ಗದಗ 15: ಪದೇ ಪದೇ ಬರ ಪರಿಸ್ಥಿತಿ ಎದುರಿಸುತ್ತಿರುವ ಗದಗ ಜಿಲ್ಲೆಯ ಗದಗ ಹಾಗೂ ರೋಣ ತಾಲೂಕುಗಳನ್ನು ಜಲಶಕ್ತಿ ಅಭಿಯಾನದಡಿ ಕೇಂದ್ರ ಸರ್ಕಾರ ಗುರುತಿಸಿದೆ. ಈ ತಾಲೂಕುಗಳಲ್ಲಿ ಜಲ ಸಂರಕ್ಷಣೆ, ಸಂವರ್ಧನೆ ಹಾಗೂ ನೀರಿನ ಇಂಗಿಸುವಿಕೆ ಕುರಿತಂತೆ ಜನಜಾಗೃತಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಪದವಿ ಪೂರ್ವ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆರೋಗ್ಯ ಮತ್ತು ಆಯುಷ್ ಇಲಾಖೆಗಳು ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೂಚಿಸಿದರು.
ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಗದಗ ಹಾಗೂ ರೋಣ ತಾಲೂಕಿನ ನಗರಪ್ರದೇಶಗಳಲ್ಲಿ ಕೇಂದ್ರ ಸಕರ್ಾರ ಜಲಶಕ್ತಿ ಅಭಿಯಾನವನ್ನು ಜಾರಿಗೊಳಿಸುವ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗದಗ ಬೆಟಗೇರಿ, ರೋಣ, ಗಜೇಂದ್ರಗಡ ಹಾಗೂ ನರೇಗಲ್ ಪ್ರದೇಶಗಳಲ್ಲಿ ಇರುವ ಎಲ್ಲ ಸಕರ್ಾರಿ ಇಲಾಖೆಗಳ ಹಾಗೂ ಸಂಸ್ಥೆಗಳ ಕಟ್ಟಡಗಳು ಶಾಲಾ ಕಾಲೇಜುಗಳು, ವಿವಿಧ ಸಮುದಯ ಭವನಗಳು, ವಿದ್ಯಾರ್ಥಿ ವಸತಿ ನಿಲಯಗಳು, ಅಂಗನವಾಡಿ ಸಮುದಾಯ ಭವನಗಳು ರಾಜ್ಯ ಸರ್ಕಾರದ ಆದೇಶದಂತೆ ಮಳೆ ನೀರು ಸಂಗ್ರಹ ಹಾಗೂ ಇಂಗಿಸುವಿಕೆಗೆ ಅಗತ್ಯದ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಈ ಕುರಿತಂತೆ ಜಿಲ್ಲಾ ನಗರಾಭಿವೃದ್ಧಿ ಕೋಶವು ಎಲ್ಲ ಕಟ್ಟಡಗಳಿಗೆ ಅನ್ವಯಿಸಿ ಈ ಕಾರ್ಯ ನಿರ್ವಹಿಸುವುದಕ್ಕ ಏಕೀಕೃತ ಟೆಂಡರ್ ಕರೆಯಲು ಸೂಚಿಸಿದರು. ಸಂಬಂಧಿತ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿರುವ ಕಟ್ಟಡಗಳ ವಿಸ್ತೀರ್ಣ, ಕಟ್ಟಡಗಳ ಮಾದರಿ ಮುಂತಾದ ವಿವರಗಳನ್ನು ನಗರ ವಾರು, ಕಟ್ಟಡವಾರು ವಿಸ್ತೀರ್ಣ ವಿವರಗಳನ್ನು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ ಕಚೇರಿಗೆ ಸಲ್ಲಿಸಲು ಜಿಲ್ಲಾಧಿಕಾರಿಗಳು ನಿದರ್ೇಶನ ನೀಡಿದರು. ಈ ಎರಡೂ ತಾಲೂಕುಗಳ ನಗರ ಪ್ರದೇಶಗಳಲ್ಲಿನ ಕೊಳವೆ ಬಾವಿಗಳ ಪುನಶ್ಚೇತನ ಹಾಗೂ ಕೆರೆ ಬಾವಿಗಳ ಪುನಶ್ಚೇತನ ಮತ್ತು ಹಸುರೀಕರಣ ಕುರಿತಂತೆ ಇಲಾಖೆಗಳು ಕೈಕೊಳ್ಳಬೇಕಾದ ಕಾರ್ಯಗ ಳ ಕುರಿತು ಸಭೆಯಲ್ಲಿ ಚಚರ್ಿಸಲಾಯಿತು.
ಜಿಲ್ಲೆಯ ನಗರ ಪ್ರದೇಶದಲ್ಲಿರುವ ಸಾರಿಗೆ ಸೇರಿದಂತೆ ಎಲ್ಲ ವಾಣಿಜ್ಯ ಘಟಕಗಳ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ಹಾಗೂ ಇಂಗಿಸುವಿಕೆ ಕುರಿತಂತೆ ಈಗಾಗಲೇ ರಾಜ್ಯ ಸರ್ಕರ ಆದೇಶ ಹೊರಡಿಸಿದ್ದು ಅದನ್ನು ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿದರ್ೇಶಕ ರುದ್ರೇಶ ತಿಳಿಸಿದರು.
ಗದಗ ಜಿಲ್ಲಾ ಪಂಚಾಯತಿ ಯೋಜನಾ ನಿದರ್ೇಶಕ ಟಿ ದಿನೇಶ ಮಾತನಾಡಿ ಕೇಂದ್ರ ಸರ್ಕಾರ ದೇಶದ 256 ಜಿಲ್ಲೆಗಳಲ್ಲಿ ಜಲಶಕ್ತಿ ಅಭಿಯಾನ ಕೈಗೊಳ್ಳಲು ತಿಳಿಸಿ ಪ್ರತಿಯೊಂದು ಜಿಲ್ಲೆಗೆ ಕೇಂದ್ರಸರ್ಕಾರದಿಂದ ನೋಡ್ ಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಗದಗ ಹಾಗೂ ರೋಣ ತಾಲೂಕಿನಲ್ಲಿ ಅಂತರ್ಜಲ ಇರುವಿಕೆ ಮಟ್ಟ ಆಧರಿಸಿ ಇವುಗಳನ್ನು ಆಯ್ಕೆ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಜಲಶಕ್ತಿ ಅಭಿಯಾನ ಕುರಿತಂತೆ ಕಾರ್ಯಕ್ರಮ ರೂಪಿಸಲಾಗುತ್ತಿದ್ದು ನಗರ ಪ್ರದೇಶದಲ್ಲಿ ನಗರಾಭಿವೃದ್ಧಿ ಕೋಶದ ಮೂಲಕ ಜಲ ಸಂವರ್ಧನೆ, ಜಲ ಸಂರಕ್ಷಣೆ ಮಳೆ ನೀರು ಸಂಗ್ರಹ, ಹಸುರೀಕರಣ ಕಾರ್ಯಗಳನ್ನು ಆದ್ಯತೆ ಮೇಲೆ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ, ಹಾಗೂ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.