ಬೆಂಗಳೂರು 10: ಯಾವುದೇ ಕಾರಣಕ್ಕೂ ಶಾಸಕಾಂಗ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಹಿಂದಕ್ಕೆ ತೆಗೆದುಕೊಳ್ಳುವ ಮಾತೇ ಇಲ್ಲ ಎಂದು ಶಾಸಕ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರಾಜಿನಾಮೆ ಪತ್ರ ಕ್ರಮಬದ್ದವಾಗಿದೆ ಎಂದು ಮಾಧ್ಯಮಗಳ ಮೂಲಕ ಅರಿತುಕೊಂಡಿದ್ದೇನೆ. ಸ್ಪೀಕರ್ ನನಗೆ 15 ರಂದು ಆಗಮಿಸುವಂತೆ ಹೇಳಿದ್ದು, ಅಂದು ತೆರಳಿ ಮುಂದಿನ ಪ್ರಕ್ರಿಯೆಗಳನ್ನು ಮುಗಿಸುತ್ತೇನೆ ಎಂದು ಹೇಳಿದರು.
ಕೇಂದ್ರದ ಕಾಂಗ್ರೆಸ್ ನಾಯಕರು ರಾಜ್ಯಕ್ಕೆ ಆಗಮನ ವಿಚಾರಕ್ಕೆ ಸಂಬಂಧ ಮಾತನಾಡಿದ ಅವರು, ನನಗೆ ಯಾರೂ ಕರೆ ಮಾಡಿ ಮಾತನಾಡಿಸಿಲ್ಲ. ಹಿರಿಯ ನಾಯಕರು ಯಾರೂ ನನ್ನನ್ನು ಸಂಪಕರ್ಿಸಿಲ್ಲ. ನಾನು ತೆಗೆದುಕೊಂಡಿರುವ ರಾಜೀನಾಮೆ ನಿಧರ್ಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಖಡಕ್ ಆಗಿ ಹೇಳಿದರು. ಇದೇ 12 ರಿಂದ ಆರಂಭವಾಗುವ ಅಧಿವೇಶನಕ್ಕೆ ತೆರಳುತ್ತೇನೆ. ತನ್ನ ಮಗಳು ಶಾಸಕಿ ಸೌಮ್ಯರೆಡ್ಡಿ ಅವರು ಮೊನ್ನೆ ಕೇಂದ್ರ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಅವರನ್ನ ಭೇಟಿ ಮಾಡಿದ್ದರು. ಅವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮಗಳ ರಾಜಿನಾಮೆ ನಿಧರ್ಾರ ಅವರೇ ತೆಗೆದುಕೊಳ್ಳಬೇಕು. ಅದರಲ್ಲಿ ನನ್ನ ಹಸ್ತಕ್ಷೇತವಿಲ್ಲ ಎಂದು ತಿಳಿಸಿದರು.
ಒಂದು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆ ಆಗೋದು ಅಷ್ಟೊಂದು ಸುಲಭದ ಮಾತಲ್ಲ. ಕ್ಷೇತ್ರದ ಜನತೆಯ ಹಿತಾಸಕ್ತಿ ಮುಖ್ಯ. ಹಾಗಾಗಿ, ಕ್ಷೇತ್ರದ ನಾಯಕರ ಜನತೆಯ ಅಭಿಪ್ರಾಯದ ಮೇಲೆ ರಾಜೀನಾಮೆ ನಿಧರ್ಾರ ನಿಂತಿರುತ್ತದೆ. ಅವರಿಗೆ ರಾಜಿನಾಮೆ ಕೊಡಿ ಅಂತ ನಾನೆಂದೂ ಒತ್ತಡ ಹಾಕಲ್ಲ. ಅದು ಅವರ ಸ್ವಂತ ಇಚ್ಚೆಗೆ ಬಿಟ್ಟಿದ್ದು ಎಂದು ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದರು.