ಮಾನಸಂಹಿ2024 - ರಾಷ್ಟ್ರೀಯ ಆಯುರ್ವೇದ ಸಮ್ಮೇಳನ ಹಾಗೂ ಕಾರ್ಯಾಗಾರ

Manasamhi2024 - National Ayurveda Conference and Workshop

ಮಾನಸಂಹಿ2024 - ರಾಷ್ಟ್ರೀಯ ಆಯುರ್ವೇದ ಸಮ್ಮೇಳನ ಹಾಗೂ ಕಾರ್ಯಾಗಾರ 

ಕೊಪ್ಪಳದ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಕಾಯಚಿಕಿತ್ಸಾ ಹಾಗೂ ಸ್ವಸ್ಥವೃತ್ತ ವಿಭಾಗದಿಂದ “ಮಾನಸಂಹಿ2024” ಎಂಬ ಶೀರ್ಷಿಕೆಯಲ್ಲಿ ರಾಷ್ಟ್ರೀಯ ಆಯುರ್ವೇದ ಸಮ್ಮೇಳನ ಹಾಗೂ ಕಾರ್ಯಾಗಾರವನ್ನು ಶನಿವಾರ ದಿನಾಂಕ 28 ನೇ ಡಿಸೆಂಬರ್ 2024 ರಂದು ಶ್ರೀ ಶಿವಶಾಂತವೀರ ಮಂಗಲ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.  

ಸಮ್ಮೇಳನದ ಅತಿಥಿಗಳಾಗಿ ಗುಜರಾತದಿಂದ ಆಗಮಿಸಿದ ಡಾ ಅರ​‍್ಣ ಭಟ್, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಸ್ವಸ್ಥವೃತ್ತ ವಿಭಾಗ ಹಾಗೂ ಡೀನ್, ಪ್ಲಾನಿಂಗ್ ್ಘ ಡೆವಲೆಪಮೆಂಟ್, ಜಾಮ್‌ನಗರ ಇವರು ಮಾತನಾಡಿ ಮನಸ್ಸನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಆಯುರ್ವೇದ ಹಾಗೂ ಯೋಗದಿಂದ ಮಾತ್ರ ಸಾಧ್ಯ. ಈ ಪದ್ಧತಿಗಳಲ್ಲಿ ಹೇಳಲಾದ ಪ್ರತಿಯೊಂದು ಅಂಶಗಳ ಪಾಲನೆ ಅನಿವಾರ್ಯವೆಂದು ಹೇಳುವುದರ ಜೊತೆಗೆ ಮಾಡುವ ಸರಿಯಾದ ವಿಧಾನವನ್ನು ತಿಳಿಸಿಕೊಟ್ಟರು. ಕಾರ್ಯಕ್ರಮದ ಮುಖ್ಯ ಭಾಷಣಕಾರರಾದ        ಡಾ. ಬಸವರಾಜ ತುಬಾಕಿ, ಡೀನ್, ಆಯುರ್ವೇದ ವಿಭಾಗ, ಕೆಎಲ್‌.ಇ ಸಂಸ್ಥೆಯ ಶ್ರೀ ಬಿ.ಎಂ.ಕೆ. ಆಯುರ್ವೇದ ಮಹಾವಿದ್ಯಾಲಯ, ಬೆಳಗಾವಿ ಇವರು ಮಾತನಾಡಿ ಮಾನಸ ರೋಗಗಳ ಮೇಲೆ ಆಯುರ್ವೇದ ಮೂಲಕ ಸಂಶೋಧನೆಗೈದ ಹಲವು ಚಿಕಿತ್ಸಾ ಕ್ರಮಗಳ ಬಗ್ಗೆ ವಿವರವಾಗಿ ತಿಳಿಸಿದರು.  

ಕಾರ್ಯಕ್ರಮದಲ್ಲಿ ಡಾ. ಸ್ವಪ್ನಾ ಪಾಂಡುರಂಗಿ, ಸಹಪ್ರಾಧ್ಯಾಪಕರು, ಆಋಊಂಓಖ, ಧಾರವಾಡ ಹಾಗೂ ಡಾ. ಮಾಧವ ದಿಗ್ಗಾವಿ, ಪ್ರಾಂಶುಪಾಲರು, ತಾರಾನಾಥ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯ, ಬಳ್ಳಾರಿ ಇವರುಗಳು ವೈದ್ಯವೃತ್ತಿಯಲ್ಲಿ ಮಾನಸಿಕ ರೋಗಿಗಳನ್ನು ಹೇಗೆ ತಿಳಿದುಕೊಳ್ಳಬೇಕು ಮತ್ತು ಚಿಕಿತ್ಸಾ ಕ್ರಮವನ್ನು ಅಳವಡಿಸಿಕೊಳ್ಳಬೇಕೆಂದು ವಿವರಿಸಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ಮಹಾಂತೇಶ ಸಾಲಿಮಠ, ಪ್ರಾಂಶುಪಾಲರು, ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ, ಕೊಪ್ಪಳ ಇವರು ಮಾತನಾಡಿ ಈ ರೀತಿಯ ಸಮ್ಮೇಳನಗಳು ವಿದ್ಯಾರ್ಥಿಗಳ, ವೈದ್ಯರ ಜ್ಞಾನ ಹೆಚ್ಚಿಸುವಲ್ಲಿ ಸಹಾಯಕವಾಗುತ್ತವೆ. ಮುಂದಿನ ದಿನಮಾನದಲ್ಲಿ ಆಧುನೀಕರಣದಿಂದ ಮಾನಸಿಕ ರೋಗಗಳು ಹೆಚ್ಚಾಗುವ ಸಂಭವವಿದ್ದು ವಿದ್ಯಾರ್ಥಿಗಳು ಆಯುರ್ವೇದ ಹಾಗೂ ಯೋಗದ ಪ್ರಾತ್ಯಕ್ಷಿಕ ತಿಳುವಳಿಕೆಯಲ್ಲಿ ತೊಡಗಿಸಕೊಳ್ಳಬೇಕೆಂದು ಸಲಹೆ ನೀಡಿದರು. 

