ಪರಿಸರ ಸ್ನೇಹಿ ಬಳಗದ ಅಧ್ಯಕ್ಷ ಶಿವಯೋಗಿ ಸಿ.ಎಚ್.ಮೋಹನಕುಮಾರ ಪುರಸಭೆ
ಬ್ಯಾಡಗಿ 02 : ಪಟ್ಟಣದಲ್ಲಿಯ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಿ ಹೆಸರಾಂತ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಕವಿಗಳ ಹೆಸರಿಡುವಂತೆ ಪರಿಸರ ಸ್ನೇಹಿ ಬಳಗದ ಅಧ್ಯಕ್ಷ ಶಿವಯೋಗಿ ಸಿ.ಎಚ್.ಮೋಹನಕುಮಾರ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.ಮನವಿ ಸಲ್ಲಿಸಿ ಮಾತನಾಡಿ ಪಟ್ಟಣದ ಸೌಂದರ್ಯ ಹೆಚ್ಚಿಸುವಲ್ಲಿ ಪಾರ್ಕಗಳ ಅಭಿವೃದ್ಧಿ ಅವಶ್ಯಕವಾಗಿದೆ. ಇಲ್ಲಿನ ಸಾರ್ವಜನಿಕ ಉದ್ಯಾನವನಗಳ ಪರಸ್ಥಿತಿ ಅಯೋಮಯ ವಾಗಿದೆ.ನಮ್ಮ ಸಂಸ್ಥೆಯ ವತಿಯಿಂದ ಪಟ್ಟಣದಲ್ಲಿರುವ ಪಾರ್ಕ, ದೇವಸ್ಥಾನ ಹಾಗೂ ಸ್ಮಶಾನಗಳಲ್ಲಿ ಹಣ ವ್ಯಯಿಸಿ ಶ್ರಮದಾನದ ಮೂಲಕ ಗಿಡಗಳನ್ನು ನೆಟ್ಟು ಪೋಷಿಸುತ್ತಲಿದ್ದೇವೆ. ಆದರೇ ಪಾರ್ಕಗಳು ನಿರ್ವಹಣೆ ಕೊರತೆಯಿಂದ ಹಾಳಾಗಿವೆ.ನೀರಿನ ಸಮಸ್ಯೆ ಹಾಗೂ ಭದ್ರತಾ ವ್ಯವಸ್ಥೆ ಇಲ್ಲದೇ ಇರುವುದರಿಂದಾಗಿ ಗಿಡಗಳನ್ನು ಪ್ರಾಣಿ ಪಶುಗಳು ಹಾಳು ಮಾಡುತ್ತಿವೆ. ಪಕ್ಕದ ಹಾವೇರಿ ರಾಣೆಬೆನ್ನೂರು ನಗರಗಳಲ್ಲಿ ಪಾರ್ಕಗಳಿಗೆ ಭದ್ರತೆ ಇರುವುದರಿಂದ ಅಲ್ಲಿನ ಪಾರ್ಕಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಅದರಂತೆ ನಮ್ಮ ಪಾರ್ಕ್ ಗಾಳಿಗೂ ನೀರಿನ ಹಾಗೂ ಭದ್ರತಾ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದ್ದಾರೆ. ಉದ್ಯಾನವನದಲ್ಲಿ ಮಕ್ಕಳ ಜೋಕಾಲಿ, ಜಾರುಗುಂಡಿ, ಇತರ ಆಟಿಕೆ ಸಾಮಗ್ರಿಗಳನ್ನು ಆಳವಡಿಸಿ ಮಕ್ಕಳಿಗೆ ಆಹ್ಲಾದಕರ ವಾತಾವರಣ ಸೃಷ್ಟಿಸಲು ಒತ್ತು ನೀಡಬೇಕು.ನಾಗರಿಕರು ಸದೃಢ ಆರೋಗ್ಯ ದೃಷ್ಟಿಯಿಂದ, ಮನಸ್ಸಿನ ಉಲ್ಲಾಸಕ್ಕೆ ಸಂತೋಷದಿಂದ ಉದ್ಯಾನವನದಲ್ಲಿ ಕಾಲ ಕಳೆಯಬೇಕು. ಅದಕ್ಕಾಗಿ ಉದ್ಯಾನವನ್ನು ನಂದನವನ್ನಾಗಿ ಮಾರಿ್ಡಸಬೇಕಾಗಿದೆಉದ್ಯಾನವನಗಳಿಗೆ ಹ್ಣ್ತಿಹಿ್ಘ್ಲ್ಕುಷ್ಛ ಭೇದವಿಲ್ಲ. ಎಲ್ಲರ ಮನಸ್ಸಿಗೆ ಹಿತ ನೀಡುವುದರೊಂದಿಗೆ ಪರಿಸರ ಕಾಪಾಡಬೇಕು.ಪ್ರತಿದಿನ ಸಾರ್ವಜನಿಕರು ವಾಯು ವಿಹಾರಕ್ಕೆ ಬರುತ್ತಲಿದ್ದಾರೆ. ಮೂಲ ಸೌಕರ್ಯ ಅಭಿವೃದ್ಧಿಯ ಜತೆ, ಹಸುರೀಕರಣಕ್ಕೆ ಮುಂದಾಗಬೇಕು ಮನಸ್ಸಿಗೆ ಮುದ ನೀಡುವ ಹಾಗೂ ಚೈತನ್ಯ ನೀಡುವ ಪಾರ್ಕಗಳನ್ನು ಜನರು ಬಯಸುತ್ತಿದ್ದಾರೆಂದು ಮುಖ್ಯಾಧಿಕಾರಿ ವಿನಯಕುಮಾರ್ ಹೊಳೆಪ್ಪಗೋಳ ಅವರಿಗೆ ಒತ್ತಾಯಿಸಿದ್ದಾರೆ.