ಅಯ್ಯಪ್ಪ ಸ್ವಾಮಿ ಮಹಾಪೂಜಾ ಕಾರ್ಯಕ್ರಮ

Ayyappa Swami Mahapuja program

ಅಯ್ಯಪ್ಪ ಸ್ವಾಮಿ ಮಹಾಪೂಜಾ  ಕಾರ್ಯಕ್ರಮ  

 ತಾಳಿಕೋಟಿ  04: ಪಟ್ಟಣದಲ್ಲಿ ಶಬರಿಮಲೆ ಶ್ರೀ ಅಯ್ಯಪ್ಪಸ್ವಾಮಿ ಭಕ್ತಾದಿಗಳಿಂದ ಮಹಾಪೂಜೆ ಅಂಗವಾಗಿ ಶನಿವಾರ ವಿಶೇಷ ಪೂಜಾವಿಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.  ಮಹಾಪೂಜೆ ಅಂಗವಾಗಿ ಮುಂಜಾನೆ 9 ಗಂಟೆಯಿಂದ ಗಂಗ ಸ್ಥಳದ ವಿಶೇಷ ಪೂಜಾ ಮೆರವಣಿಗೆ ಪಟ್ಟಣದ ಭೀಮನ ಬಾವಿಯಿಂದ ಆರಂಭಗೊಂಡು  ಪ್ರಮುಖ ಬೀದಿಗಳಲ್ಲಿ ವಿವಿಧ ವಾಧ್ಯ ಮೇಳ ಕೇರಳ ಚಂಡ ಹಾಗೂ ಕರಡಿ ಮಜಲುಗಳೊಂದಿಗೆ ಜರುಗಿತು ಮೆರವಣಿಗೆಯಲ್ಲಿ ನೂರಾರು ಮಾಲಾಧಾರಿ ಅಯ್ಯಪ್ಪ ಸ್ವಾಮಿ ಭಕ್ತರು ಜಯಘೋಷಗಳನ್ನು ಮೊಳಗಿಸಿ ಭಕ್ತಿ ಭಾವ ಮೆರೆದರು. 

ಮಧ್ಯಾಹ್ನ 12 ಗಂಟೆಗೆ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ನೂರಾರು ಭಕ್ತರು ಪ್ರಸಾದ ಸೇವಿಸಿ ಪುನೀತರಾದರು. ರಾತ್ರಿ 7  ಗಂಟೆಯಿಂದ ಜ್ಯೋತಿ ತರುವ ಕಾರ್ಯಕ್ರಮ ನಡೆಯಿತು. ಶ್ರೀ ನಗರೇಶ್ವರ ದೇವಸ್ಥಾನದಿಂದ ಮಹಾ ಸನ್ನಿಧಿಯವರಿಗೆ ಮೆರವಣಿಗೆ ಸಕಲವಾದ್ಯ ಮೇಳಗಳೊಂದಿಗೆ ನಡೆಯಿತು.ನಂತರ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ನಿರ್ಮಾಣಗೊಂಡ ವೇದಿಕೆಯಲ್ಲಿ,ಗುಂಡಕನಾಳದ ಪರಮಪೂಜ್ಯ ಗುರುಲಿಂಗ ಶಿವಾಚಾರ್ಯರ ಸಾನಿಧ್ಯ ಹಾಗೂ ಗುರುಸ್ವಾಮಿಗಳ ನೇತೃತ್ವದಲ್ಲಿ  ಮಾಹಾಪೂಜೆಯ ವಿಶೇಷ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ತಾಳಿಕೋಟಿ ತಾಲೂಕಿನ ಸುಮಾರು 300 ಮಾಲಧಾರಿ ಅಯ್ಯಪ್ಪ ಸ್ವಾಮಿಗಳು ಹಾಗೂ ಅಪಾರ ಭಕ್ತಾದಿಗಳು ಉಪಸ್ಥಿತರಿದ್ದರು.