ಪ್ರತಿಯೊಂದು ರಂಗದಲ್ಲೂ ಎಲ್ಲರೂ ಸಕ್ರೀಯವಾಗಿ ಭಾಗವಹಿಸಿ: ಜಿಲ್ಲಾಧಿಕಾರಿ ಹಿರೇಮಠ

ಗದಗ 15: ಪ್ರತಿಯೊಂದು ರಂಗದಲ್ಲೂ ಹೆಚ್ಚು ಸ್ಪರ್ಧೆ  ಇದ್ದು, ಉದ್ಯೋಗ ಕ್ಷೇತ್ರದಲ್ಲಿ  ಸಕ್ರೀಯವಾಗಿ ಎಲ್ಲರೂ ಭಾಗವಹಿಸಿ ಉದ್ಯೋಗ ಮೇಳದ  ಸದುಪಯೋಗ ಪಡೆದುಕೊಳ್ಳಬೇಕು ಎಂದು  ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನುಡಿದರು. 

        ಜಿಲ್ಲಾ ಆಡಳಿತ,   ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ  ಹಾಗೂ ಯಶ್ ಕೇಂದ್ರ ಇವರ ಸಹಯೋಗದಲ್ಲಿ ನಗರದ ಅಂಬೇಡ್ಕರ ಭವನದಲ್ಲಿಂದು  ವಿಶ್ವ ಕೌಶಲ್ಯ ದಿನದ ಪ್ರಯುಕ್ತ ಕೌಶಲ್ಯ ಸಂವಾದ ವೇದಿಕೆ ಹಾಗೂ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು  ಸರಕಾರಿ ಕೆಲಸಕ್ಕೆ ಸೀಮಿತರಾಗದೇ ಸ್ವಂತ ಉದ್ಯೋಗವನ್ನು ರೂಪಿಸಿಕೊಳ್ಳಬೇಕು. ಇವತ್ತಿನ ದಿನಗಳಲ್ಲಿ  ಶ್ರಮ ಪಟ್ಟರೆ  ಯಶಸ್ಸು ಸಾಧಿಸಲು ಸಾಧ್ಯ.   ಸರಕಾರವು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ ಆ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು.  ಎಂದು ಜಿಲ್ಲಾಧಿಕಾರಿಗಳು  ತಿಳಿಸಿದರು. 

       ಅಧ್ಯಕ್ಷತೆ ವಹಿಸಿದ್ದ ಗದಗ ಜಿ.ಪಂ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ಮಂಜುನಾಥ ಚವ್ಹಾಣ  ಅವರು ಮಾತನಾಡಿ  ಮಾನವ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಳ್ಳಬೇಕು.  ಖಾಸಗಿ ಕಂಪನಿಗಳ ಉದ್ಯೋಗ ಅವಕಾಶಗಳನ್ನು ಸದುಪಯೋಗ ಪಡೆದುಕೊಳ್ಳಿ.  ಜಿಲ್ಲಾ ಮಟ್ಟದಲ್ಲಿ ಉದ್ಯೋಗ ವಿನಿಮಯ ಕೇಂದ್ರವು   ವಿವಿಧ ಕಂಪನಿಗಳಲ್ಲಿ ಅವಕಾಶ ಮತ್ತು ಮಾಹಿತಿಯನ್ನು  ನೀಡುತ್ತಾ ಬಂದಿದ್ದು, ವಿದ್ಯಾಭ್ಯಾಸಕ್ಕನುಗುಣವಾಗಿ  ವಿವಿಧ ಇಲಾಖೆಯಲ್ಲಿ ಅವಕಾಶ ಪಡೆದುಕೊಳ್ಳಬೇಕು. ಸರಕಾರದ ಕೆಲಸಕ್ಕೆ ಸೀಮಿತರಾಗದೇ ನಿಮ್ಮ ಸ್ವಂತ ಉದ್ಯೋಗಗಳನ್ನು ಪ್ರಾರಂಭಿಸುವುದರ ಜೊತೆಗೆ   ಯೋಜನೆಯ  ಅವಕಾಶಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು  ತಿಳಿಸಿದರು

      ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿದರ್ೇಶಕ  ಟಿ,ದಿನೇಶ ಮಾತನಾಡಿ ಜಿಲ್ಲೆಯು ಕೌಶಲ್ಯ ಆಧಾರಿತ ಜಿಲ್ಲೆ ಆಗಬೇಕು.  ಜಿಲ್ಲೆಯಲ್ಲಿ   ಕೌಶಲ್ಯ  ತರಬೇತಿ ಸ್ಥಾಪನೆ ಜೊತೆಗೆ    ಹೊಸ ಹೊಸ ಕ್ಷೇತ್ರಗಳಿಗೆ ಬೇಡಿಕೆ ಇರುವ ಆ ಕ್ಷೇತ್ರಗಳ  ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶವನ್ನು ಒದಗಿಸಬೇಕು. ಯಾವುದೇ ಕ್ಷೇತ್ರದಲ್ಲಿ ತರಬೇತಿ ಪಡೆಯದೇ ನೇರವಾಗಿ ಕೆಲಸ ಮಾಡಲು ಸಾದ್ಯವಿಲ್ಲ, ಆದ್ದರಿಂದ ತರಬೇತಿಯನ್ನು ಪಡೆಯುವುದು ಅವಶ್ಯವಾಗಿದೆ. ಉದ್ಯೋಗ ಕಚೇರಿಯ ಸಹಾಯವನ್ನು ಪಡೆದುಕೊಂಡು ಉದ್ಯೋಗಿಗಳು ಹೆಚ್ಚು ಅವಕಾಶಗಳನ್ನು ಸದುಪಯೋಗ ಪಡಿದುಕೊಳ್ಳಬೇಕು ಎಂದು ತಿಳಿಸಿದರು. 

      ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿ ತನುಜಾ ಸ. ರಾಮಪುರೆ  ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿ ತಿಂಗಳು ಉದ್ಯೋಗ ಮೇಳ ಕಾರ್ಯಾಗಾರ ನಡೆಯುತ್ತಿದೆ.   ನಿರುದ್ಯೋಗಿಗಳು ಉದ್ಯೋಗ ವಿನಿಮಯ ಕಚೇರಿಯ ಸಹಾಯವನ್ನು ಪಡೆದುಕೊಳ್ಳಬೇಕು. ಸಿಕ್ಕಿರುವ ಅವಕಾಶಗಳನ್ನು ಸದುಪಯೋಗ ಪಡೆದುಕೊಳ್ಳಿ ಎಂದು ಮಾತನಾಡಿದರು. 

ಇದೇ ಸಂದರ್ಭದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ನಾಗರಾಜ ಜಿ ನಾಯಕ, ಗದಗ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಉಪಾಧ್ಯಕ್ಷ ಶರಣ ಬಸಪ್ಪ ಕುರಡಗಿ, ಕನರ್ಾಟಕ ರಾಜ್ಯ ಹಣಕಾಸು ಸಂಸ್ಥೆ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಸ್.ಬಿ. ಬಾರಕೇರ, ಮಲ್ಟಿಪಲ್ಲರ ಮುದ್ರಾ ಉದ್ಯೋಗಧಾತ ಸೈಯದ್ ಮೊನಿವುದ್ದೀನ್,  ವಿವಿಧ ಪದವಿ ಕಾಲೇಜು ಪ್ರಾಚಾರ್ಯರಾದ  ಡಾ. ಪಿ.ಜಿ. ದೇಶಪಾಂಡೆ,  ಡಾ. ಎ.ಎ. ಆವಟೆ, ಭರಮಪ್ಪ ಬಿ, ಬಸವರಾಜ ಮಲ್ಲೂರು, ಶ್ರೀಧರ್ ಪಾಟೀಲ, ಸುಜಯ್ ಹುಬ್ಬಳ್ಳಿ  ಹಾಗೂ ವಿವಿಧ ಖಾಸಗಿ ಕಂಪನಿಯ ಮುಖ್ಯಸ್ಥರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.    ನಾಗರಾಜು ಡಿ ನಿರೂಪಿಸಿದರು, ಶಂಕರೆಡ್ಡಿ ಎಚ್.ಎದ್, ಸ್ವಾಗತಿಸಿ ವಂದಿಸಿದರು.