ಕಳಪೆ ಕಾಮಗಾರಿ: ಕ್ರಮಕ್ಕೆ ಆಗ್ರಹ

ಗದಗ 18: ಲಕ್ಷ್ಮೇಶ್ವರ ನಗರಕ್ಕೆ ಅಂಟಿಕೊಂಡಿರುವ ಲಕ್ಷ್ಮೇಶ್ವರ-ಗದಗ ಮುಖ್ಯ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿಯಿಂದ ರಸ್ತೆ ಮದ್ಯದಲ್ಲಿಯೇ ಒಳಚರಂಡಿ ಪೈಪ್ ಅಳವಡಿಸುವ ಕುರಿತು ರಸ್ತೆ ಅಗೆದು ಪೈಪ್ ಜೋಡಣೆ ಮಾಡಿ ಡಾಂಬರೀಕರಣ ಮಾಡಲಾಗಿದ್ದು ಆದರೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸದೆ ಸಂಪೂರ್ಣವಾಗಿ ಕಳಪೆ ಸಾಮಗ್ರಿ ಬಳಸಿರುವುದು ಕಂಡುಬರುತ್ತದೆ. ಇಲ್ಲಿ ಸಂಚರಿಸುವ ಪ್ರತಿಯೊಬ್ಬರೂ ತಮ್ಮ ಜೀವನವನ್ನು ತಮ್ಮ ಕೈಯಲ್ಲಿ ಹಿಡಿದು ಈ ಸ್ಥಳಕ್ಕೆ ಬರುವಂತಹ ಪರಿಸ್ಥಿತಿ ನಿಮರ್ಾಣವಾಗಿದೆ. ಈ ರಸ್ತ್ತೆಯು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವುದರಿಂದ ಪ್ರತಿ ದಿನವು ನೂರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ.ಇದೇ ರಸ್ತೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಸಂಚರಿಸುತ್ತಾರೆ ಆದರೂ ಈ ರಸ್ತೆಯನ್ನು ನಿರ್ಲಕ್ಷಿಸುವ ಪರಿಸ್ಥಿತಿ ಬಂದಿದೆ. ಇಲ್ಲಿ ಸಂಚರಿಸುವವರ ಪ್ರಾಣಕ್ಕೆ ತೊಂದರೆ ಆಗುವ ಮೊದಲು ದುರಸ್ಥಿ ಕಾರ್ಯವಾಗಲಿ ಇಲ್ಲಿ ನಾಮ ಫಲಕವಾಗಲಿ ಇಲ್ಲಿ ಇಲ್ಲ. ಹಗಲಿರುಳು ಅನ್ನದೆ ಅಧಿಕವಾಗಿ ವಾಹನಗಳು ಸಂಚರಿಸುವುದರಿಂದ ಅನಾಹುತಕ್ಕೆ ಹೇಳಿ ಮಾಡಿಸಿದ ರಸ್ತೆ ಇದ್ದಂತೆ ಕಾಣುತ್ತಿದೆ.ಕನರ್ಾಟಕ ನೀರು ಸರಬರಾಜು ಮತ್ತು ಒಳಚರಂಡಿ ಅಧಿಕಾರಿಗಳು, ಒಳಚರಂಡಿ ಗುತ್ತಿಗೆದಾರರು, ಇತ್ತಕಡೆ ಗಮನ ಹರಿಸಿ ಎಂಬುದು ಇಲ್ಲಿ ಸಂಚರಿಸುವ ಜನರ ಆಗ್ರಹ.