ರಾಮಚಂದ್ರ ಗೌಡ ಕಾಣೆ
ಕಾರವಾರ 20: ಕುಮಾರ ರಾಮಚಂದ್ರ ಗೌಡ (37 ವರ್ಷ) ಕುಮಟಾ ತಾಲೂಕಿನ ಸಾ: ಬಿದ್ರಿಗೇರಿ ಈತನು 27 ನವೆಂಬರ್ 2024 ರಂದು ಬೆಳಗ್ಗೆ 7 ಗಂಟೆಗೆ ಮನೆಯಿಂದ ಹೋದವನು ಇಲ್ಲಿಯವರೆಗೂ ಮನೆಗೂ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾನೆ.
ಕಾಣೆಯಾದ ವ್ಯಕ್ತಿಯ ಚಹರೆ: ಗೋಧಿ ಮೈಬಣ್ಣ, ದುಂಡನೇಯ ಮುಖ, ಸಾಧರಣ ಮೈ ಕಟ್ಟು, ಬಲಗೈಗೆ ಅಚ್ಛೆ ಹಾಕಿಕೊಂಡಿರುತ್ತಾನೆ. ಸುಮಾರು 5.6 ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾನೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದಲ್ಲಿ ಗೋಕರ್ಣ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಎ.ಎಸ್.ಐ ಸುನೀಲ ಕುಡಲಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.