ನಿಜಗುಣ ದೇವ ಮಹಾಸ್ವಾಮಿಗಳ ಆಶೀರ್ವಾದ ಪಡೆದ ಸಂಸದ ಶೆಟ್ಟರ
ಮೂಡಲಗಿ 04: ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದ ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮದಲ್ಲಿ ಜರುಗಿದ 26ನೇ ಬೃಹತ್ ಸತ್ಸಂಗ ಸಮ್ಮೇಳನ ಹಾಗೂ ಸಿದ್ಧಲಿಂಗ ಅಪ್ಪನ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಸಂಸದ ಜಗದೀಶ ಶೆಟ್ಟರ್ ಅವರು ಪಾಲ್ಗೊಂಡು ಶ್ರೀಮಠದ ಶ್ರೀ ನಿಜಗುಣ ದೇವ ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದುಕೊಂಡರು.
ಈ ಸಂದರ್ಭದಲ್ಲಿ ಭೀಮಶಿ ಭರಮಣ್ಣವರ, ಸುಭಾಸ ಪಾಟೀಲ, ರಾಮನಾಯಿಕ ನಾಯಿಕ, ರಾಜೇಶ್ವರಿ ಹಿರೇಮಠ, ಗುರುಸಿದ್ದಪ್ಪ ಕರಬನ್ನಿ, ಬಸು ಕಾಡಾಪೂರ, ಶಂಕರ ಇಂಚಲ, ಶಬ್ಬಿರ್ ತಾಂಬಿಟಗಾರ, ಈಶ್ವರ ಅಂಕಲಗಿ ಇದ್ದರು.
ಫೋಟೋ ಕ್ಯಾಪ್ಸನ್> ಮೂಡಲಗಿ : ಹುಣಶ್ಯಾಳ ಪಿಜಿ ಗ್ರಾಮದ ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮದಲ್ಲಿ 26 ನೇ ಬೃಹತ್ ಸತ್ಸಂಗ ಸಮ್ಮೇಳನದ ಸಂಸದ ಜಗದೀಶ ಶೆಟ್ಟರ್ ಅವರು ಪಾಲ್ಗೊಂಡು ಶ್ರೀಮಠದ ಶ್ರೀ ನಿಜಗುಣ ದೇವ ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದುಕೊಂಡರು