ಕಸ್ತೂರಿಬಾ ಗಾಂಧಿ ಬಾಲಕಿಯರ ವಸತಿ ನಿಲಯದ ನೂತನವಾಗಿ ಕಟ್ಟಡದ ಉದ್ಘಾಟನೆ
ಬೀಳಗಿ 08: ಇಂದಿನ ದಿನಮಾನಗಳಲ್ಲಿ ಎಲ್ಲ ರಂಗದಲ್ಲೂ ಸಾಕಷ್ಟು ಬದಲಾವಣೆಗಳು ಆಗುತ್ತಿದ್ದು ಶಿಕ್ಷಣ ಕ್ಷೇತ್ರದಲ್ಲೂ ಪ್ರಗತಿಪರ ಬದಲಾವಣೆಗಳು ಆಗಬೇಕು ಅದಕ್ಕಾಗಿ ಮಕ್ಕಳನ್ನು ಕೇವಲ ಪಠ್ಯಕ್ಕೆ ಸೀಮಿತವಾಗಿರಸದೇ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸುವಂತೆ ಮಾಡಿ ಅವರಲ್ಲಿ ಅಡಗಿರುವ ನಿಜವಾದ ಪ್ರತಿಭೆ ಗುರುತಿಸುವ ಕೆಲಸವಾಗಬೇಕು ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರು,ಶಾಸಕರಾದ ಜೆ ಟಿ ಪಾಟೀಲ ತಿಳಿಸಿದರು.
ತಾಲೂಕಿನ ಬೀಳಗಿ ಕ್ರಾಸ ಪುನರ್ವಸತಿ ಕೇಂದ್ರದಲ್ಲಿನ ಆದರ್ಶವಿದ್ಯಾಲಯದ ಎದುರಿಗೆ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರಾಷ್ಟ್ರೀಯ ಮಾದ್ಯಮಿಕ ಶಿಕ್ಷಣ ಅಭಿಯಾನ ಯೋಜನೆ (ಆರ್ಎಂಎಸ್ಎ) ಅಡಿಯಲ್ಲಿ ಕಸ್ತೂರಿಬಾ ಗಾಂಧಿ ಬಾಲಕಿಯರ ವಸತಿ ನಿಲಯದ ನೂತನವಾಗಿ ನಿರ್ಮಿಸಿರುವ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮಕ್ಕಳು ಶಿಕ್ಷಕರ ಬೋದನೆ ಕಡೆಗೆ ಹೆಚ್ಚು ಗಮನ ಕೊಡಬೇಕು,ಕಂಠಪಾಠ ಅಭ್ಯಾಸವನ್ನು ಬಿಟ್ಟು ಶಿಕ್ಷಕರು ಹೇಳಿದ ಪಾಠವನ್ನು ಮನದಟ್ಟು ಮಾಡಿಕೊಳ್ಳುವ ಕಡೆಗೆ ಗಮನ ಹರಿಸಬೇಕು,ಸರ್ಕಾರ ಶಿಕ್ಷಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಅದರಲ್ಲೂ ಬಾಲಕಿಯರ ಶಿಕ್ಷಣಕ್ಕಾಗಿ ಇನ್ನು ಹೆಚ್ಚಿನ ಒತ್ತು ನೀಡಿದೆ,ಸಿಎಂ ಸಿದ್ದರಾಮಯ್ಯನವರು ಶಿಕ್ಷಣ ಕ್ಷೇತ್ರದ ಕುರಿತಾಗಿ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದಾರೆ,ಅವುಗಳನ್ನು ಸರಿಯಾಗಿ ಸದುಪಯೋಗ ಮಾಡಿಕೊಳ್ಳಬೇಕು,ಟಿವಿ ,ಮೊಬೈಲ ಬಳಕೆ ಬಿಟ್ಟು ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಬೇಕು,ಶಿಕ್ಷಕರು ತಮ್ಮ ಮಕ್ಕಳಂತೆ ವಿದ್ಯಾರ್ಥಿಗಳನ್ನು ಕಂಡು ಅವರಿಗೂ ಶಿಕ್ಷಣ ರುಚಿ ಹೆಚ್ಚುವಂತೆ ಮಾಡಬೇಕು,ಫಲಿತಾಂಶ ಹೇಗೆ ಬರಲಿ ಸ್ವತ ಅಭ್ಯಾಸ ಕಲಿತ ಪಾಠದ ಮೇಲೆ ಪರೀಕ್ಷೆ ಎದುರಿಸಿ,ನಕಲು ಮಾಡಿ ಫಲಿತಾಂಶ ಪಡೆದವರು ಎಂದಿಗೂ ಮುಂದೆ ಬರಲು ಸಾಧ್ಯವಿಲ್ಲ ಎಂದ ಅವರು ಕಸ್ತೂರಿಬಾ ಗಾಂಚಿ ಬಾಲಕಿಯರ ವಸತಿ ನಿಲಯದಲ್ಲಿ ಇನ್ನು ಸ್ವಲ್ಪ ಮಟ್ಟಿನ ಕೆಲಸವಿದ್ದು ಆ ಕೆಲಸವನ್ನು ಗುಣಮಟ್ಟದಿಂದ ಮಾಡಿ ಇಲಾಖೆಗೆ ಹಸ್ತಾಂತರ ಮಾಡುವಂತೆ ಜಿಪಂ ಅಚಿಕಾರಿಗಳಿಗೆ ಸೂಚಿಸಿದರು ಬರುವ 15 ದಿನದಲ್ಲಿ ಹಸ್ತಾಂತರ ಮಾಡಬೇಕು ಎಂದು ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಬ್ಲಾಕ ಕಾಂಗ್ರೆಸ ಅಧ್ಯಕ್ಷ ಹನಮಂತ ಕಾಖಂಡಕಿ,ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾ ಅಧ್ಯಕ್ಷ ಅನವೀರಯ್ಯ ಪ್ಯಾಟಿಮಠ,ತಾಪಂ ಮಾಜಿ ಅಧ್ಯಕ್ಷ ಶ್ರೀಶೈಲ ಸೂಳಿಕೇರಿ,ಜಿಪಂ ಮಾಜಿ ಅಧ್ಯಕ್ಷ ಯಮನಪ್ಪ ರೋಳ್ಳಿ,ಡಾ ಕಿತ್ತಲಿ,ಪಪಂ ಸದಸ್ಯ ಪಡಿಯಪ್ಪ ಕರಿಗಾರ,ಸಿದ್ದು ಸಾರಾವರಿ,ಬಸವರಾಜ ಹಳ್ಳದಮನಿ,ಕ್ಷೇತ್ರಶಿಕ್ಷಣಾಧಿಕಾರಿ ಆರ್ ಎಸ್ ಆದಾಪೂರ,ಸಂಗಮೇಶ,ಜಿಪಂ ಅಧಿಕಾರಿ ಗೋವಿಂದ ಅರಳಿಕಟ್ಟಿ, ಮತ್ತು ಶಾಲೆ ಶಿಕ್ಷಕರು,ಹಿರಿಯರು ಇದ್ದರು.