ಉಪ್ಪಿನಬೆಟಗೇರಿ ಅಂಚೆ ಕಚೇರಿಗೆ ನೂತನ ಕಟ್ಟಡ
ಧಾರವಾಡ 24: ಉಪ್ಪಿನಬೆಟಗೇರಿ ಗ್ರಾಮದ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಪ ಅಂಚೆ ಕಚೇರಿಯು ಗ್ರಾಮದ ಬಸ್ ನಿಲ್ದಾಣ ಹತ್ತಿರದ ಸ್ವಂತ ಹೊಸ ಕಟ್ಟಡದಲ್ಲಿ ಜನವರಿ 20, 2025 ರಿಂದ ಕಾರ್ಯ ನಿರ್ವಹಿಸುತ್ತಿದೆ.
ಕೇಂದ್ರ ಸರಕಾರದ ಅಂಚೆ ಮತ್ತು ಸಂವಹನ ಮಂತ್ರಾಲಯದ ಅನುದಾನದಲ್ಲಿ ಈ ಕಟ್ಟಡ ನಿರ್ಮಿಸಲಾಗಿದ್ದು, ಉಪ ಅಂಚೆ ಕಚೇರಿಯು ಉಪ್ಪಿನಬೆಟಗೇರಿ, ಹನುಮನಾಳ, ಲೋಕುರ, ಕಲ್ಲೂರ, ಪುಡಕಲಕಟ್ಟಿ ಮತ್ತು ಯಾದವಾಡ ಗ್ರಾಮಗಳ ಸಾರ್ವಜನಿಕರಿಗೆ ಅಂಚೆ ಇಲಾಖೆಯ ವಿವಿಧ ಸೇವೆಗಳನ್ನು ನೀಡುತ್ತಿದೆ.
ಸಾರ್ವಜನಿಕರಿಗೆ ಅಗತ್ಯ ಸೇವೆಯನ್ನು ತಕ್ಷಣಕ್ಕೆ ನೀಡಲು ಅನಕೂಲವಾಗಲು ನೂತನ ಕಟ್ಟಡದಲ್ಲಿ ಜ.20 ರಿಂದ ಉಪ ಅಂಚೆ ಕಚೇರಿ ಕಾರ್ಯ ಆರಂಭಿಸಿದ್ದು, ಸದ್ಯದಲ್ಲಿಯೇ ನೂತನ ಕಟ್ಟಡದ ಲೋಕಾರೆ್ಣ ಕಾರ್ಯಕ್ರಮ ಜರುಗಲಿದೆ ಎಂದು ಧಾರವಾಡ ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.