್ರತಿಭಟಿಸಿ ಸಂಭಂದಿಸಿವರಿಗೆ ಮನವಿ ಪತ್ರ ಅರ​‍್ಿಸಲಾಯಿತು.  

       ರೈತ ಸಂಘದ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ ನೆಹರು ಮಾರುಕಟ್ಟೆಯು ರೈತರ ಕೃಷಿ ಉತ್ಪನ್ನ ಮಾರಾಟಕ್ಕೆ ವೈಜ್ಞಾನಿಕವಾದ ಸ್ಥಳವಲ್ಲ, ಈ ಸ್ಥಳದಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸೂಕ್ತವಾಗಿಲ್ಲ, ಕೃಷಿ ಉತ್ಪನ್ನಗಳ ಖರೀದಿಗೆ ವಿವಿಧ ರಾಜ್ಯಗಳಿಂದ ವ್ಯಾಪಾರಸ್ಥರು ಈ ಸ್ಥಳಕ್ಕೆ ಆಗಮಿಸುವುದಿಲ್ಲ ಎಂದರು.  

       ಇಲ್ಲಿಯ ದಲ್ಲಾಳಿಗಳು ಮತ್ತು ಖರೀದಿದಾರರು ಒಳ ಒಪ್ಪಂದದ ಹೊಂದಾಣಿಕೆ ಮಾಡಿಕೊಂಡು ಉತ್ಪನ್ನಗಳ ದರ ಏರಿಕೆ ಮಾಡುತ್ತಾ ವ್ಯಾಪಾರ ವಹಿವಾಟು ಮುಂದುವರಿಸಿದ್ದಾರೆ. ಸದರಿ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳು ವ್ಯಾಪಾರಿಗಳಿಗೆ ಕಾಣದಿರುವುದು ಮತ್ತು ಮೂಲಸೌಕರ್ಯವಿಲ್ಲದಿರುವುದು ಕೃಷಿ ಉತ್ಪನ್ನಗಳ ತೂಕ ಮಾಡುವಾಗ ಎಪಿಎಂಸಿಯ ಯಾವುದೇ ಅಧಿಕಾರಿಗಳು ಸ್ಥಳದಲ್ಲಿ ಇರುವುದಿಲ್ಲ ಎಂದು ಗಂಭೀರವಾಗಿ ಆಪಾದಿಸಿದರು.  

      ಪ್ಲಾಟ್ ಪಾರ್ಮ ಸಮತಟ್ಟಾಗಿರುವದಿಲ್ಲ , ಇದರಿಂದ ತೂಕದಲ್ಲಿ ಅಜಗಜಾಂತರ ವ್ಯತ್ಯಾಸವಾಗುತ್ತದೆ, ಇದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ನೆಹರು ಮಾರುಕಟ್ಟೆಯು ಸದಾ ಜನರಿಂದ ತುಂಬಿ ತುಳುಕುತ್ತದೆ. ವಿವಿಧ ಧಾರ್ಮಿಕ ಸ್ಥಳಗಳಿಗೆ ಹೋಗಲು,  ಜಿಲ್ಲಾ ಕೇಂದ್ರಗಳಿಗೆ ಹಾಗೂ ಶಾಲಾ ವಾಹನಗಳು  ತೆರಳಲು ಟ್ರಾಫಿಕ್ ಸಮಸ್ಯೆ ಅನುಭವಿಸುವಂತಾಗಿದೆ.  

       ಒಟ್ಟಾರೆ ನೆಹರು ಮಾರುಕಟ್ಟೆ ಸ್ಥಳಾಂತರವಾಗುವುದರಿಂದ ರಾಣೆಬೆನ್ನೂರ ಅಭಿವೃದ್ಧಿ, ಶಾಲಾ ವಾಹನಗಳ ಓಡಾಟ ಸರಳಾಗುವುದು, ಸಂಚಾರ, ಕೃಷಿ ಉತ್ಪನ್ನ  ಮಾರಾಟದಲ್ಲಿ ವೈಜ್ಞಾನಿಕ ಹಾಗೂ ಪಾರದರ್ಶಕತೆ, ವ್ಯಾಪಾರ, ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ, ಇನ್ನು ಅನೇಕ ಆರೋಗ್ಯಕರ ಬೆಳವಣಿಗೆಯನ್ನು ಕಾಣಬಹುದು ಎಂದರು.  

