ಲೋಕದರ್ಶನ ವರದಿ
ವಿಜಯಪುರ 02; ಮುಂಬರುವ ಲೋಕಸಭಾ ಚುನಾವಣೆಗೆ ಶೀಘ್ರದಲ್ಲಿಯೇ ಅಧಿಸೂಚನೆ ಹೊರಡುವ ಸಾಧ್ಯತೆ ಇದ್ದು, ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸಲು ಈಗಾಗಲೇ ವಿವಿಧ ಅಧಿಕಾರಿಗಳನ್ನೊಳಗೊಂಡ ಫ್ಲಾಯಿಂಗ್ ಸ್ಕ್ವಾಡ್, ಸ್ಟ್ಯಾಟಿಕ್ ಸವರ್ೇಲೆನ್ಸ್ ತಂಡ, ವಿಡಿಯೋ ಸವರ್ೈಲೆನ್ಸ್ ತಂಡಗಳನ್ನು ರಚಿಸಲಾಗಿದ್ದು, ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸುವ ದಿಸೆಯಲ್ಲಿ ಎಲ್ಲರೂ ಸನ್ನದ್ಧರಾಗುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ ಕಿಶೋರ ಸುರಳಕರ ಅವರು ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಆರಂಭಿಕ ತರಬೇತಿಯಾಗಿ ಏರ್ಪಡಿಸಲಾಗಿದ್ದ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮುಂಬರುವ ಲೋಕಸಭಾ ಚುನಾವಣೆಯು ನ್ಯಾಯಸಮ್ಮತವಾಗಿ ನಡೆಯುವ ನಿಟ್ಟಿನಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದ ತಕ್ಷಣ ಈಗಾಗಲೇ ನೇಮಿಸಿರುವ ಎಲ್ಲ ಅಧಿಕಾರಿಗಳನ್ನೊಳಗೊಂಡ ಸಮಿತಿಗಳು ತಕ್ಷಣ ಕಾರ್ಯಪ್ರವೃತ್ತರಾಗಲು ಸೂಚಿಸಿದರು.
ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ 4 ಫ್ಲಾಯಿಂಗ್ ಸ್ಕ್ವಾಡ್ ತಂಡಗಳು, ಸ್ಟ್ಯಾಟಿಕ್ ಸವರ್ೇಲೆನ್ಸ್ (ಸ್ಥಿರ ಕಣ್ಗಾವಲು ಸಮಿತಿ)ತಂಡಗಳನ್ನು ರಚಿಸಲಾಗಿದ್ದು, ಕಾರ್ಯನಿವರ್ಾಹಕ ಮ್ಯಾಜಿಸ್ಟ್ರೇಟ್ರೊಬ್ಬರನ್ನು ನಿಯೋಜಿಸುವ ಜೊತೆಗೆ ಅವಶ್ಯಕ ಪೋಲಿಸ್ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಯಾವುದೇ ರೀತಿಯ ಆಸೆ, ಆಮಿಷ್ಗಳನ್ನು ಒಡ್ಡುವಂತಹ ಚಟುವಟಿಕೆಗಳನ್ನು ನಿಯಂತ್ರಿಸುವ ಜೊತೆಗೆ ಈ ಕುರಿತಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಈ ತಂಡಗಳ ಜವಾಬ್ದಾರಿಗಳನ್ನು ಎಲ್ಲರೂ ಮುಂಚಿತವಾಗಿ ಅರಿತುಕೊಂಡು ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸಲು ಸನ್ನದ್ಧಗೊಳ್ಳುವಂತೆ ಹಾಗೂ ದಿನನಿತ್ಯ ಸಲ್ಲಿಸುವ ವರದಿಗಳ ಬಗ್ಗೆಯೂ ಪೂರ್ವಭಾವಿಯಾಗಿ ತಿಳಿದುಕೊಳ್ಳುವಂತೆ ಸಲಹೆ ನೀಡಿದರು.
