ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಮಾಡಿದ ಆರೋಪಕ್ಕೆ ಚಿನ್ನದ ಗಣಿ ನಿಗಮ ಅಧ್ಯಕ್ಷ, ಶಾಸಕ ಜೆ ಟಿ ಪಾಟೀಲ್ ತಿರುಗೇಟು

Gold Mining Corporation Chairman, MLA JT Patil hits back at allegations made by BJP State Vice Presi

ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಮಾಡಿದ ಆರೋಪಕ್ಕೆ ಚಿನ್ನದ ಗಣಿ ನಿಗಮ ಅಧ್ಯಕ್ಷ, ಶಾಸಕ ಜೆ ಟಿ ಪಾಟೀಲ್ ತಿರುಗೇಟು  


ಬೀಳಗಿ 08: ಕ್ಷೇತ್ರದಲ್ಲಿ ಯಾವುದೇ ಹೊಸ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಮಾಡಿದ ಆರೋಪಕ್ಕೆ ಚಿನ್ನದ ಗಣಿ ನಿಗಮ ಅಧ್ಯಕ್ಷ, ಶಾಸಕ ಜೆ ಟಿ ಪಾಟೀಲ್ ತಿರುಗೇಟು ನೀಡಿದ್ದಾರೆ.  

    ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಹಿಂದೆ ಬಿಜೆಪಿ ಸರಕಾರದಲ್ಲಿ 400 ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿತ್ತು ಎಂದು ಹೇಳಿದ ನಿರಾಣಿಯವರು, ಇದರ ಕುರಿತು ನಮ್ಮ ಬಳಿ ಯಾವುದೇ ಲೆಕ್ಕವಿಲ್ಲ ಇದರ ಲೆಕ್ಕಕೊಟ್ಟರೆ ನಾವು ಒಪ್ಪಿಕೊಳ್ಳುತ್ತೇನೆ, ಇದು ಹರಿಕೆ ಉತ್ತರವಾಗಬಾರದು. ಹಿಂದಿನ ಸರಕಾರದಿಂದ ಬಂದ ಹಣದಲ್ಲಿ ಅವರು ಬಳಕೆ ಮಾಡಿಕೊಂಡು ಉಳಿದ ಅನುದಾನವು ವಾಪಸ್ ಹೋಗಬಾರದೆಂಬ ಉದ್ದೇಶದಿಂದ ಆ ಅನುದಾನವನ್ನು ನಾವು ಬಳಕೆ ಮಾಡಿಕೊಂಡಿದ್ದೇವೆ ಎಂದರು.  

  2013-18ರ ಅವಧಿಯಲ್ಲಿ ನಾನು ಶಾಸಕನಾಗಿದ್ದಾಗ ಯಡಹಳ್ಳಿ, ಅಮಲಝರಿ, ಖಜ್ಜಿಡೋಣಿ ಗ್ರಾಮಗಳ ಅಭಿವೃದ್ಧಿಗೆ ಪ್ರತ್ತೇಕ ರೂ.1ಕೋಟಿಯಂತೆ ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ ಮಂಜುರಾತಿ ಮಾಡಿಸಿದ್ದೇ, ನಂತರ ಇವರ ಅಧಿಕಾರ ಬಂದನಂತರ ಯಡಹಳ್ಳಿ ಗ್ರಾಮಕ್ಕೆ ನೀಡಿದ ರೂ.1ಕೋಟಿ ಅವರ ಊರಿಗೆ, ಅಮಲಝರಿ ಗ್ರಾಮಕ್ಕೆ ನೀಡಿದ್ದನ್ನು ನರೇನೂರಿಗೆ, ಖಜ್ಜಿಡೋಣಿ ಗ್ರಾಮಕ್ಕೆ ನೀಡಿದ್ದನ್ನು ಗದ್ದನಕೇರಿಗೆ ಬಳಕೆ ಮಾಡಿದ್ದಾರೆ. ಇದು ಯಾರ ಹಣ ಯಾರು ಬಳಕೆ ಮಾಡಿದ್ದಾರೆ. ಇಂತಾ ಉದಾಹರಣೆಗಳು ತುಂಬಾ ಇವೆ ಎಂದು ತಿರುಗೇಟು ನೀಡಿದರು. 2008ರಲ್ಲಿ ನನಗೆ ಟಿಕೇಟ್ ಸಿಗಲಿಲ್ಲ. ನಾವು  ಮಾಡಿದ ಕಾರ್ಯಕ್ರಮಗಳನ್ನು ತಾವು ಪುಸ್ತಕ ಮಾಡಿ ಬದಾಮಿ, ಬಾಗಲಕೋಟೆ ತಾಲೂಕಿನ ಹಳ್ಳಿಗಳಲ್ಲಿ ಹಂಚಿದ್ದಾರೆ ಇಂತಾ ಕೆಲಸ ನಾನು ಮಾಡಿಲ್ಲ ಎಂದು ಆರೋಪಿಸಿದರು. ಯಾರ ಮೇಲಾದ್ರು ಆರೋಪ ಮಾಡಬೇಕಾದರೆ ಎಲ್ಲ ತರದ ವಿಚಾರ ಮಾಡಿ ಮಾಡಬೇಕು.  

