ವಕ್ಫ್ ತಿದ್ದುಪಡಿ ವಿರೋಧಿಸಿ ಕಂಪ್ಲಿ ಪಟ್ಟಣದಲ್ಲಿ ಮುಸ್ಲಿಮರ ಪ್ರತಿಭಟನೆ
ಕಂಪ್ಲಿ 04: ಸಂಸತ್‌ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ವಿರೋಧಿಸಿ, ಅಂಜುಮನ್-ಎ-ಖಿದ್ಮಾತೆ ಇಸ್ಲಾಂ ಕಮಿಟಿಯಿಂದ ಧರ್ಮಗುರು ಸೈಯದ್ ಷಾ ಅಬುಲ್ ಹಸನ್ ಖಾದ್ರಿ ನೇತೃತ್ವದಲ್ಲಿ ಮುಸ್ಲಿಂ ಸಮಾಜದವರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ, ಶಾಸಕ ಜೆ.ಎನ್.ಗಣೇಶ ಸಮ್ಮುಖದಲ್ಲಿ ತಹಶೀಲ್ದಾರ್ ಶಿವರಾಜ ಶಿವಪುರ ಇವರಿಗೆ ಮನವಿ ಪತ್ರ ಸಲ್ಲಿಸಿದರು.
ನಂತರ ಶಾಸಕ ಜೆ.ಎನ್.ಗಣೇಶ ಮಾತನಾಡಿ, ವಕ್ಫ್ ತಿದ್ದುಪಡಿ ಮಾಡುವ ಮೂಲಕ ಕೇಂದ್ರ ಸರ್ಕಾರ ಮುಸ್ಲಿಂ ಸಮುದಾಯದವರಿಗೆ ದ್ರೋಹ ಬಗೆಯುವ ಕೆಲಸಕ್ಕೆ ಕೈಹಾಕಿದೆ. ಕೂಡಲೇ ಈ ಕಾಯ್ದೆ ತಿದ್ದುಪಡಿ ರದ್ದು ಮಾಡಬೇಕು ಎಂದರು. ತದನಂತರ ಅಂಜುಮನ್ ಕಮಿಟಿ ಅಧ್ಯಕ್ಷ ಕೆ.ಮಸ್ತಾನ್ ಮಾತನಾಡಿ, ಇಸ್ಲಾಂ ಕಾನೂನು ಪ್ರಕಾರ ವಕ್ಸ್ ಎಂದರೆ ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ದೇವರ ಹೆಸರಿನಲ್ಲಿ ಅರ್ಿಸಲಾದ ಆಸ್ತಿಯಾಗಿದೆ.
ಅಂತಹ ಆಸ್ತಿಗಳಿಂದ ಬರುವ ಆದಾಯವನ್ನು ಸಾಮಾನ್ಯವಾಗಿ ಮಸೀದಿಗಳನ್ನು ನಿರ್ವಹಿಸಲು ಮತ್ತು ಸಮುದಾಯದ ಬಡ ಜನರ ಅಭಿವೃದ್ಧಿಗಾಗಿ ಬಳಸಲಾಗುತ್ತದೆ. ವಕ್ಸ್ ಕಾಯ್ದೆ ಇಂದು ನಿನ್ನೆ ಜಾರಿಗೆ ಬಂದಿದ್ದಲ್ಲಿ ಇದು ಬ್ರಿಟಿಷ ಆಳ್ವಿಕೆ ಕಾಲದಿಂದಲು ಜಾರಿಯಲ್ಲಿದೆ. ಆದರೆ, ಇತ್ತೀಚೆಗೆ ಬಿಜೆಪಿ ಕೇಂದ್ರ ಸರ್ಕಾರವು ಈ ಹೊಸ ಮಸೂದೆಯನ್ನು ಜಾರಿಗೆ ತಂದು ಈ ಕಾಯ್ದೆಯಿಂದ ಮುಸ್ಲಿಂ ಸಮುದಾಯಕ್ಕೆ ತೊಂದರೆ ಮಾಡುತ್ತಿದೆ. ವಕ್ಸ್ ತಿದ್ದುಪಡಿ ಮಸೂದೆ ಭಾರತದ ಸಂವಿಧಾನದ ಮೇಲಿನ ದಾಳಿಯಾಗಿದೆ. ಇದು ಸಮಾಜವನ್ನು ಶಾಶ್ವತವಾಗಿ ದೃವಿಕರಣ ಸ್ಥಿತಿಯಲ್ಲಿಡಲು ಬಿಜೆಪಿ ಮಾಡಿದ ತಂತ್ರವಾಗಿದೆ. ಇದು ಕೇವಲ ಒಂದು ಸಮುದಾಯವನ್ನು ಗುರಿಯಾಗಿಸಿ ವಕ್ಸ್ ತಿದ್ದುಪಡಿ ಬಿಲ್ ಜಾರಿಗೆ ತಂದು ಅಲ್ಪಸಂಖ್ಯಾತರನ್ನು ಕೇಂದ್ರ ಸರ್ಕಾರವು ಅವಮಾನಿಸುತ್ತಿದೆ. ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದುಕೊಳ್ಳಲು ಯತ್ನಿಸುತ್ತಿದೆ.
ಈ ಮಸೂದೆಯು ಸಂವಿಧಾನವನ್ನು ದುರ್ಬಲಗೊಳಿಸುವ ಭಾರತಿಯ ಸಮಾಜವನ್ನು ವಿಭಜಿಸುವ ಗುರಿ ಹೊಂದಿದೆ. ಆದ್ದರಿಂದ ಕೇಂದ್ರ ಸರ್ಕಾರವು ಮಂಡಿಸಿರುವ ವಕ್ಸ್ ತಿದ್ದುಪಡಿ 2025 ಕಾಯ್ದೆಗೆ ಅಂಕಿತ ಹಾಕದೇ ರದ್ದು ಮಾಡಬೇಕೆಂದು ಒತ್ತಾಯಿಸಿದರು. ವಕ್ಫ್ ಆಸ್ತಿ ಬಿಟ್ಟು ಕೊಡುವುದಿಲ್ಲ, ಸಂವಿಧಾನ ವಿರೋಧಿ ಕಾನೂನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಘೋಷಣೆ ಕೂಗಿದ ಪ್ರತಿಭಟನಕಾರರು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಸದಸ್ಯ ಲೊಡ್ಡು ಹೊನ್ನೂರವಲಿ, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಅಂಜುಮನ್ ಕಮಿಟಿ ಸದಸ್ಯರಾದ ಜಹೀರ್, ಅತ್ತಾವುಲ್ಲಾ ರೆಹಮಾನ್, ಕರೀಮ್, ಮೆಹಬೂಬ್, ಮೌಲಾ ಹುಸೇನ್, ಮುಖಂಡರಾದ ಡಾ.ನೂರ ಸಾಹೇಬ್, ಕೆ.ಮೆಹಮೂದ್, ವಾಹಿದ್, ಯಾಳ್ಪಿ ಅಬ್ದುಲ್ ಮುನಾಫ್, ಬಡಿಗೇರ್ ವಲಿಸಾಬ್, ಬಿ.ಜಾಫರ್, ಹೆಚ್.ಶಬ್ಬೀರ್, ಫಾರೂಕ್, ಜಿಲಾನ, ಎಸ್.ಕೆ.ಇಮ್ತಿಯಾಜ್ ಸೇರಿದಂತೆ ಎಲ್ಲಾ ಮಸೀದಿಯ ಮುತುವಲಿಗಳು ಪಾಲ್ಗೊಂಡಿದ್ದರು.