26ನೇ ಬೃಹತ್ ಸತ್ಸಂಗ ಸಮ್ಮೇಳನದ ತತ್ವಾಮೃತ ಕಾರ್ಯಕ್ರಮ
ಮೂಡಲಗಿ 04: ಗುರುವಿನಲ್ಲಿ ಪ್ರೀತಿವಿದ್ದಾಗ ಮಾತ್ರ ಭಕ್ತರಲ್ಲಿ ವಿಶ್ವಾಸ ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಶ್ರೀಮಠವು ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ ಎಂದು ಹುಕ್ಕೇರಿಯ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜಿ ಅವರು
ಅವರು ತಾಲೂಕಿನ ಹುಣಶ್ಯಾಳ ಪಿ.ಜಿ ಗ್ರಾಮದ ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮದಲ್ಲಿ ಜರುಗಿದ 26ನೇ ಬೃಹತ್ ಸತ್ಸಂಗ ಸಮ್ಮೇಳನದ ತತ್ವಾಮೃತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಗವಂತನ ಸ್ಮರಣೆ ಅಗತ್ಯವಾಗಿದೆ. ಗುರುವಿನ ಮತ್ತು ಶಿಷ್ಯನ ಸಂಬಂಧ ಅಪಾರವಾದದ್ದು ಆದ್ದರಿಂದ ನಿಜಗುಣ ದೇವ ಮಹಾಸ್ವಾಮಿಗಳು ಗುರುವಿನ ಕೃಪಾ ಆಶೀರ್ವಾದದಿಂದ ಶ್ರೀಮಠವು ಸಮಾಜಸೇವೆ ಹಾಗೂ ಧಾರ್ಮಿಕ, ಆಧ್ಯಾತ್ಮಿಕದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಉತ್ತಂಗಕ್ಕೆ ಒಯ್ಯುತ್ತಿದ್ದಾರೆ. ಶ್ರೀಮಠವು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ದಿ ಹೊಂದಲು ಭಕ್ತರ ಸೇವೆ ಮುಖ್ಯವಾಗಿದೆ. ಸದಾ ಹಸನ್ಮುಖಿಗಳಾಗಿ,ತಾಯಿಹೃದಯದ ನಿಜಗುಣ ದೇವ ಮಹಾಸ್ವಾಮಿಗಳು ಶ್ರೀಮಠದ ಭಕ್ತರ ಪಾಲಿಗೆ ನೀತಿಯ ಗುರುಗಳಾಗಿ ನೀತಿಯ ವ್ಯಕ್ತಿತ್ವವನ್ನು ತಿಳಿಸಿಕೊಟ್ಟಿದ್ದಾರೆ. ಗುರುವಿನಲ್ಲಿ ಕರುಣಿಯಿದ್ದರೆ ಮಾತ್ರ ಗುರುವಾಗಲು ಸಾಧ್ಯವಾಗುತ್ತದೆ ಎಂದರು.
ವೇದಿಕೆಯಲ್ಲಿ ಶ್ರೀಮಠದ ಶ್ರೀ ನಿಜಗುಣ ದೇವ ಮಹಾಸ್ವಾಮಿಗಳು, ಬೆಳಗಾವಿಯ ಸ್ವಾಮಿ ಚಿತ್ ಪ್ರಕಾಶಾನಂದ ಸರಸ್ವತಿ ಸ್ವಾಮಿಜಿ, ತೊಂಡಿಕಟ್ಟಿಯ ಅಭಿನವ ವೆಂಕಟೇಶ ಮಹಾರಾಜರು, ಬೀದರದ ಗಣೇಶ ಮಹಾರಾಜರು, ನಿವೃತ್ತ ಡಿಡಿಪಿಐ ಗಜಾನನ ಮನ್ನಿಕೇರಿ, ಅಶೋಕ ಪೂಜಾರಿ, ಚಿದಾನಂದ ಮಹಾಸ್ವಾಮಿಜಿ, ಕೃಪಾನಂದ ಮಹಾಸ್ವಾಮಿಜಿ,ಕೊಟಬಾಗಿಯ ಪ್ರಭುದೇವ ಸ್ವಾಮಿಜಿ, ಮಾತೋಶ್ರೀ ಅನುಸೂಯಾದೇವಿ, ಮಾತೋಶ್ರೀ ಸಿದ್ದೇಶ್ವರಿ ತಾಯಿಯವರು, ಸಿದ್ಧಾನಂದ ಮಹಾಸ್ವಾಮಿಜಿ, ಲಿಂಗನೂರಿನ ಶಿವಪುತ್ರ ಅವಧೂತರು ಸೇರಿದಂತೆ ಅನೇಕ ಮಹಾತ್ಮರು ಉಪಸ್ಥಿತರಿದ್ದರು.
ಗುರುನಾಥ ಶಾಸ್ತ್ರೀಗಳು ಸ್ವಾಗತಿಸಿ, ನಿರೂಪಿಸಿದರು. ಈ ಸಂದರ್ಭದಲ್ಲಿ ಶ್ರೀಮಠದ ಪೀಠಾಧಿಪತಿ ಶ್ರೀ ನಿಜಗುಣ ದೇವ ಮಹಾಸ್ವಾಮಿಜಿಯವರಿಗೆ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತ ಸಮೂಹದಿಂದ ತುಲಾಭಾರ ಸೇವೆ ಜರುಗಿತು. ನಂತರ ಶ್ರೀಗಳ ಕೀರೀಟ ಮಹಾಪೂಜೆ ನೆರವೇರಿತು.