         ಒಂದು ವೇಳೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ತಾಲೂಕ ಆಡಳಿತವು ಸಾರ್ವಜನಿಕರ ಹಿತ ದೃಷ್ಟಿಯಿಂದ ನೆಹರು ಮಾರುಕಟ್ಟೆಯನ್ನು ಸ್ಥಳಾಂತರದ ಕ್ರಮ ಕೈಗೊಳ್ಳದಿದ್ದಲ್ಲಿ  ಐವತ್ತಕ್ಕೂ ಹೆಚ್ಚು ಸಂಘಟನೆಗಳ ಸಹಯೋಗದೊಂದಿಗೆ ರಾಣೆಬೆನ್ನೂರು ಬಂದ್ ಕರೆ ನೀಡಲಾಗುವುದು  ಎಚ್ಚರಿಸಿದರು.  

        ಮನವಿ ಸಲ್ಲಿಕೆ ಮುಂಚೂಣಿಯಲಿ ಸ್ವಾ ಕರವೇ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಎಮ್ಮಿ, ಹರಿಹರ ಗೌಡ ಪಾಟೀಲ್, ಚಮನ್ ಸಾಬ್, ಜಗದೀಶ್ ಕೆರೂಡಿ, ಎಲ್ಲಪ್ಪ ಚಿಕ್ಕಣ್ಣನವರ್, ರಾಜು ಓಲೆಕಾರ, ಶೀವುಕುಮಾರ ಜಾಧವ, ಸಂಜೀವರೆಡ್ಡಿ ಮಧುಗುಣಕಿ, ಹನುಮಂತ ಗೌಡ ಪಾಟೀಲ್,ಕುರವತ್ತಿ,  ಸೇರಿದಂತೆ ಮತ್ತಿತರರು  ಪಾಲ್ಗೊಂಡಿದ್ದರು.  

    ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿದ  ಎಪಿಎಂಸಿಯ ಸಹ ಕಾ ಪರಮೇಶ್ ನಾಯಕ,  ಉಪತಹಶೀಲ್ದಾರ ಅರುಣ ಕಾರಗಿ, ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ವಿರೇಶ ಮೋಟಗಿ, ಕಾರ್ಯದರ್ಶಿ ಮಾಲತೇಶ ಚಳಗೇರಿ,  ಡಿವೈಎಸ್ಪಿ. ಜೆ.ಲೋಕೇಶ, ಸಿಪಿಐ ಎನ್ .ವೆಂಕಟರೆಡ್ಡಿ,  ಪಿಎಸ್ ಐ ಪರಮೇಶ ಡಿಜಿ ಯವರಿಗೆ ವಿವಿಧ ಸಂಘಟನೆಗಳು ಮನವಿ ಅರ​‍್ಿಸಿದರು.  
 ಬಾಕ್ಸ್‌: ನೇಹರು ಮಾರ್ಕೆಟ್ ವರ್ತಕರಿಗೆ ಈಗಾಗಲೇ ಮುಖ್ಯ ಮಾರುಕಟ್ಟೆಗೆ ಬಂದು ವ್ಯಾಪಾರ, ವಹಿವಾಟು ಮಾಡಲು ಆದೇಶದಂತೆ ಸೂಚಿಸಿದ್ದೇವೆ. ಒಟ್ಟು 111 ಮಳಿಗೆಗಳು ಬೇಕು.86 ವರ್ತಕರಿಗೆ ಅವಕಾಶ ಸಿಕ್ಕಿದೆ. ಇನ್ನು  ಉಳಿದವರಿಗೂ ಸಹ ವಿತರಿಸಲಾಗುವುದು- ಪರಮೇಶ ನಾಯಕ, ಸಹ ಕಾರ್ಯದರ್ಶಿಗಳು. ಎಪಿಎಂಸಿ.