ಸರಳ ಸಹಕಾರದ ವ್ಯಕ್ತಿತ್ವದ ಮಾಲತೇಶ ಅಂಗೂರ ಅವರಿಗೆ ಗೌರವಿಸಿ ಸನ್ಮಾನ
ಹಾವೇರಿ 02 :ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ)ಯ ವತಿಯಿಂದ ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ನೀಡಲಾಗುವ ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋಧ್ಯಮ 2020ನೇ ಸಾಲಿನ ಪ್ರಶಸ್ತಿಗೆ ಭಾಜನರಾದ ಹಿರಿಯ ಪತ್ರಕರ್ತರು,ಪರಿಸರ ಪ್ರೇಮಿಗಳು ಹಾಗೂ ಸರಳ ಸಹಕಾರದ ವ್ಯಕ್ತಿತ್ವದ ಮಾಲತೇಶ ಅಂಗೂರ ಅವರಿಗೆ ಗೌರವಿಸಿ ಸನ್ಮಾನಿಸಿ ಶುಭ ಕೋಲಾಯಿತು.
ಕಲ್ಯಾಣ ಸಮಿತಿ ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಮಾತನಾಡಿ ಪ್ರಾಣಿ,ಪಕ್ಷಿಗಳ ಬಗ್ಗೆ ಮಾನವೀಯತೆ ದೃಷ್ಠಿಕೋನ ಇಟ್ಟುಕೊಂಡು ದೇಶ ವಿದೇಶದಿಂದ ಪ್ರಾಣಿ-ಪಕ್ಷಿಗಳ ಛಾಯಾಚಿತ್ರಗಳನ್ನು ತೆಗೆದು ಅವುಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಸಾರ್ವಜನಿಕರಿಗೆ ತಿಳಿಸುವ ಕೆಲಸವನ್ನು ಹಿರಿಯ ಪತ್ರಕರ್ತರಾದ ಮಾಲತೇಶ ಅಂಗೂರ ನಿರಂತರವಾಗಿ ಮಾಡುತ್ತಾ ಬರುತ್ತಿದ್ದರೆ.ಸಾವಿರಾರು ಪ್ರಾಣಿ ಪಕ್ಷಿಗಳ ಛಾಯಾಚಿತ್ರಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದು ನಮಗೆ ಪ್ರಾಣಿ-ಪಕ್ಷಿಗಳ ಪ್ರಭೇಧಗಳ ಮಾಹಿತಿಯನ್ನು ತಮ್ಮ ಹರಿತವಾದ ಲೇಖನಗಳನ್ನು ಬರೆಯುವ ಮೂಲಕ ಸಾಹಿತ್ಯ ಹಾಗೂ ಪತ್ರಿಕಾರಂಗದಲ್ಲಿ ಅಮೋಘ ಸಾಧನೆ ಮಾಡಿದ ಜಿಲ್ಲೆಯ ಅನುಭವಿ ಪತ್ರಕರ್ತರಾದ ಮಾಲತೇಶ ಅಂಗೂರ ಅವರಿಗೆ ಇನ್ನೂ ರಾಷ್ಟ್ರೀಯ-ಅಂತರಾಷ್ಟ್ರೀಯ ಪ್ರಶಸಿಗಳು ಲಭಿಸಲಿ ಎಂದು ಹರ್ಷದಿಂದ ಶುಭ ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಮಂಜಪ್ಪ ಮರೊಳ,ಮಹಿಳಾ ಜಿಲ್ಲಾಧ್ಯಕ್ಷರಾದ ರೇಣುಕಾ ಬಡಕನ್ನವರ,ಕಟ್ಟಡ ಕಾರ್ಮಿಕರ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ವೈ,ಎನ್,ಮಾಸೂರ,ನಗರಸಭೆ ಸದಸ್ಯರಾದ ವೆಂಕಟೇಶ ಬಿಜಾಪುರ ಮುಖಂಡರಾದ ಮಾರುತಿ ಕಿಳ್ಳಿಕ್ಯಾತರ,ಮಲ್ಲನಗೌಡ ಪಾಟೀಲ,ಹಾನಗಲ್ ತಾಲೂಕು ಅಧ್ಯಕ್ಷರಾದ ಜಗದೀಶ ಹರಿಜನ,ಹನುಮಂತಪ್ಪ ಸಿ ಡಿ,ನಾಗರಾಜ ಬಡೆಮ್ಮನವರ,ಶಿವಣ್ಣ ಮುದಿಮಲ್ಲಣ್ಣವರ,ಕಾರ್ಮಿಕರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದುರಗಪ್ಪ ಮಾದರ,ಹೊನ್ನಪ್ಪ ಹುಣಿಸಿಮರದ,ನವೀನ ಶಿದ್ದಣ್ಣವರ,ಬಸವರಾಜ ದೇವರಮನಿ,ಪ್ರವೀಣ ಬಾಂಡ್ಗೆ,ಬಸವಣ್ಣೆಪ್ಪ ಹರಿಜನ,ಮಹೇಶಪ್ಪ ಶಾಕಾರ,ಸುಮತಿ ಹೆಚ್ ಡಿ,ಭೀಮಪ್ಪ ಶಿ ಬಣಕಾರ ಸೇರಿದಂತೆ ಅನೇಕರಿದ್ದರು.