ರಾಷ್ಟ್ರೀಯ ಲೋಕ ಆದಾಲತ್ : ಒಟ್ಟೂ 236 ಪ್ರಕರಣಗಳು ಇತ್ಯರ್ಥ
ಮುಂಡಗೋಡ 14: ಪಟ್ಟಣದ ಜೆಎಮ್ ಎಫ್‌ಸಿ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ್ ಆದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ರಾಷ್ಟ್ರೀಯ ಲೋಕ್ ಆದಾಲತ್ ಗೆ ನ್ಯಾಯಿಕ ಸಂಧಾನಕಾರರಾಗಿ ನ್ಯಾಯಾಧೀಶೆ ಅಕ್ಷತಾ ಸಿ.ಆರ್. ಹಾಗೂ ನ್ಯಾಯಕೇತರ ಸಂಧಾನಕಾರರಾಗಿ ನಾರಾಯಾಣ ಸಣ್ಣಳ್ಳಿಮನೆ ವಕೀಲರು ಹಾಜರಿದ್ದರು.
ಪಟ್ಟಣದಲ್ಲಿ ಶನಿವಾರ ನಡೆದ ಲೋಕ ಆದಾಲತ್‌ನಲ್ಲಿ 24 ಚೆಕ್‌ಬಾನ್ಸ್ ಪ್ರಕರಣ, 10 ಮೂಲದಾವಾ ಪ್ರಕರಣ, ಎರಡು ಎಫ್.ಡಿ.ಎ ಪ್ರಕರಣ, 17 ಅಮಲ್ ಜಾರಿ ಪ್ರಕರಣ, 3 ಕಿಮಿನಲ್ ಮಿಸಲಿನಿಯಸ್ ಪ್ರಕಣ, 39 ಜನರ ಪ್ರಕರಣ, 105 ಕೆ.ಪಿ.ಆ್ಯಕ್ಟ್ ಪ್ರಕರಣ, 8 ಇತರೆ ಕಿಮಿನಲ್ ಪ್ರಕರಣ, 31 ವಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು 236 ಪ್ರಕರಣ ನಿಕಾಲೆಯಾದವು ಎಂದು ತಿಳಿದು ಬಂದಿದೆ. ಶಿರೆನಾ ಬಿ. ಬೆಂಡಿಗೇರಿ ರವರು ಮೌಲಾಸಾಬ ಶಿರೆನಾ ಬಿ.ಬೆಂಡಿಗೇರಿ ರವರ ವಿರುದ್ಧ ಜೀವನಾಂಶ ಕೋರಿ ಅರ್ಜಿಯನ್ನು ಸಿವಿಲ್ ಜಡ್ಜ್ ಮತ್ತು ಜೆಎಮ್‌ಎಫ್‌ಸಿ, ನ್ಯಾಯಾಲಯದಲ್ಲಿ ಸಲ್ಲಿಸಿದ್ದರು, ಸದ್ರಿ ಪ್ರಕರಣವನ್ನು ಇಂದು ನಡೆದ ಲೋಕ್ ಆದಾಲತ್ನಲ್ಲಿ ನ್ಯಾಯಾಧೀಶೆ ಅಕ್ಷತಾ ಸಿ ಆರ್. ರವರ ಸಮಕ್ಷಮ ಇತ್ಯರ್ಥಗೊಳಿಸಿ, ಗಂಡ ಹೆಂಡತಿಯನ್ನು ಒಂದು ಮಾಡಿದರು.
ಅರ್ಜಿದಾರರ ಪರವಾಗಿ ಕೆ.ಎನ್ ಹೆಗಡೆ ವಕೀಲರು ಹಾಗೂ ಎದುರುದಾರರ ಪರ ಎಮ್.ಎ.ನಂದಿಗಟ್ಟಿ ವಕೀಲರು ಹಾಜರಿದ್ದರು. ಸದ್ರಿ ಲೋಕ್ ಆದಾಲತನಲ್ಲಿ ಸಹಾಯಕ ಸರಕಾರಿ ಅಭಿಯೋಜಕ ಶ್ರೀಪ್ರಸಾದ್ ರಮೇಶ ಹೆಗಡೆ ರವರು ಕಲಂ 323,504 ಮತ್ತು 506 ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ದಾಖಲಾದ ಎರಡು ಪ್ರಕರಣಗಳನ್ನು ಬಾಧಿತ ವ್ಯಕ್ತಿ ಮತ್ತು ಆರೋಪಿಗಳ ನಡುವೆ ರಾಜಿ ಸಂಧಾನ ಏರ್ಪಟಟಿದ್ದರಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಮುಕ್ತಾಯಗೊಳಿಸಿದರು.