ಮುಂಬರುವ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಜಿಲ್ಲೆಯಲ್ಲಿ 21 ಚೆಕ್ಪೋಸ್ಟ್ಗಳಲ್ಲಿ ಎಸ್.ಎಸ್.ಟಿ. ತಂಡಗಳು ಕಾರ್ಯನಿರ್ವಹಿಸಲಿದ್ದು, ಈ ತಂಡಗಳಿಗೆ ಅವಶ್ಯಕ ವಾಹನ ಮತ್ತು ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಎಫ್.ಎಸ್.ಟಿ. ತಂಡಗಳಿಗೂ ಸಿಸಿ ಕ್ಯಾಮೆರಾಗಳ ಜೊತೆಗೆ ಪ್ರತಿಯೊಂದು ತಂಡಕ್ಕೆ ವಿಡಿಯೋಗ್ರಾಫರ್ರೊಬ್ಬರನ್ನು ಸಹಾಯಕರಾಗಿ ನೀಡಲಾಗುತ್ತಿದ್ದು, ಅವಶ್ಯಕ ತರಬೇತಿಯನ್ನು ಇವರಿಗೆ ನೀಡಲಾಗುವುದು. ಚುನಾವಣೆ ಸಂದರ್ಭದಲ್ಲಿ ಎಫ್.ಎಸ್.ಟಿ., ಎಸ್.ಎಸ್.ಟಿ., ವಿ.ಎಸ್.ಟಿ. ಅಕೌಂಟಿಂಗ್, ತಂಡಗಳು ಸೇರಿದಂತೆ ವಿವಿಧ ತಂಡಗಳಲ್ಲಿ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಎಲ್ಲರೂ ಪ್ರಜಾ ಪ್ರಾತಿನಿಧಿಕ ಕಾಯ್ದೆಯಡಿ ಕಾರ್ಯನಿರ್ವಹಿಸಬೇಕಾಗಿರುವ ಹಿನ್ನಲೆಯಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿಭಾಯಿಸಬೇಕು. ಪ್ರತಿ ವಿಧಾನಸಭಾವಾರು ಗ್ರೇಡ್-2 ತಹಶೀಲ್ದಾರರನ್ನು ಒಳಗೊಂಡ ಸಮನ್ವಯ ಅಧಿಕಾರಿಗಳನ್ನು ಸಹ ನೇಮಿಸಲಾಗುತ್ತಿದ್ದು, 24/7 ಕಂಟ್ರೊಲ್ ರೂಂನ್ನು ಈಗಾಗಲೇ ಜಿಲ್ಲಾಧಿಕಾರಿಗಳ ಕಾಯರ್ಾಲಯದಲ್ಲಿ ಕಾಯರ್ಾರಂಭಗೊಂಡಿದ್ದು, 1950 ಟೋಲ್ಫ್ರಿ ಸಂಖ್ಯೆಗೆ 08352 ಕೋಡ್ ನಂಬರ್ದೊಂದಿಗೆ ಸಂಪಕರ್ಿಸಬಹುದಾಗಿದೆ. ಅದರಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮತಗಟ್ಟೆ ಮಟ್ಟದ ಜಾಗೃತಿ ತಂಡಗಳು ಆಯಾ ಬಿಎಲ್ಓ ಮತ್ತು ಇತರೆ 5 ಜನ ಸಿಬ್ಬಂದಿಗಳನ್ನೊಳಗೊಂಡು ಸಹ ರಚಿಸಲಾಗುತ್ತಿದ್ದು, ಇವರ ನೆರವನ್ನು ಸಹ ಪಡೆಯುವಂತೆ ಈ ತಂಡಗಳ ಅಧಿಕಾರಿಗಲಿಗೆ ಅಪರ ಜಿಲ್ಲಾಧಿಕಾರಿ ಪ್ರಸನ್ನ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯ ನೋಡಲ್ ಅಧಿಕಾರಿ ಬಿ.ಎಸ್. ನ್ಯಾಮಗೌಡ ಅವರು ಈ ಎಲ್ಲ ತಂಡಗಳ ಕರ್ತವ್ಯಗಳ ಬಗ್ಗೆ ಹಾಗೂ ಅಬಕಾರಿ ಜಿಲ್ಲಾ ಆಯುಕ್ತರಾದ ಎ.ರವಿಶಂಕರ ಅವರು ಮಾದರಿ ನೀತಿ ಸಂಹಿತೆ ಸಂದರ್ಭದಲ್ಲಿ ಅಬಕಾರಿ ಇಲಾಖೆಯಿಂದ ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಅವಶ್ಯಕ ಮಾಹಿತಿಯನ್ನು ನೀಡಿದರು.