ಶಾಲಾ ಮಕ್ಕಳಿಗೆ ಸಿಹಿ ಊಟ ಉನಬಡಿಸಿದ ಶಿಕ್ಷಕ

A teacher served sweet food to school children

ಶಾಲಾ ಮಕ್ಕಳಿಗೆ ಸಿಹಿ ಊಟ ಉನಬಡಿಸಿದ  ಶಿಕ್ಷಕ  

ನೇಸರಗಿ 08:  ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳ ಹುಟ್ಟುಹಬ್ಬದ ದಿನದಂದು ಕೇಕ್ ಕತ್ತರಿಸಿ, ಪಾರ್ಟಿ, ಮೋಜು, ಮಸ್ತಿ ಮಾಡುವ ಈ ಯುಗದಲ್ಲಿ  ಸಮೀಪದ ವಣ್ಣೂರ ಗ್ರಾಮದ   ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಎಸ್‌. ಬಿ. ಹುದ್ದಾರ ಅವರ ಚಿರಂಜೀವಿಯ ಹುಟ್ಟು ಹಬ್ಬದ ಪ್ರಯುಕ್ತ ಶಾಲೆಯ ಎಲ್ಲಾ ಮಕ್ಕಳಿಗೆ  ಶಿರಾ ಸಿಹಿಯನ್ನು  ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಉನಬಡಿಸಿ ಆದರ್ಶ ಶಿಕ್ಷಕರಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಈ ಸಂದರ್ಭದಲ್ಲಿ  ಎಸ್‌. ಡಿ. ಎಮ್‌. ಸಿ ಅಧ್ಯಕ್ಷರು, ಸದಸ್ಯರು,ಪ್ರಧಾನ ಗುರುಗಳು ಹಾಗೂ ಸಿಬ್ಬಂದಿ ವರ್ಗ ಸೇರಿಕೊಂಡು ಶಿಕ್ಷಕ ಎಸ್ ಬಿ ಹುದ್ದಾರ ಅವರನ್ನು  ಅವರನ್ನು ಸನ್ಮಾನಿಸಲಾಯಿತು.