ಲೋಕದರ್ಶನ ವರದಿ
ಸಿಂದಗಿ 26: ಖಾಸಗಿ ಶಾಲೆಗಳಿಗೆ ಆರ್ಟಿಇ ಹಣ ಬಿಡುಗಡೆಯಾಗದೇ ಇರುವುದು, ಅನಧಿಕೃತ ಶಾಲೆಗಳ ಬಗ್ಗೆ ಕ್ರಮ ಕೈಕೊಳ್ಳದೇ ಇರುವುದು, ಸಂಜೀವಿನಿ ಕೆರೆ ಕಾಮಗಾರಿ ಬಗ್ಗೆ, ವಿವಿಧ ಇಲಾಖೆಗಳ ಬಗ್ಗೆ ಚಚರ್ೆಗಳು ನಡೆದವು. ತಾಲೂಕಿನ ಅಭಿವೃದ್ಧಿಯ ಕಾರ್ಯದ ಬಗ್ಗೆ ಹೆಚ್ಚು ಚರ್ಚೆ ಇಲಾಖೆಗಳ ಮೇಲೆ ಆರೋಪದಲ್ಲಿಯೇ ಘಟನೆ ಮಂಗಳವಾರ ತಾಲೂಕು ಪಂಚಾಯತಿ ಸಭಾಭವನದಲ್ಲಿ ನಡೆದ ತಾಪಂ 11ನೇ ಸಾಮಾನ್ಯ ಸಭೆಯಲ್ಲಿ ನಡೆಯಿತು.
ತಾಲೂಕಿನನಲ್ಲಿ ಪೂರ್ವಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆಗಳ ಅನುಮತಿ ನೀಡುವಲ್ಲಿ ಯಾವ ಮಾನ ದಂಡವನ್ನು ಉಪಯೋಗಿಸುತ್ತಿರಿ, ಅನವಶ್ಯಕವಾಗಿ ಶಿಕ್ಷಕರನ್ನು ನಿಯೋಜನೆಗೆ ಕಳುಹಿಸುತ್ತಿರಿ, ಕೆಲ ಸರಕಾರಿ ಪ್ರೌಢಶಾಲೆಯಲ್ಲಿನ ಟಿಸಿಕಿತ್ತಿ ಖಾಸಗಿ ಪ್ರೌಢಶಾಲೆಗೆ ಸಹಾಯ ಮಾಡುತ್ತಿದ್ದಿರಿ ಎಂದು ಆರೋಪಿಸಿದ ಹಣಮಂತ ಸಂದಿಮನಿ ಅವರು ಶಿಕ್ಷಣ ಇಲಾಖೆ ವಿರುದ್ಧ ಆರೋಪಿಸಿದರು.
ತಾಲೂಕಿನಲ್ಲಿ ಅನಧಿಕೃತ ಶಾಲೆಗಳಿವೆ ಅವುಗಳ ಬಗ್ಗೆ ಏನು ಕ್ರಮಕೈಕೊಂಡಿದ್ದಿರಿ. ನೀವು ಮತ್ತು ತಾಲೂಕಿನ ಅಧಿಕಾರಿಗಳು ಕೂಡಿಕೊಂಡು ಒಂದು ಸಮೀತಿಯನ್ನು ಮಾಡಿಕೊಂಡು ಅನಧಿಕೃತ ಶಾಲೆಗಳ ಬಗ್ಗೆ ಕ್ರಮವಹಿಸಿ ಎಂದು ಸದಸ್ಯ ಲಕ್ಕಪ್ಪ ಬಡಿಗೇರ ಅವರು ಅಧಿಕಾರಿಯವರನ್ನು ಪ್ರಶ್ನಿಸಿದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಎ.ವಾಯ್.ಹಿರೇಕುರಬರ ಮಾತನಾಡಿ, ತೋಗಾರಿಕೆ ಇಲಾಖೆಯ ಪ್ರಗತಿಯನ್ನು ಓದಿ ಹೇಳಿ ದ್ರಾಕ್ಷಿ ಬೆಳೆಗಾರರ ಆಯ್ಕೆ ಮಾಡಿದ ಫಲಾನುಭವಿ ರೈತರ ಬಗ್ಗೆ ವಿವರವಾಗಿ ತಿಳಿಸಿದರು.
ಕೃಷಿ ಇಲಾಖೆ ಕೃಷಿ ಸಹಾಯಕ ನಿರ್ದೇಶಕ ಡಾ.ಎಚ್.ವೈ.ಸಿಂಗೆಗೋಳ ಇಲಾಖೆ ಮಾಹಿತಿ ನೀಡಿ, ತಾಲೂಕಿನಲ್ಲಿನ 3 ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ದಾಸ್ತಾನು ವಿತರಣೆ ಮಾಡಲು ಪ್ರಾರಂಭಿಸಲಾಗಿದೆ. ತೊಗರಿ, ಸಜ್ಜೆ, ಸೂರ್ಯಕಾಂತಿ ಬಿತ್ತನೆ ಬೀಜ, ರಸಗೊಬ್ಬರಗಳು ಲಭ್ಯವಿರುತ್ತವೆ. ಶೂನ್ಯ ಬಂಡವಾಳ ಎಂಬ ಯೋಜನೆ ಪ್ರಾರಂಬವಾಗಿದೆ ಎಂದು ತಿಳಿಸಿದರು. ಲಘು ನೀರಾವರಿ ಘಟಕಗಳಿದ್ದು ಅವುಗಳನ್ನು ಸಹ ನೀಡಲಾಗುವದು ಎಂದು ತಿಳಿಸಿದರು.
ಬಿಸಿಎಂ.ಅಧಿಕಾರಿ ಬಸಯ್ಯ ಗೋಳಮಠ, ಸಾರಿಗೆ ಸಂಸ್ಥೆ ಘಟಕದ ವ್ಯವಸ್ಥಾಪಕ ಎ.ಎಚ್.ಮಧುಭಾವಿ, ಆಹಾರ ಶಿರಸ್ತೆದಾರ ಕೆ.ವಿ.ಜಾಡರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿಯನ್ನು ವಿವರಿಸಿದರು.
ಸದಸ್ಯರಾದ ಎಂ.ಎನ್.ಕಿರಣರಾಜ, ಶ್ರೀಶೈಲ್ ಚಳ್ಳಗಿ, ಸಂಜೀವಕುಮಾರ ಯಂಟಮನ, ಶ್ರೀಶೈಲ ಕಬ್ಬಿನ ಸೇರಿದಂತೆ ಇನ್ನುಳಿದ ಸದಸ್ಯರು ಇಲಾಖೆಗಳ ಚಚರ್ೆಗಳಲ್ಲಿ ಭಾಗವಹಿಸಿದ್ದರು.
ತಾಪಂ ಅಧ್ಯಕ್ಷೆ ಪ್ರಭಾವತಿ ಶಿರಸಗಿ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷೆ ಲಲಿತಾಬಾಯಿ ದೊಡಮನಿ, ಇಓ ಸುನೀಲ ಮದ್ದಿನ ವೇದಿಕೆ ಮೇಲಿದ್ದರು.