ಸ್ಕಿನ್ ಬ್ಯಾಂಕ, ಟ್ರಿನಿಟಿ- 2018 ಹಿರಣ್ಯಮ್ ಉದ್ಘಾಟನೆ

ಬೆಳಗಾವಿ 27: ಸಮಾಜದ ಬೆಳವಣಿಗೆಯಲ್ಲಿ ಸಂಘ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವವಾದದ್ದು. ಉತ್ತರ ಕನರ್ಾಟಕ ಭಾಗದಲ್ಲಿ ಸರಕಾರವು ಮಾಡದ ಕೆಲಸವನ್ನು ಕೆಎಲ್ಇ ಸಂಸ್ಥೆ ಮಾಡಿ ತೋರಿಸಿದೆ. ಈ ಭಾಗದಲ್ಲಿ ಸಂಸ್ಥೆಗಳ ಬೆಳವಣಿಗೆ ಅತ್ಯಂತ ಸಂಧಿಗ್ನ ಪರಿಸ್ಥಿತಿಯಲ್ಲಿ ಆಗಿವೆ. ಅದರಲ್ಲಿಯೂ ವೈದ್ಯಕೀಯ ಶಿಕ್ಷಣ ಮತ್ತು ಚಿಕಿತ್ಸೆಯ ಕೊರತೆಯನ್ನು ಈ ಸಂಸ್ಥೆ ನೀಗಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಅವರಿಂದಿಲ್ಲಿ ಹೇಳಿದರು.

ನಗರದ ಕೆಎಲ್ಇ ಹೈಯರ ಎಜುಕೇಶನ ಆ್ಯಂಡ ರಿಸರ್ಚ ಸೆಂಟರ ನೂತನವಾಗಿ ಆರಂಭಿಸಿರುವ ಹೊಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ, ರೋಟರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾದ ಸ್ಕಿನ್ (ಚರ್ಮ) ಬ್ಯಾಂಕ ಹಾಗೂ ಟ್ರಿನಿಟಿ 2018 ಹಿರಣ್ಯಮ್ ಎಂಬ ಸುವರ್ಣ ಸಂಭ್ರಮಾಚರಣೆಯ ಉದ್ಘಾಟಿಸಿ ಮಾತನಾಡಿದರು.

ಸರಕಾರವೇ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ಉತ್ತರ ಕನರ್ಾಟಕ ಭಾಗದಲ್ಲಿ ಸರಕಾರಕ್ಕಿಂತ ಅತ್ಯಧಿಕವಾದ ಒಳ್ಳೆಯ ಕಾರ್ಯಗಳನ್ನು ಸಂಘ ಸಂಸ್ಥೆಗಳು ಮಾಡಿವೆ. ಸಾಮಾಜಿಕ ಹೊಣೆಗಾರಿಕೆಯನ್ನು ಅರಿತುಕೊಂಡಾಗ ಮಾತ್ರ ಸಂಸ್ಥೆಗಳಿಗೆ ಪ್ರಜ್ಞೆ ಬರುತ್ತದೆ. ಸಮಾಜ ಅಭಿವೃದ್ದಿಯಾದರೇ ಸಂಸ್ಥೆ ತಾನಾಗಿಯೇ ಅಭಿವೃದ್ದಿಗೊಳ್ಳುತ್ತದೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಆದ್ದರಿಂದಲೇ ಕೆಎಲ್ಇ ಸಂಸ್ಥೆಯು ಶಿಕ್ಷಣದ ಮೂಲಕ ಅಮೂಲಾಗ್ರ ಬದಲಾವಣೆ ಮಾಡಿದೆ. ಇಂದು ನಾನು ಆರೋಗ್ಯ ಸಚಿವನಾಗಲು ಈ ಸಂಸ್ಥೆಯೇ ಕಾರಣ. ಇಲ್ಲಿ ನಾನು ಶಿಕ್ಷಣ ಪಡೆದದ್ದು ಸಾರ್ಥಕವಾಯಿತು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಪ್ರತಿವರ್ಷ 900 ಕೋ.ರೂಗಳ ವೆಚ್ಚದ ಆರೋಗ್ಯ ಸೇವೆಯನ್ನು ಜಾರಿಗೆ ತರಲಾಗಿದೆ. ಕೇಂದ್ರದ ಆಯುಷ್ಯಮಾನ ಹಾಗೂ ರಾಜ್ಯದ ಕನರ್ಾಟಕ ಆರೋಗ್ಯ ಸೇವೆಯನ್ನು ಒಗ್ಗೂಡಿಸಿ ಸೇವೆ ನೀಡಲಾಗುತ್ತದೆ. ಕೇಂದ್ರ ಶೇ.60 ರಷ್ಟು ಅನುದಾನ ನೀಡಿದರೆ ರಾಜ್ಯವು ಶೇ. 40ರಷ್ಟು ಹಣ ನೀಡಲಿದೆ. ಬೆಂಗಳೂರಿನಲ್ಲಿ 1 ಕೋ. ರೂಗಳ ವೆಚ್ಚದಲ್ಲಿ ಹೊಮಿಯೋಪತಿ ಭವನ ನಿಮರ್ಿಸಲಾಗುತ್ತದೆ. ಉ. ಭಾರತಕ್ಕಿಂತ ದ. ಭಾರತದಲ್ಲಿ ಸಕಲ ವಿಧದಲ್ಲೂ ಸೌಲಭ್ಯಗಳು ಅಧಿಕ. ಶಿಕ್ಷಣ, ವೈದ್ಯಕೀಯ, ಸಂಶೋಧನೆ ಹಾಗೂ ತಾಂತ್ರಿಕತೆಯಲ್ಲಿ ನಾವು ಮುಂದಿದ್ದೇವೆ ಎಂದು ವಿವರಿಸಿದರು. 

