ಅಕ್ಷರ ಗುಡಿ ವಿನ್ಯಾಸದ ರಥದೊಂದಿಗೆ, ಶಾಲಾ ಪ್ರಾರಂಭೋತ್ಸವದ ಮೆರವಣಿಗೆ

ಗದಗ 30:  ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸದ ಕಾರ್ಯಕ್ರಮದ ಪ್ರಯುಕ್ತ   ಜಗದ್ಗುರು ತೋಂಟದಾರ್ಯ  ವಿದ್ಯಾಸಂಸ್ಥೆಯಲ್ಲಿ  ಅಕ್ಷರಗುಡಿ ವಿನ್ಯಾಸದ ರಥದೊಂದಿಗೆ  ಶಾಲಾ ಪ್ರಾರಂಭೋತ್ಸವದ ಮೆರವಣಿಗೆಯ  ಜಾಥಾಕ್ಕೆ   ಗದಗ ಜಿಲ್ಲಾ ಪಂಚಾಯತ ಅಧ್ಯಕ್ಷ ಎಸ್.ಪಿ.ಬಳಿಗಾರ ಚಾಲನೆ ನೀಡಿದರು. 

    ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಅಕ್ಷರಗುಡಿ ವಿನ್ಯಾಸದ ರಥೋತ್ಸವದೊಂದಿಗೆ  ಶಾಲಾ ಪ್ರಾರಂಭೋತ್ಸವದ ಮೆರವಣಗೆಯ ಜಾಥಾ ಕಾರ್ಯಕ್ರಮವು ಭೂಮರಡ್ಡಿ ಸರ್ಕಲ್ನಿಂದ ಪ್ರಾರಂಭಗೊಂಡಿತು.  ನಂತರ  ಗಾಂಧೀ ಸರ್ಕಲ್, ಟಾಂಗಾಕೂಟ, ಮುಳಗುಂದನಾಕಾ  ಮೂಲಕ ಸಂಚರಿಸಿ  ಪಾಲಕರಿಗೆ, ಸಮುದಾಯದವರಿಗೆ, ಸಾರ್ವಜನಿಕರಿಗೆ, ಹಾಗೂ ಶಿಕ್ಷಣದ ಮಹತ್ವದ ಬಗ್ಗೆ  ಹಾಗೂ  ಶಾಲೆಗಳು ಆರಂಭಗೊಂಡ ಬಗ್ಗೆ ಜಾಗೃತಿ ಮೂಡಿಸಲಾಯಿತು.

      ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಎಸ್.ವಿ.ಸಂಕನೂರ ಗದಗ ಜಿ.ಪಂ ಉಪಾದ್ಯಕ್ಷೆ ಶಕುಂತಲಾ ಮೂಲಿಮನಿ, ಗದಗ ತಾ.ಪಂ ಅದ್ಯಕ್ಷ ಮೋಹನ ದುರ್ಗಣ್ಣವರ,           ಜಿ.ಪಂ ಮುಖ್ಯಕಾರ್ಯನಿವರ್ಾಹಣಾಧಿಕಾರಿ ಮಂಜುನಾಥ ಚವ್ಹಾಣ,  ಜಿ.ಪಂ ಉಪಕಾರ್ಯದಶರ್ಿ ಡಿ.ಪ್ರಾಣೇಶ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೇಶಕ ಎನ್.ಎಚ್.ನಾಗೂರ,  ಕ್ಷೇತ್ರ ಶಿಕ್ಷಣಾಧಿಕಾರಿಗಳು,  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕ ಅಜರ್ುನ ಗೊಳಸಂಗಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಶರಣು ಗೊಗೇರಿ, ಎಸ್.ಎನ್.ಬಳ್ಳಾರಿ ಹಾಗೂ ವಿವಿಧ ಶಾಲಾ ಶಿಕ್ಷಕ ವೃಂದದವರು,  ವಿದ್ಯಾಥರ್ಿಗಳು,  ಸಿಬ್ಬಂದಿಗಳು, ಸೂರಣಗಿ ಡೊಳ್ಳಿನ ಕಲಾ ತಂಡ, ಶ್ರೀ ವಾಲ್ಮೀಕಿ ಸಾಂಸ್ಕೃತಿಕ ಕಲಾತಂಡದವರು ಉಪಸ್ಥಿತರಿದ್ದರು.