ನಿರಾಣಿ ಮುಖ್ಯಮಂತ್ರಿ ಆದ್ರೆ ನನ್ನ ಸಂಪೂರ್ಣ ಬೆಂಬಲವಿದೆ: 

ಈ ಹಿಂದೆ ಚುನಾವಣೆಯ ಸಮಯದಲ್ಲಿ ಮುಂದಿನ ಮುಖ್ಯಮಂತ್ರಿ ನಾನೇ ಎಂದು ನಿರಾಣಿಯವರು ಪ್ರಚಾರ ಮಾಡಿದ್ದರು. ಆಗ ಜನರ ನಿರ್ಣಯ ಬೇರೆ ಆಯಿತು. ಇವತ್ತೂ ಮುಂದೆ ನಾನೇ ಶಾಸಕ ಆಗ್ತೀನಿ, ಮುಖ್ಯಮಂತ್ರಿಯಾಗ್ತಿನಿ ಎಂದು ಸ್ವತಾ ಅವರೇ ಹೇಳಿದ್ದಾರೆ. ಬೀಳಗಿ ಕ್ಷೇತ್ರಕ್ಕೆ ನಿರಾಣಿಯವರು ಮುಖ್ಯಮಂತ್ರಿ ಎಂದು ಅವರ ಪಕ್ಷ ಘೋಷಿಸಿದರೆ ಅದನ್ನು ನಾನು ಸ್ವಾಗತಿಸುತ್ತೇನೆ. ಮುಂಬರುವ ಚುನಾವಣೆಯಲ್ಲಿ ಮುರುಗೇಶ ನಿರಾಣಿಯವರಿಗೆ ನನ್ನ ವೈಯಕ್ತಿಕ ಸಂಪೂರ್ಣ ಬೆಂಬಲ ನೀಡುತ್ತೇನೆ, ಅವರು ಮುಖ್ಯಮಂತ್ರಿಯಾದರೆ ನಮಗೆ ಅಸುಹೆ ಇಲ್ಲ. ಅವರು ಕಾರ್ಖಾನೆಗಳಿಂದ ಉನ್ನತ ಮಟ್ಟದಲ್ಲಿ ಬೆಳೆಯುತ್ತಾ ಉದ್ಯೋಗ ಪತಿಯಾಗಿದ್ದಾರೆ. ಕರ್ನಾಟಕ ದಿಂದ ಮಹಾರಾಷ್ಟ್ರದ ವರೆಗೆ ಬೆಳೆದು ಇಂದು ಬಿಹಾರ ವರೆಗೆ ಹೋಗಿದ್ದಾರೆ ಅವರ ಬೆಳವಣಿಗೆಯಿಂದ ಶ್ರೀಮಂತರಾದರೂ ನಮಗೆ ಅಸುಹೆ ಆಗುವುದಿಲ್ಲ ಎಂದರು. 

ವಿಮಾನ ನಿಲ್ದಾಣಕ್ಕೆ ವಿರೋಧವಿಲ್ಲ: 

ಬದಾಮಿ ತಾಲೂಕಿನಲ್ಲಿ ವಿಮಾನ ನಿಲ್ದಾಣಕ್ಕೆ ನನ್ನ ವಿರೋಧವಿಲ್ಲ. ರೈತರ ಮನಸ್ಸಿನ ವಿರುದ್ಧ ಬೇಕಾಬಿಟ್ಟಿಯಾಗಿ ರೈತರ ಜಮೀನು ಪಡೆಯಲು ಹೋದರೆ ನನ್ನ ಸಮ್ಮತಿ ಇಲ್ಲ. ಅಲ್ಲಿರುವ ಎಲ್ಲರೂ ಬಡ ರೈತರು, ಎಸ್ಟಿ ಮತ್ತು ಹಾಲುಮತದವರು ಭೂಮಿ ಕಳೆದು ಕೊಳ್ಳುವವರು. ನಮ್ಮ ಜಾತಿಯವರಂತೂ ಯಾರು ಇಲ್ಲ. ಅದರ ಮೇಲೆ ಅವರ ಉಪ ಜೀವನವಿದೆ. ಈಗಾಗಲೇ ಹೆರಕಲ್ ಏತ ನೀರಾವರಿಯಿಂದಾಗಿ ಅನವಾಲ್, ಕೆರೂರ ಏತ ನೀರಾವರಿ ಕವರ್ ಆಗಿದೆ ಇನ್ನಷ್ಟು ನೀರಾವರಿಯಿಂದ ಅವರ ಭೂಮಿ ಕವರ್ ಆದರೆ ಅಲ್ಲಿರುವ ರೈತರ ಬದುಕು ಹಸನಾಗುತ್ತದೆ ಎಂದರು. 

  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಣಮಂತ ಕಾಖಂಡಕಿ, ಜಿಪಂ ಮಾಜಿ ಅಧ್ಯಕ್ಷ ಯಮನಪ್ಪ ರೊಳ್ಳಿ, ತಾಪಂ ಮಾಜಿ ಅಧ್ಯಕ್ಷ ಶ್ರೀಶೈಲ್ ಸುಳಿಕೇರಿ, ಸಿದ್ದು ಸಾರಾವರಿ ಸೇರಿದಂತೆ ಇತರರು ಇದ್ದರು.