ಸೋಮೇಶ್ವರ ಸಹಕಾರಿ ಸಕ್ಕರೆ ಕಾಖರ್ಾನೆಯ ಪ್ರದೀಪನ ಪೂಜೆ

ಬೈಲಹೊಂಗಲ: ದಿ.ಆರ್.ಸಿ. ಬಾಳೇಕುಂದರಗಿ ಅವರು ಈ ಭಾಗದಕಬ್ಬು ಬೆಳೆಗಾರ ರೈತರ ಸಮಸ್ಯೆಗಳನ್ನು ಅರಿತು ಕಾಖರ್ಾನೆಯನ್ನು ಹುಟ್ಟು ಹಾಕಿದ್ದು, ಆಡಳಿತ ಮಂಡಳಿ ಸದಸ್ಯರು, ಕಾಮರ್ಿಕರು ಪ್ರಾಮಾಣಿಕ ಸೇವಾ ಮನೊಭಾವನೆ ರೂಢಿಸಿಕೊಂಡು ಕಾಖರ್ಾನೆಯ ಪ್ರಗತಿಗೆ ಶ್ರಮಿಸಬೇಕೆಂದು ಶಾಖಾ ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಹೇಳಿದರು.

ಅವರುತಾಲೂಕಿನ ಸಿದ್ದಸಮುದ್ರ ಸೋಮೇಶ್ವರ ಸಹಕಾರಿ ಸಕ್ಕರೆ ಕಾಖರ್ಾನೆಯ ಪ್ರದೀಪನ ಪೂಜಾ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿ, ರೈತರು ಗುಣಮಟ್ಟದ ಕಬ್ಬು ಪೂರೈಕೆ ಮಾಡಿ ಕಾಖರ್ಾನೆ ಪ್ರಗತಿಗೆ ಕೈ ಜೋಡಿಸಬೇಕೆಂದರು.

ನಯಾನಗರ ಸುಖದೇವಾನಂದ ಮಠದ ಅಭಿನವ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಖಾಸಗಿ ಸಕ್ಕರೆ ಕಾಖರ್ಾನೆಯ ಪೈಪೋಟಿಯ ಮಧ್ಯೆ ಕೂಡಾ ಸೋಮೇಶ್ವರ ಸಹಕಾರಿ ಸಕ್ಕರೆ ಕಾಖರ್ಾನೆ ರಾಜ್ಯದಲ್ಲಿಯೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ರೈತರ ಬಾಳಿಗೆ ಕಾಮಧೇನು ಕಲ್ಪವೃಕ್ಷವಾಗಿದೆ ಎಂದರು.

ಕಾಖರ್ಾನೆ ಅಧ್ಯಕ್ಷ ಗುರುಪುತ್ರಪ್ಪ ಹೊಸಮನಿ ಮಾತನಾಡಿ, ಈ ಸಕ್ಕರೆ ಕಾಖರ್ಾನೆ ರೈತರ ಕಾಖರ್ಾನೆಯಾಗಿದ್ದು, ರೈತರು ಪ್ರಸಕ್ತ ಹಂಗಾಮಿಗೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಕೆ ಮಾಡಬೇಕೆಂದು ಮನವಿ ಮಾಡಿ, ಈ ಬಾರಿ ಅತೀ ಹೆಚ್ಚು ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದರು.

   ವ್ಯವಸ್ಥಾಪಕ ನಿದರ್ೇಶಕ ಕೆ.ಎಲ್. ಶ್ರೀನಿವಾಸ, ಉಪಾಧ್ಯಕ್ಷ ಪಾರೀಸಪ್ಪ ಭಾವಿ, ನಿದರ್ೇಶಕರಾದ ಮಲ್ಲಪ್ಪ ಮುರಗೋಡ, ಅಪ್ಪರಾಯ ರುದ್ರಾಪೂ, ರಾಜು ಕುಡಸೋಮಣ್ಣವರ, ಮಲ್ಲಿಕಾಜರ್ುನ ಗೂಳಪ್ಪನವರ, ಪ್ರದೀಪ ವಣ್ಣೂರ, ಅಶೋಕ ಬಾಳೇಕುಂದರಗಿ, ಶ್ರೀಖರ ಕುಲಕಣರ್ಿ, ಕಮಲಾ ಅವಕ್ಕನವರ, ಕಸ್ತೂರಿ ಸೊಮನಟ್ಟಿ, ಮಡಿವಾಳಪ್ಪ ಅಂಗಡಿ, ಅದೃಶ್ಯಪ್ಪ ಕೋಟಬಾಗಿ, ಸಣ್ಣಭೀಮಶೆಪ್ಪ ಅಂಬಡಗಟ್ಟಿ, ಗಂಗಪ್ಪ ಭರಮಣ್ಣವರ ಹಾಗೂ ಸೋಮೇಶ್ವರ ಕಾಖರ್ಾನೆಚಿು ಕಾಮರ್ಿಕರು, ಸಿಬ್ಬಂದಿ, ರೈತರು ಇದ್ದರು.

ತುರಮರಿಯ ಮಹಾಂತೇಶ ಶಾಸ್ತ್ರೀ ಹೋಮ-ಹವನ, ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ನಿದರ್ೇಶಕ ಬಸವರಾಜ ಮೊಖಾಶಿ ದಂಪತಿ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು.

ಇದೇ ವೇಳೆ ನ್ಯಾಷನಲ್ ಫೆಡರೇಶನ್ ಆಫ್ ಕೋ-ಆಫರೇಟಿವ್ ಶುಗರ್ ಫ್ಯಾಕ್ಟರಿ ದೆಹಲಿ ಇದರ ನಿದರ್ೇಶಕರಾಗಿ ಆಯ್ಕೆಯಾದ ಬಸವರಾಜ ಬಾಳೇಕುಂದರಗಿ ಅವರನ್ನು ಸತ್ಕರಿಸಲಾಯಿತು.

ಅಶೋಕ ಬೊಮ್ಮಣ್ಣವರ ನಿರೂಪಿಸಿ, ವಂದಿಸಿದರು.