ಗ್ರಾಮಸ್ಥರು ಪಂಚಾಯಿತಿ ತೆರಿಗೆ ಹಣ ಕಟ್ಟಿರಿ ಪಿಡಿಓ ರಂಗಣ್ಣ ಗುಜನಟ್ಟಿ

PDO Ranganna Gujanatti to pay the panchayat tax money

ಗ್ರಾಮಸ್ಥರು ಪಂಚಾಯಿತಿ ತೆರಿಗೆ ಹಣ ಕಟ್ಟಿರಿ ಪಿಡಿಓ ರಂಗಣ್ಣ ಗುಜನಟ್ಟಿ                                         

 ಹಳ್ಳೂರ 07:  ಗ್ರಾಮ ಪಂಚಾಯತಿ ತೆರಿಗೆ ವಸೂಲಾತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಾದ ರಂಗಣ್ಣ ಗುಜನಟ್ಟಿ ಮಾತನಾಡಿ ಸಾರ್ವಜನಿಕರು  ಪ್ರತಿಯೊಬ್ಬರೂ ಪಂಚಾಯತಿ ತೆರಿಗೆ ಬರಣಾ ಮಾಡಿ ಗ್ರಾಮದ ಸರ್ವೋತ್ತೋ ಮುಖ ಅಭಿವೃದ್ದಿಗೆ ಸಹಕರಿಸಬೇಕೆಂದು ಕರೆ ನೀಡಿದರು. ಕಳೆದ ತಿಂಗಳಿನಲ್ಲಿ ಒಂದೆ ದಿನದಲ್ಲಿ 5 ಲಕ್ಷ 63 ಸಾವಿರ 132  ರೂಪಾಯಿ ತೆರಿಗೆ ವಸೂಲಾತಿ ಮಾಡಿ ಮೂಡಲಗಿ ತಾಲೂಕಿನನಲ್ಲಿಯೇ ತೃತೀಯ ಸ್ಥಾನ ಪಡೆದಿದೆ.  

ಆದ್ದರಿಂದ 7 ನೇ ತಾರಿಕಿನಿಂದ ತೆರಿಗೆ ವಸೂಲಾತಿ ಅಭಿಯಾನ ಪ್ರಾರಂಭಿಸಿದ್ದೇವೆ ಎಲ್ಲರೂ ತೆರಿಗೆ ಕಟ್ಟಿ ಸಹಕರಿಸಬೇಕೆಂದು ಹೇಳಿದರು. ಈ ಸಮಯದಲ್ಲಿ  ಮಹಾಂತೇಶ ಕುಂದರಗಿ.ಮಹಾಂತೇಶ ಸಂತಿ. ಅರ್ಜುನ ಕೂಲಿಗೋಡ. ರಮೇಶ ದುರದುಂಡಿ.ಮುರಿಗೆಪ್ಪ ಮಾಲಗಾರ..ಪ್ರಕಾಶ ಡಬ್ಬನ್ನವರ.ಸುರೇಶ  ಲಕ್ಷ್ಮೇಶ್ವರ ಹಾಗೂ ಸ್ವ ಸಹಾಯ ಸಂಘಗಳ ಪ್ರತಿನಿಧಿಗಳಾದ ಜಯಶ್ರೀ ಬಾರಿಕಾರ. ರೇಖಾ ಗೋಸಬಾಳ.ಬೌರವ್ವಾ ಹಡಪದ. ಶ್ರುತಿ ಕೂಲಿಗೋಡ. ಸುಜಾತಾ ಮೂಗಡ್ಲಿಮಠ.ಸೇರಿದಂತೆ ಪಂಚಾಯತಿ ಕಾರ್ಯದರ್ಶಿ, ಸ್ವಚ್ಚತಾಗಾರ, ಬಿಲ್ ಕಲೆಕ್ಟರ್ ಸ್ವ ಸಹಾಯ ಸಂಘ, ಪಂಚಾಯತಿ ಸಿಬ್ಬಂದ್ದಿಗಳಿದ್ದರು.