ಮಹಿಳೇಯರ ಸಬಲೀಕರಣಕ್ಕಾಗಿ ಸ್ವ ಉದ್ಯೋಗದ ಅವಶ್ಯಕತೆಯಿದೆ : ಉಮಾ

Self-employment is needed for women's empowerment: Uma

ಮಹಿಳೇಯರ ಸಬಲೀಕರಣಕ್ಕಾಗಿ ಸ್ವ ಉದ್ಯೋಗದ ಅವಶ್ಯಕತೆಯಿದೆ : ಉಮಾ  

ಶಿಗ್ಗಾವಿ 24: ಮಹಿಳೇಯರ ಸಬಲೀಕರಣಕ್ಕಾಗಿ ಹಾಗೂ ಮಹಿಳೆಯರು ಸ್ವಾವಲಂಬಿಯಾಗಿ ಜೀವನ ನಿರ್ವಹಣೆ ಮಾಡಲು ಸ್ವ ಉದ್ಯೋಗದ ಅವಶ್ಯಕತೆಯಿದೆ ಎಂದು ಯೋಜನಾಧಿಕಾರಿ ಉಮಾ ಹೇಳಿದರು. 

      ಪಟ್ಟಣದ ಕಾರ್ಯಾಲಯದಲ್ಲಿ  ಶಿಗ್ಗಾವಿ  ವಲಯದ ಕಾರ್ಯಕ್ಷೇತ್ರ ಸಂಘ ಸದಸ್ಯರಿಗೆ   ಸಹಾಯ ಸಂಘಗಳ ಫಲಾನುಭವಿಗಳಿಗೆ ಉಚಿತ ಕೌಶಲ್ಯಾಭಿವೃದ್ಧಿ  ತರಬೇತಿ ಕಾರ್ಯಕ್ರಮದಡಿಯಲ್ಲಿ ಕೇಂದ್ರದ ಸದಸ್ಯರಿಗೆ 15 ದಿನದ  ಸೀರೆ ಕುಚ್ಛ ತರಬೇತಿ ಉದ್ದೇಶಿಸಿ ಮಾತನಾಡಿದ ಅವರು  ಉದ್ಯೋಗವನ್ನು ಮಾಡುವಲ್ಲಿ ಪ್ರವೃತಿಯನ್ನು ವೃತ್ತಿಯಾಗಿ ಹೇಗೆ ರೂಡಿಸಿಕೊಳ್ಳಬೇಕು ಎನ್ನುವ ಕುರಿತು ಮಾಹಿತಿ ನೀಡಿದರು. 

      ಸಭೆಯಲ್ಲಿ ಪ್ರಾದೇಶಿಕ ಕಚೇರಿ ಜನಜಾಗೃತಿ ಯೋಜನಾಧಿಕಾರಿ ಭಾಸ್ಕರ್,ಝಿ ಮೈಲಾರಿ, ಜ್ಞಾನವಿಕಾಸ ಸಮನ್ವಯಾಧಿಕಾರಿ  ರಾಧಿಕಾ ಸೇರಿದಂತೆ ಸಂಘದ ತರಬೇತಿ ಸದಸ್ಯರು ಉಪಸ್ಥಿತರಿದ್ದರು.