ಲೋಕದರ್ಶನ ವರದಿ
ಶಿರಹಟ್ಟಿ 03: ಮಕ್ಕಳಿಗೆ ಸಾರ್ವತ್ರಿಕೆ ಲಸಿಕಾ ಕಾರ್ಯಕ್ರಮದಡಿಯಲ್ಲಿ ರೋಟಾ ವೈರಸ್ ಲಸಿಕೆ ಹಾಕಿಸುವುದರಿಂದ ಅತಿಸಾರ ಭೇದಿಯನ್ನು ತಡೆಗಟ್ಟಲು ಸಾಧ್ಯ ಎಂದು ಬೆಳ್ಳಟ್ಟಿ ಪ್ರಾಥಮಿಕ ಆರೋಗ್ಯಾಧಿಕಾರಿ ಡಾ. ರಷ್ಮಿ ಪಾಟೀಲ ಕರೆ ನೀಡಿದರು.
ಅವರು ತಾಲೂಕಿನ ಬೆಳ್ಳಟ್ಟಿಯಲ್ಲಿ ಜರುಗಿದ ಸಾರ್ವತ್ರಿಕ ಲಸಿಕಾ ಹಾಕುವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಈಗ ಈ ರೋಟಾ ವೈರಸ್ ಲಸಿಕೆ ಸಾರ್ವತ್ರಿಕಾ ಲಸಿಕಾ ಕಾರ್ಯಕ್ರಮದಲ್ಲಿ ಉಚಿತವಾಗಿ ದೊರೆಯುತ್ತಿದ್ದು, ಈ ಲಸಿಕೆಯನ್ನು ಮಗು ಹುಟ್ಟಿದ 6, 10 ಹಾಗೂ 11 ನೇ ವಾರದೊಳಗೆ ಹಾಕಿಸಬೇಕು. ರೋಟಾ ವೈರಸ್ನಿಂದ ಉಂಟಾಗುವ ಅತಿಸಾರವು ಮಕ್ಕಳಲ್ಲಿ 3/4 ನೇ ತಿಂಗಳಲ್ಲಿ ಅತೀಯಾಗಿ ಕಂಡುಬರುತ್ತಿದ್ದು, ಈ ವೈರಸ್ನಿಂದ ಮಕ್ಕಳಲ್ಲಿ ಅತೀಸಾರ, ವಾಂತಿ-ಭೇಧಿ ಆಗಿ ಆರೋಗ್ಯವು ನಿರ್ಜಲೀಕರಣ ಹೊಂದಿ ಸಾಯುವ ಹಂತ ಹೆಚ್ಚಾಗಿರುತ್ತದೆ. ಆದ್ದರಿಂದ ಸರಿಯಾದ ಸಮಯದೊಳಗೆ ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಂಡಕೂಡಲೇ ವೈಧ್ಯರನ್ನು ಕಂಡು ಅದಕ್ಕೆ ಸೂಕ್ತ ವೈಧ್ಯಕೀಯ ಚಿಕಿತ್ಸೆ ಕೊಡಿಸಿ ಮಕ್ಕಳನ್ನು ಈ ವೈರಸ್ ನಿಂದ ದೂರವಿಡುವಂತೆ ಕಾಳಜಿವಹಿಸಬೇಕೆಂದು ತಿಳಿಸಿದರು.
ಆರೋಗ್ಯ ಕೇಂದ್ರದ ಹೇಮಾ, ಆಶಾ, ಶೋಭಾ ತೇಗೂರ, ಶುಶ್ರೂಷಕಿ ಚಿತ್ರಾ, ನಿಂಗಮ್ಮ ದೊಡ್ಡಮನಿ ಹಾಗೂ ಅನೇಕ ಫಲಾನುಭವಿಗಳು ಹಾಜರಿದ್ದರು.