ಎರಡು ದಿನದ ಸಮ್ಮೇಳನದಲ್ಲಿ ಡಾ. ಮಹೇಶ. ಸಾಲಿಮಠ ಹಾಗೂ ಡಾ. ಮಂಗಳಾ ಸಜ್ಜನರ, ಸ್ವಸ್ಥವೃತ್ತ ವಿಭಾಗದ ಡಾ. ಪ್ರಭು ನಾಗಲಾಪೂರ, ಡಾ. ಸೋಮನಾಥ.ಎಸ್, ಡಾ. ಆಶಾ.ಎಸ್‌.ಎ,       ಡಾ. ಅಮಲ್ ಎಸ್‌. ಚಂದ್ರನ್, ಡಾ. ನವೀನಕುಮಾರ ಮತ್ತು ಕಾಯಚಿಕಿತ್ಸಾ ವಿಭಾಗದ ಡಾ. ಮಂಜುಳಾ ಕರ್ಲವಾಡ, ಡಾ. ರಾಜಶೇಖರ ಶೆಟ್ಟರ್, ಡಾ. ಶ್ರೀಧರಯ್ಯ ಹಿರೇಮಠ ಸೇರಿ ಒಟ್ಟು 14 ಜನರು ಆಯುರ್ವೇದ ಮತ್ತು ಯೋಗದ ಮೂಲಕ ಮನಸ್ಸಿನ ನಿಯಂತ್ರಣ, ಮಾನಸಿಕ ರೋಗದ ಚಿಕಿತ್ಸಾ ಪದ್ಧತಿ ಹಾಗೂ ವಿವಿಧ ವಿಷಯಗಳ ಮೇಲೆ ಉಪನ್ಯಾಸ ನೀಡಿದರು.   

ಕಾರ್ಯಕ್ರಮದ ಘನ ಉಪಸ್ಥಿತಿಯನ್ನು ಶ್ರೀ ವೀರೇಶ ಕೊತಬಾಳ ಇವರು ವಹಿಸಿಕೊಂಡಿದ್ದರು.    ಉಪಪ್ರಾಂಶುಪಾಲರಾದ ಡಾ. ಸುರೇಶ ಹಕ್ಕಂಡಿ ಉಪಸ್ಥಿತರಿದ್ದರು. ಸ್ನಾತಕ, ಸ್ನಾತಕೋತ್ತರ ಹಾಗೂ ವೈದ್ಯರುಗಳು ಸೇರಿ ಸುಮಾರು 45 ಕ್ಕೂ ಹೆಚ್ಚು ಜನ ಪ್ರಬಂಧ ಮಂಡನೆ ಮಾಡಿದರು. ಉಪನ್ಯಾಸಕರ ವಿಭಾಗದಲ್ಲಿ  ಡಾ. ವೀಣಾ ಪತ್ತಾರ, ಸ್ನಾತಕೋತ್ತರ ವಿಭಾಗದಲ್ಲಿ ಡಾ. ಅಮೂಲ್ಯ ಹಾಗೂ ಡಾ. ಶಿವಾನಂದ, ಸ್ನಾತಕ ವಿಭಾಗದಲ್ಲಿ ಕುಮಾರಿ. ಕೌಶಲ್ಯ ಉತ್ತಮ ಪ್ರಬಂಧ ಪ್ರಶಸ್ತಿಗೆ ಭಾಜನರಾದರು.  ಸ್ನಾತಕೋತ್ತರ ವಿಭಾಗದಲ್ಲಿ ಡಾ ವೀರೇಂದ್ರ ಶೆಟಗಾರ ಹಾಗೂ ಸ್ನಾತಕ ವಿಭಾಗದಲ್ಲಿ ಕುಮಾರ. ಕಾರ್ತಿಕ ಇವರು ಉತ್ತಮ ಭಿತ್ತಿಪತ್ರದ (ಪೋಸ್ಟರ್) ಪ್ರಶಸ್ತಿ ಪಡೆದರು.  

ಕಾರ್ಯಕ್ರಮದ ನಿರೂಪಣೆಯನ್ನು ಡಾ. ಪವಿತ್ರಾ.ಜಿ. ಹಾಗೂ ಕುಮಾರಿ. ಅನ್ನಪೂರ್ಣ ನೇರವೇರಿಸಿದರು. ಸಮ್ಮೇಳನದ ಸಂಘಟನಾ ಕಾರ್ಯದರ್ಶಿಗಳಾದ ಡಾ. ಪ್ರಭು ನಾಗಲಾಪೂರ ಸ್ವಾಗತ ಹಾಗೂ ವಂದನಾರೆ​‍್ಣಗೈದರು.