ಆರೋಗ್ಯವಂತ ಯುವ ಸಮಾಜವನ್ನು ನಿರ್ಮಿಸಲು ಕ್ರೀಡೆಯೊಂದೇ ದಾರಿ: ಕೋಳಿವಾಡ
ರಾಣೇಬೆನ್ನೂರ 04: ಆರೋಗ್ಯವಂತ ಯುವ ಸಮಾಜವನ್ನು ನಿರ್ಮಿಸಲು ಕ್ರೀಡೆಯೊಂದೇ ದಾರಿ. ಆದರೆ ಇಂದಿನ ಮಕ್ಕಳು ಎಲ್ಲಾ ಕ್ರೀಡೆಗಳನ್ನು ಮೊಬೈಲ್ ಫೋನ್‌ನಲ್ಲೇ ಆಡುತ್ತಾ ಕಾಲಹರಣ ಮಾಡುತ್ತಿರುವುದರಿಂದ, ದೈಹಿಕ ಆರೋಗ್ಯದಿಂದ ವಂಚಿತರಾಗುತ್ತಿದ್ದಾರೆ. ಇಂತಹ ಗೀಳಿನಿಂದ ಇಂದಿನ ಯುವಪೀಳಿಗೆಯನ್ನು ಹೊರತಂದು ಆರೋಗ್ಯವಂತ ಸಮಾಜದ ನಿರ್ಮಿಸಲು ಇಂತಹ ್ಲೇಯರ್ಸ ಪಾರ್ಕ್ ಸಹಕಾರಿಯಾಗಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. ಇಲ್ಲಿಯ ಈಶ್ವರ ನಗರದ ಹಳೇ ಮಾಗೋಡ ರಸ್ತೆಯಲ್ಲಿ ಸ್ಪೋಟ್ಸ್ ಅಕಾಡಮಿ ವತಿಯಿಂದ ನಿರ್ಮಾಣಗೊಂಡಿರುವ ನೂತನ ್ಲೇಯರ್ಸ ಪಾರ್ಕ್ ಉದ್ಘಾಟಿಸಿ ಅವರು ಮಾತನಾಡಿದರು, ತಾಲೂಕಿನ ಸಾಕಷ್ಟು ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಕ್ರೀಡೆಗಳ ಆಸಕ್ತಿ ಕಡಿಮೆಯಾಗಿರುವುದು ಬೇಸರದ ಸಂಗತಿ. ವಿದ್ಯಾರ್ಥಿಗಳು ಪಠ್ಯದೊಂದಿಗೆ ಪತ್ಯೇತರ ಚಟುವಟಿಕೆಗಳಲ್ಲೂ ತಮ್ಮ ಸಾಧನೆ ಮಾಡುವುದಕ್ಕೆ ಮುಂದಾಗಬೇಕು ಎಂದರು. ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಕ್ರೀಡೆಗಳು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಹೆಚ್ಚು ಸಹಕಾರಿಯಾಗಿದೆ. ಶಟಲ್ ಬ್ಯಾಡ್ಮಿಂಟನ್ ಆಟಗಾರರಿಗೆ ವೇಗದ ಪ್ರತಿಕ್ರಿಯೆ ನೀಡುವಂತಹ ಕ್ರೀಡೆಯಾಗಿದೆ. ಇದರಿಂದ ಕ್ರೀಡಾಪಟುಗಳಿಗೆ ದಿನನಿತ್ಯದ ಆಲೋಚನೆಗಳು ಹಾಗೂ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜತೆಗೆ ದೈಹಿಕ ಮಾನಸಿಕ ಆರೋಗ್ಯ ಕಾಯ್ದುಕೊಳ್ಳುವುದರೊಂದಿಗೆ ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಸಾಧನೆಯತ್ತ ಸಾಗಲು ಸಹಕಾರಿಯಾಗಿದೆ ಎಂದರು.
ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ಡಿವೈಎಸ್‌ಪಿ ಗೀರೀಶ ಭೋಜಣ್ಣನವರ, ತಹಶೀಲ್ದಾರ ಆರ್.ಎಚ್.ಭಾಗವಾನ್, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರವಿಕಿರಣ, ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಲತಾ ಬಿ.ಎಚ್., ಕರ್ನಾಟಕ ಬ್ಯಾಡ್ಮಿಂಟನ್ ಅಸೋಷಿಯೇಷನ್ ಉಪಾಧ್ಯಕ್ಷ ಶಿವರಾಜ ಮರ್ತೂರ, ಇಂಡಿಯನ್ ಪ್ಯಾರಾ ಅಥ್ಲೇಟಿಲ್ ಕೋಚ್ ಯೋಗೇಶ್ ಶಿವಶಂಕರ, ನಗರಸಭೆ ಸದಸ್ಯರಾದ ಹನುಮಂತಪ್ಪ ಹೆದ್ದೇರಿ, ಹುಚ್ಚಪ್ಪ ಮೇಡ್ಲೆರಿ, ಮುಖಂಡರಾದ ರಾಜಶೇಖರ ಹರಮಗಟ್ಟಿ, ವೈ.ಎಚ್.ರಡ್ಡೇರ, ಮಧುಚಂದ್ರ ಕೋಳಿವಾಡ, ಬಸವರಾಜ ಹುಚ್ಚಗೊಂಡರ, ಹನುಮಂತಪ್ಪ ಕಬ್ಬಾರ, ಇರ್ಾನ್ ದಿಡಗೂರ, ಸೂರಜ್ ಗಡ್ಡದಗೂಳಿ, ರಾಹುಲ್ ಮಡಿವಾಳರ, ವಿನಾಯಕ ಹರಿಹರ, ವಾಸು ಸಾಹುಕಾರ, ರುದ್ರೇಶ ಎ.ಸಿ., ಶಿವರಾಜ, ಆನಂದ ಮಣಕೂರ, ರಾಕೇಶ ರೆಡ್ಡೇರ, ಬಸವರಾಜ ಹುಲ್ಲತ್ತಿ ಸೇರಿದಂತೆ ಮತ್ತಿತರು ಇದ್ದರು. -04-