ಧರ್ಮ, ಸಂಪ್ರದಾಯದ ಜೀವನ ಸಾರ್ಥಕ: ಮುಮ್ಮಡಿ ಚಂದ್ರಶೇಖರ ಶ್ರೀ

ಹೂವಿನಹಡಗಲಿ28: ಗುರು ಹಿರಿಯರ ಮಾರ್ಗದರ್ಶನ ಹಾಗೂ ಸಂಸ್ಕಾರ ಜನ್ಯವಾದ ಧರ್ಮ ಸಂಪ್ರದಾಯಗಳಿಂದ ಬದುಕು ಹಸನವಾಗುವುದು ಎಂದು ಮೈಸೂರು ಅರಮನೆ ಜಪದಕಟ್ಟಿ ಮಠದ ಮುಮ್ಮಡಿ ಚಂದ್ರಶೇಖರ ಸ್ವಾಮೀಜಿ ಹೇಳಿದರು. 

        ತಾಲೂಕಿನ ನವಲಿ ಗ್ರಾಮದಲ್ಲಿ ಏರ್ಪಡಿಸಿದ ಸಿಂಗಟಾಲೂರು ವೀರಭದ್ರಸ್ವಾಮಿಯ 52ನೇ ವರ್ಷದ ಪುರ ಪ್ರವೇಶದ ಧರ್ಮಸಭೆಯ 2ನೇ ದಿನದ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸತ್ಯ, ನಂಬಿಕೆ, ಆಚಾರ ವಿಚಾಗಳಿಂದ ಜೀವನ ಗಟ್ಟಿಗೊಳ್ಳಲು ಸಾಧ್ಯ ಎಂದರು. ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರ ಮೂಲಕ ಮುಂದಿನ ಪೀಳಿಗೆಗೆ ಪರಂಪರೆಯನ್ನು ಉಳಿಸಬೇಕಿದೆ ಎಂದು ಹೇಳಿದರು.

      ಹಂಪಸಾಗರದ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಸ್ವಾಮೀಜಿ ಮಾತನಾಡಿ, ಹಣಕ್ಕಿಂತ ಸಮಾಜವನ್ನು ಎಚ್ಚರಿಸುವಂತಹ ಸದ್ಗುಣಗಳ ಮೂಲಕ ಮನುಷ್ಯ ಜೀವನ ಸಾರ್ಥಕವಾಗುವುದು ಎಂದು ಹೇಳಿದರು. 

 ಹೂವಿನಹಡಗಲಿ ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ಧಾಮರ್ಿಕ ವಿಚಾರಗಳನ್ನು, ಸಾಧು-ಸಂತರ, ಶರಣರ ಸಂದೇಶಗಳನ್ನು ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳಿ ಎಂದು ದೃಷ್ಟಾಂತಗಳ ಮೂಲಕ ತಿಳಿಸಿದರು.

  ಕಾರ್ಯಕ್ರಮದಲ್ಲಿ ಅಮರಶಿಲ್ಪಿ ಜಕ್ಕಣ್ಣ ಪ್ರಶಸ್ತಿ ಪುರಸ್ಕೃತ ಜಿ.ಹಂಸಾನಂದಚಾರಿ ಮಾತನಾಡಿದರು. ಗ್ರಾಮದ ಮುಖಂಡರಾದ ಎನ್.ಸುಧಾಕರ, ಜಂತ್ಲಿ ಮುದುಕಪ್ಪ, ಕಲ್ಲಂನರ ಶೇಖ್ರಪ್ಪ, ಪಾಟೀಲ್ ಸುರೇಶ್, ಜನಾರ್ಧನಗೌಡ, ಹೆಚ್.ಎಂ.ಚಂದ್ರಶೇಖರಯ್ಯ, ಕೆ.ಸುರೇಶ, ಎನ್.ಕೊಟ್ರಗೌಡ, ಜೆ.ಸಂತೋಷ, ಕೆ.ನಿಂಗಜ್ಜ, ಪಿ.ಶಂಕರ್, ಎಂ.ಗುಡುದಪ್ಪ, ಹೆಚ್.ವೀರಣ್ಣ, ಎಸ್.ವೀರಭದ್ರಗೌಡ, ಮಾಗಳದ ಕೊಟ್ರಪ್ಪ, ಎ.ಷಣ್ಮುಖಪ್ಪ, ಎ.ಶಿವಪುತ್ರಪ್ಪ ಇತರರು ಇದ್ದರು.

 ಚಿತ್ರದುರ್ಗದ ಗಂಜಿಗಟ್ಟಿ ಕೃಷ್ಣಮೂತರ್ಿ ಜಾನಪದ ಕಲಾತಂಡದವರು ಸಂಗೀತ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಹಂಪಸಾಗರದ ಬಾಬೂರು ಹುಲಗೇಶ್ ಭಕ್ತಿಗಾಯನ ನಡೆಸಿಕೊಟ್ಟರು.

  ಇದೇ ಸಂದರ್ಭದಲ್ಲಿ ಹೂವಿನಹಡಗಲಿ ಶಾಖಾ ಗವಿಮಠದಿಂದ ಕಲಾವಿದ ಗಂಜಿಗಟ್ಟಿ ಆರ್.ಕೃಷ್ಣಮೂತರ್ಿ ಅವರಿಗೆ ಶಿಶಾಂತವೀರ ಸೇವಾ ಪ್ರಶಸ್ತಿಯನ್ನು ನೀಡಲಾಯಿತು. 

  ಕಲಾವಿದ ರುದ್ರೇಶ್ ಪ್ರಾಥರ್ಿಸಿದರು. ಶಿವಕುಮಾರಸ್ವಾಮಿ ಸ್ವಾಗತಿಸಿದರು. ಉಪನ್ಯಾಸಕ ಗುರುಬಸವರಾಜಯ್ಯ ನಿರ್ವಹಿಸಿದರು.