ಕೆಎಲ್ಇ ಹೈಯರ ಎಜ್ಯುಕೇಶನ & ರಿಸರ್ಚ ಕೇಂದ್ರದ ಕುಲಾಧಿಪತಿಗಳಾದ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ, ರಾಜ್ಯದ ವಿವಿಧ ನಗರಗಳಲ್ಲಿ 200 ಹಾಸಿಗೆಗಳ ಆಸ್ಪತ್ರೆಯನ್ನು ನಿಮಿಸಲು ಉದ್ದೇಶಿಸಲಾಗಿದೆ. ಶೀಘ್ರದಲ್ಲಿಯೇ ಪುಣೆಯಲ್ಲಿ ಆಸ್ಪತ್ರೆ ಪ್ರಾರಂಭವಾಗಲಿದೆ. ಸಂಸ್ಥೆಯು ಸರ್ವ ರೀತಿಯ ಶಿಕ್ಷಣ ನೀಡುತ್ತಿತ್ತು ಆದರೆ ಹೊಮಿಯೋಪತಿ ಮಾತ್ರ ಕೊರತೆಯಾಗಿತ್ತು. ಪ್ರಸಕ್ತ ಸಾಲಿನಿಂದ ಆ ಕೊರತೆಯನ್ನು ದೂರ ಮಾಡಲಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಈ ಭಾಗದಲ್ಲಿ ಅನೇಕ ಗಂಭೀರ ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ಪ್ರಥಮ ಬಾರಿಗೆ 10 ಲಕ್ಷ ವೆಚ್ಚದ ಹೃದಯ ಶಸ್ತ್ರಚಿಕಿತ್ಸೆಗೆ ಕೆಎಲ್ಇ ಆಸ್ಪತ್ರೆಯಲ್ಲಿ ಕೇವಲ 60 ಸಾವಿರ ಆಕರಿಸಲಾಗಿತ್ತು. ಈಗ ಕಿಡ್ನಿ, ಹೃದಯ, ಲೀವರ ಹಾಗೂ ವಿವಿಧ ಅಂಗಾಂಗಳ ಕಸಿ ಮಾಡಲಾಗುತ್ತಿದ್ದು ರೋಟರಿಯಂತ ಸಂಸ್ಥೆಗಳು ಸಾರ್ವಜನಿಕರಲ್ಲಿ ಅಂಗಾಂಗ ದಾನಗಳ ಕುರಿತು ಜಾಗೃತಿ ಮೂಡಿಸುವಂತೆ ಕರೆ ನೀಡಿದರು. 

ರೋಟೆರಿಯನ್ ಹಾಗೂ ಉದ್ಯಮಿ ಅನಿಲ ಪೋತದಾರ ಅವರು ಮಾತನಾಡಿ, ಪೋಲಿಯೋ ಮುಕ್ತ ವಿಶ್ವ ನಿಮರ್ಾಣ ಮಾಡುವಲ್ಲಿ ರೋಟರಿ ಕ್ಲಬ್ನ ಪಾತ್ರ ಅತ್ಯಂತ ಮುಖ್ಯವಾಗಿದೆ. ಪಾಕಿಸ್ತಾನದಲ್ಲಿ-4 ಹಾಗೂ ಅಪಘಾನಿಸ್ತಾನದಲ್ಲಿ 40 ಪೊಲಿಯೋ ಪ್ರಕರಣಗಳು ಕಂಡು ಬಂದಿವೆ ಅವುಗಳನ್ನು ಕೂಡ ಕೊನೆಗಾನಿಸಲು ಸಮರ ಸಾರಲಾಗಿದೆ. ಆರೋಗ್ಯ ಕ್ಷೇತ್ರಕ್ಕೆ ಅತ್ಯಧಿಕ ಹಣ ವ್ಯಯಿಸುತ್ತಿದ್ದು, ಈಗ ಸ್ಕಿನ್ ಬ್ಯಾಂಕ ಸ್ಥಾಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ನಗರದಲ್ಲಿ ಸುಮಾರು 14 ಸಾವಿರ ಡಾಲರ ವೆಚ್ಚದಲ್ಲಿ ನೇತ್ರ ಭಂಡಾರ ಪ್ರಾರಂಭಿಸಲಾಗುತ್ತದೆ. ಸರಕಾರ ಮತ್ತು ಕೆಎಲಇ ಸಂಸ್ಥೆಯೊಂದಿಗೆ ಜೊತೆಗೂಡಿ ಜನರ ಆರೋಗ್ಯ ಕಾಪಾಡುವದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಕುಲಪತಿ ವಿವೇಕ ಸಾವೋಜಿ, ರೋಟೆರಿಯನ್ ಸತೀಶ ಧಾಮನಕರ ಮಾತನಾಡಿದರು. ವೇದಿಕೆಯ ಮೇಲೆ ಡಾ. ವಿ ಡಿ ಪಾಟೀಲ, ಡಾ. ಎನ್ ಮಹಾಂತಶೆಟ್ಟಿ, ರವಿ ಕುಲಕಣರ್ಿ, ಡಾ. ಬಿ ಎಂ ಪಾಟೀಲ, ಡಾ. ಶ್ರೀನಿವಾಸ ಪ್ರಸಾದ ಉಪಸ್ಥಿತರಿದ್ದರು. ಡಾ. ಅವಿನಾಶ ಕವಿ ನಿರೂಪಿಸಿದರು. ಹೊಮಿಯೋಪಥಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಮುಕುಂದ ಉಡಚನಕರ ಅವರು ವಂದಿಸಿದರು.