ಸಮೀರವಾಡಿ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಹಂಗಾಮಿನ ಸಮಾರೋಪ

Sameerwadi Sugar Factory concludes sugarcane crushing season

ಸಮೀರವಾಡಿ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಹಂಗಾಮಿನ ಸಮಾರೋಪ  

ಮಹಾಲಿಂಗಪುರ 04: ದೇಶದಲ್ಲಿಯೇ ಅತಿ ಹೆಚ್ಚು ಕಬ್ಬು ನೀಡಿ ಇತಿಹಾಸ ನಿರ್ಮಿಸಿ ಗೋದಾವರಿ ಬಯೋರಿಫೈನ್ರೀಸ್ ಸಮೀರವಾಡಿ ಸಕ್ಕರೆ ಕಾರ್ಖಾನೆಯ ಹೆಸರನ್ನು ಉತ್ತುಂಗಕ್ಕೆ ಕೊಂಡೊಯ್ದ ರೈತರ ಸಹಕಾರಕ್ಕೆ ಕಾರ್ಖಾನೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ ಆರ್‌. ಭಕ್ಷಿ ಅವರು ಕೃತಜ್ಞತೆಗಳನ್ನು ತಿಳಿಸಿದರು. 

ಶುಕ್ರವಾರ ಮಧ್ಯಾಹ್ನ ಕಾರ್ಖಾನೆ ಆವರಣದಲ್ಲಿ ನಡೆದ 2024-25 ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ವಿವಿಧ ಸರ್ಕಲ್ ಗಳಿಂದ ರೈತರಿಂದ 24.64 ಲಕ್ಷ ಮೆಟ್ರಿಕ್ ಟನ್ ಕಬ್ಬು ಕಾರ್ಖಾನೆಗೆ ಬಂದಿದ್ದು, ನಮ್ಮೆಲ್ಲರ ಹೆಮ್ಮೆಯನ್ನು ಇಮ್ಮಡಿಗೊಳಿಸಿದೆ. ಈ ರೀತಿಯ ಸಹಾಯ ಸಹಕಾರ ಭವಿಷ್ಯದಲ್ಲಿಯೂ ಮುಂದುವರಿಯಬೇಕೆಂದು ರೈತರಲ್ಲಿ ವಿನಂತಿಸಿದರು. 

ಶುಕ್ರವಾರ ಸುಮಾರು ರಾತ್ರಿ ಹೊತ್ತು ಕಬ್ಬು ನುರಿಸುವ ಹಂಗಾಮಿಗೆ ತೆರೆ ಬೀಳಲಿದೆ. ಒಟ್ಟಾರೆ ಈ ಕಾರ್ಯಕ್ರಮದ ಉದ್ದೇಶ ರೈತರು ಮುಂದಿನ ವರ್ಷಗಳಲ್ಲಿಯೂ ಸಹ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆದು ತಮ್ಮ ಆರ್ಥಿಕ ಬಲ ಹೆಚ್ಚಿಸಿಕ್ಕೊಳ್ಳುವತ್ತ ಮತ್ತು ಕಾರ್ಖಾನೆಯ ಅಭಿವೃದ್ಧಿ ಕಡೆಗೂ ಗಮನ ಹರಿಸುವುದಾಗಿದೆ.  

ಈ ಕಾರಣದಿಂದ ಕಾರ್ಖಾನೆ ತನ್ನ ಈ ವರ್ಷದ ಕಬ್ಬು ನುರಿಸುವ ಕಾರ್ಯ ಸ್ಥಗಿತಗೊಳಿಸುವ ಮುಂಚಿತವಾಗಿ ಸಮಾರೋಪ ಸಮಾರಂಭ ನಡೆಸಿ ಅತಿ ಹೆಚ್ಚು ಕಬ್ಬು ಬೆಳೆದ ಹಾಗೂ ಕಾರ್ಖಾನೆಗೆ ಸಾಗಿಸಿದ ರೈತರಿಗೆ ಮತ್ತು ಇನ್ನಿತರ ಸುಮಾರು 40 ಜನರನ್ನು ಗುರುತಿಸಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 

 ಈ ಮುಂಚೆ ರಾಜ್ಯ ಹೆದ್ದಾರಿ ಸಮೀರವಾಡಿ ಕ್ರಾಸ್ ನಿಂದ ಮಹಿಳೆಯರ ಝಾಂಜ್ ಪಥಕ ಮತ್ತು ಮಂಗಳವಾದ್ಯ ಗಳೊಂದಿಗೆ ಮೆರವಣಿಗೆ ಕಾರ್ಖಾನೆಯ ಆವರಣದಲ್ಲಿ ನಿರ್ಮಿಸಲಾದ ಭವ್ಯ ವೇದಿಕೆಗೆ ಆಗಮಿಸಿತು. 

 ರಾಮನಗೌಡ ಪಾಟೀಲ್, ರಂಗನಗೌಡ ಪಾಟೀಲ್, ಮಹಾಲಿಂಗಪ್ಪ ಸನಾದಿ, ಸುಭಾಸ್ ಶಿರಬೂರ, ಭೀಮಶಿ ಮಗದುಮ, ಲಕ್ಷ್ಮಣ ಹುಚರಡ್ಡಿ, ಮಹಾದೇವ ಮಾರಾಪೂರ, ವಿ ಎಸ್‌. ಕಣಬೂರ, ಬಸವರಾಜ ಪೂಜಾರಿ, ಬಸವರಾಜ ಭದ್ರಶೆಟ್ಟಿ, ಬುಜಬಲಿ ಕೆಂಗಾಲಿ, ಮಲ್ಲಿಕಾರ್ಜುನ ಕಾಣಗೌಡರ, ಈರಣ್ಣ ಕಣಕರಡ್ಡಿ, ಬಿ ಜಿ ಹೊಸೂರ, ಮಲ್ಲಪ್ಪ ಅಂಗಡಿ, ಮಲ್ಲಿಕಾರ್ಜುನ ತೇಲಿ, ವಿಠ್ಠಲ ಹೊಸಮನಿ, ರಮೇಶ ಕುಮಾರ್, ಆರ್ ವಿ ಸೋನವಾಲ್ಕರ್, ಅಧಿಕಾರಿಗಳಾದ ವಿ ಎಸ್ ಕಣಬೂರ ಮತ್ತು ವಿಜಯಕುಮಾರ್ ಕಣವಿ ನಿರೂಪಿಸಿ ವಂದಿಸಿದರು.