ಶಿವು ಉಪ್ಪಾರ ಹತ್ಯೆ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ

ಲೋಕದರ್ಶನ ವರದಿ

ಗದಗ 03: ಬೆಳಗಾವಿ ಜಿಲ್ಲೆಯ ಬಾಗೇವಾಡಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಗೋಪಾಲಕ ಶಿವು ಉಪ್ಪಾರ ಪ್ರಕರಣವನ್ನು  ರಾಜ್ಯ ಸರಕಾರ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆಯೆಂದು  ಶ್ರೀರಾಮ ಸೇನೆಯ ಧಾರವಾಡ ವಿಭಾಗೀಯ ಸಂಚಾಲಕ ರಾಜೂ ಖಾನಪ್ಪನವರ ಆರೋಪಿಸಿದರು.

ಇಲ್ಲಿಯ ಮಹಾವೀರ ವತರ್ುಳದಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿ ಜಿಲ್ಲಾ ಶ್ರೀರಾಮ ಸೇನೆಯ ನೂರಾರು ಕಾರ್ಯಕರ್ತರು ಗದಗನಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯದಲ್ಲಿ ಗೋಹತ್ಯೆ ನಿರಂತರವಾಗಿ ನಡೆಯುತ್ತಿದೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳಿಂದ ಗೋಹತ್ಯೆಯ ಪ್ರಮಾಣ ಹೆಚ್ಚಾಗುತ್ತಿದೆ. ಗೋಹತ್ಯೆಗೆ ರಾಜ್ಯ ಸರಕಾರ ಸಹ ಪರೋಕ್ಷವಾಗಿ ಸಹಕಾರ ನೀಡುತ್ತಿದೆಯೆಂದು ಆರೋಪಿಸಿದರು.

ಬೆಳಗಾವಿ ಜಿಲ್ಲೆಯ ಬಾಗೇವಾಡಿಯಲ್ಲಿ ಗೋಹತ್ಯೆಯನ್ನು ವಿರೋಧಿಸುತ್ತಿದ್ದ ಶಿವು ಉಪ್ಪಾರನನ್ನು ಗೋಹಂತಕರು ದಾರುಣವಾಗಿ ಹತ್ಯೆ ಮಾಡಿದ್ದಾರೆ. ನಂತರ ಅತನೇ ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಈ ಘಟನೆಯಲ್ಲಿ ಕೆಲ ಕಾಣದ ಕೈಗಳು ಕೆಲಸ ನಿರ್ವಹಿಸುತ್ತಿವೆ. ಈ ಪ್ರಕರಣವನ್ನು ರಾಜ್ಯ ಸರಕಾರ ಕೂಡಲೇ ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲಿ ಗೋಹತ್ಯೆ ಕಾನೂನನ್ನು ಸಮರ್ಪಕವಾಗಿ ಜಾರಿಗೋಳಿಸಬೇಕು. ಗೋಹತ್ಯೆ ಮಾಡುವವರು,ಗೋಹತ್ಯೆಗೆ ಪ್ರೇರೇಪಿಸುವವರನ್ನು ಉಗ್ರ ಶಿಕ್ಷೆಗೋಳಪಡಿಸುವಂತೆ ಒತ್ತಾಯಿಸಿದರು.

ಪುರಪ್ರವೇಶ ಮಹಾವೀರ ವತರ್ುಳದಿಂದ ಪ್ರಾರಂಭವಾದ ಈ ಪ್ರತಿಭಟನಾ ರ್ಯಾಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು. ಈ ಸಂದರ್ಭದಲ್ಲಿ ನೆರೆದಿದ್ದ ನೂರಾರು ಶ್ರೀರಾಮ ಸೇನೆಯ ಕಾರ್ಯಕರ್ತರು ಸರಕಾರ, ಪೊಲೀಸ್ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾ ರ್ಯಾಲಿಯಿಂದಾಗಿ ಹುಬ್ಬಳ್ಳಿ ರಸ್ತೆ ಸಂಪೂರ್ಣವಾಗಿ ಜಾಮ್ ಆಗಿತ್ತು. ರಸ್ತೆ ಸಂಚಾರವನ್ನು ಸರಿಪಡಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಮುಳಗುಂದ ನಾಕಾದಲ್ಲಿ ಸುಮಾರು 15 ನಿಮಿಷ್ ರಸ್ತೆ ತಡೆಯನ್ನು ಮಾಡಲಾಯಿತು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಈ ಬಗ್ಗೆ ಮನವಿಯನ್ನು ರಾಜ್ಯ ಸರಕಾರಕ್ಕೆ ರವಾನಿಸಿ ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡುವದಾಗಿ ಭರವಸೆ ನೀಡಿದರು.

ಜಿಲ್ಲಾ ಶ್ರೀರಾಮ ಸೇನೆಯ ಸಂಚಾಲಕ ಮಹೇಶ ರೋಖಡೆ, ಸುರೇಶ ಹಾದಿಮನಿ, ಸುರೇಶ ಹೆಬಸೂರ,ಪಂಚಾಕ್ಷರಿ ಅಂಗಡಿ, ರಾಹುಲ್ ಸುಗಂಧಿ,ರಾಜೂ ಗದ್ದಿ,ಸಂಜೀವ ಸೂರ್ಯವಂಶಿ, ಕಿರಣ ಹಿರೇಮಠ, ಸದಾನಂದಸಿಂಗ್ ಗುರ್ಲಹೊಸೂರ, ವಿನಾಯಕ ಈಟಿ, ಕಾತರ್ೀಕ ಲದ್ವಾ, ಹನುಮಂತಸಾ ಕಲಬುಗರ್ಿ, ಈರಣ್ಣ ಗಾಣಿಗೇರ, ಪ್ರಕಾಶ ಗುಜರಾತಿ, ರಾಕೇಶ ಆಲೂರ, ರಾಕೇಶ ನವಲಗುಂದ, ವಿರೇಶ ನಾಲ್ವಾಡದ, ಮಹಾಂತೇಶ ಪಾಟೀಲ, ವಿರೇಶ ಮಾನ್ವಿ, ಹುಲಗಪ್ಪ ವಾಲ್ಮೀಕಿ, ಗೋಣಿಬಸಪ್ಪ ಕರಿಗಾರ, ಮುಂತಾದವರಿದ್ದರು