ಕಾಗಿನೆಲೆಯ ನಿರಂಜನಾನಂದ ಪುರಿ ಸ್ವಾಮೀಜಿಯವರಿಗೆ ಗೌರವ ಡಾಕ್ಟರೇಟ ಪದವಿ ಪ್ರದಾನ

Niranjanananda Puri Swamiji of Kaginele conferred with honorary doctorate degree

ಕಾಗಿನೆಲೆಯ ನಿರಂಜನಾನಂದ ಪುರಿ ಸ್ವಾಮೀಜಿಯವರಿಗೆ ಗೌರವ ಡಾಕ್ಟರೇಟ ಪದವಿ ಪ್ರದಾನ 

ಗದಗ 04 :  ಕಾಗಿನೆಲೆ ಆಧಿಕೇಶವನ ಕೃಪಾಶೀರ್ವಾದ ಹಾಗೂ ಭಕ್ತ ಮಹಾತ್ಮ ಸಂತ ಕನಕದಾಸರ ಸದಾವಕಾಲ ಸನ್ಮಂಗಲದ ಮಹಾವದಾನಿ,  ಅಕ್ಷರಯೋಗಿ,  ಸಮಾಜೋಧಾರ್ಮಿಕ ಸೇವೆಗಾಗಿ ದಾವಣಗೆರೆಯ ವಿಶ್ವವಿದ್ಯಾಲಯ  ಕಾಗಿನೆಲೆಯ ಪೂಜ್ಯಶ್ರೀ  ನಿರಂಜನಾನಂದಪುರಿ ಮಹಾಸ್ವಾಮೀಜಿಯವರಿಗೆ ಗೌರವ ಡಾಕ್ಟರೇಟ ಪದವಿಯನ್ನು ರಾಜ್ಯಪಾಲರಾದ ಥಾವರಚಂದ ಗೆಲ್ಹೋಟ ಅವರು ಬುಧವಾರ ಜರುಗಿದ ದಾವಣಗೆರೆ ವಿಶ್ವವಿದ್ಯಾಲಯದ 12 ನೇ ಘಟಿಕೋತ್ಸವ ಸಮಾರಂಭದಲ್ಲಿ ನೀಡಿ ಗೌರವಿಸಿದರು. ಉನ್ನತ ಶಿಕ್ಷಣ ಸಚಿವರಾದ ಡಾ. ಎಮ್‌. ಸಿ. ಸುಧಾಕರ ಹಾಗೂ ಕುಲಪತಿಗಳಾದ ಡಾ. ಬಿ. ಡಿ. ಕುಂಬಾರ ಅವರ ನೇತೃತ್ವದಲ್ಲಿ ಸಾದರಪಡಿಸಿದರು.   ಈ ಸಂದರ್ಭದಲ್ಲಿ  ಕನಕದಾಸ ಶಿಕ್ಷಣ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಬಿ.ಎಫ್‌. ದಂಡಿನರವರು, ಕಾರ್ಯಾಧ್ಯಕ್ಷರಾದ  ರವೀಂದ್ರನಾಥ ದಂಡಿನರವರು, ಕಾರ್ಯದರ್ಶಿಗಳಾದ  ಶೀಲಾ ರವೀಂದ್ರನಾಥ ದಂಡಿನ ರವರು ಹಾಗೂ ಜಂಟಿ ಕಾರ್ಯದರ್ಶಿಗಳಾದ ಶ್ವೇತಾ ಪಿ ಬೆನಕನವಾರಿ ಅವರು  ಶುಭಾಶಯಗಳನ್ನು ಕೋರಿದರು.  ಪ್ರಸ್ತುತ ಘಟಕೋತ್ಸವದಲ್ಲಿ ರವೀಂದ್ರನಾಥ ದಂಡಿನ ಅವರು ಪ್ರಾಚಾರ್ಯರ ಬಳಗದೊಂದಿಗೆ ಡಾ.ಟಿ.ಎನ್‌.ಗೋಡಿ, ಡಾ. ಎನ್‌.ಎಮ್‌. ಅಂಬಲಿಯವರ, ಡಾ. ಜಿ.ಸಿ.ಜಂಪಣ್ಣನವರ, ಪ್ರೊ. ಉಮೇಶ ಹಿರೇಮಠ, ಹಾಗೂ ಡಾ. ಡಿ.ಬಿ.ಗವಾನಿಯವರು ಪಾಲ್ಗೊಂಡು  ಶ್ರೀಗಳಿಗೆ ಸನ್ಮಾನಿಸಿದರು.