ನಾಳೆ ಸಾಯಿಬಾಬಾ ದೇವಸ್ಥಾನದಲ್ಲಿ ರಾಮನವಮಿ ಉತ್ಸವ

Ram Navami festival at Sai Baba temple tomorrow

ನಾಳೆ ಸಾಯಿಬಾಬಾ ದೇವಸ್ಥಾನದಲ್ಲಿ ರಾಮನವಮಿ ಉತ್ಸವ 

ವಿಜಯಪುರ 04: ನಗರದ ಅಥಣಿ ರಸ್ತೆಯ ಅಲ್‌-ಅಮೀನ್ ಆಸ್ಪತ್ರೆಯ ಎದುರಿಗೆ ಇರುವ ಪ್ರತೀಕ್ಷಾ ನಗರದ ಸಾಯಿಬಾಬಾ ದೇವಸ್ಥಾನದಲ್ಲಿ ದಿ.6ರಂದು ರಾಮನವಮಿ ಉತ್ಸವವನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.  

ಮುಂಜಾನೆ 8 ಗಂಟೆಗೆ ಅಭಿಷೇಕ, 10 ಗಂಟೆಗೆ ಹೋಮ-ಹವನ ಮತ್ತು ಪೂಜಾ ಕೈಂಕರ್ಯ, ಮಧ್ಯಾನ್ಹ 12 ಗಂಟೆಗೆ ಮಂಗಳಾರತಿ. ನಂತರ ಮಹಾಪ್ರಸಾದ ಸೇವೆ ಕಾರ್ಯಕ್ರಮ ಜರುಗಲಿದೆ. ನಂತರ ಗೆಳೆಯರ ಬಳಗದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಆದ್ದರಿಂದ ಸಕಲ ಸದ್ಭಕ್ತರು ಈ ರಾಮನವಮಿ ಉತ್ಸವದಲ್ಲಿ ಭಾಗವಹಿಸಬೇಕೆಂದು ಎಂದು ದೇವಸ್ಥಾನ ಉತ್ಸವ ಕಮೀಟಿ ಸಂಚಾಲಕ ಧರ್ಮಾಜಿ ಇಂಗಳೆ ಮತ್ತು ಕಾರ್ಯದರ್ಶಿ ಪ್ರೊ. ಎಂ.ಎಸ್‌.ಖೊದ್ನಾಪೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.