ಲೋಕದರ್ಶನ ವರದಿ
ಬೆಳಗಾವಿ 17: ನಗರದ ಜೈನ್ ಕಾಲೇಜ್ ಆಫ್ ಎಂಜಿನಿಯರಿಗ್ನಲ್ಲಿ ನಡೆದ ಎರಡು ದಿನಗಳ ಅಧ್ಯಾಯ-2020 ಎಂಬ ರಾಷ್ಟ್ರಮಟ್ಟದ ಉತ್ಸವದಲ್ಲಿ ಕೆಎಲ್ಇ ಸಂಸ್ಥೆಯ ಲಿಂಗರಾಜ್ ಕಾಲೇಜು ತಂಡ ಚಾಂಪಿಯನ್ಶಿಪ್ ಅಲಂಕರಿಸಿತು.
ಬಿಬಿಎ ವಿದ್ಯಾಥರ್ಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಈ ಉತ್ಸವದಲ್ಲಿ ನಡೆದ ವಿವಿಧ ಸ್ಪಧರ್ೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದಾಗಿ ವಿದ್ಯಾಥರ್ಿಗಳ ಉತ್ಸಾಹ ವೈಭವಿಕರಣಗೊಂಡಿತ್ತು. ವಿದ್ಯಾಥರ್ಿಗಳಲ್ಲಿದ್ದ ಸೃಜನಶೀಲತೆಯ ಅಭಿವ್ಯಕ್ತಿಗೆ ವೇದಿಕೆಯಾಗಿತ್ತು.
ಅಂತಿಮ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಎಂಬಿಎ ವಿಭಾಗದ ಮುಖ್ಯಸ್ಥ ಡಾ. ಎಂ. ರೋಹಿತರಾಜ್, ವಿವಿಧ ಕ್ಷೇತ್ರಗಳಲ್ಲಿ ಭಾರತೀಯರು ಹೊಂದಿರುವ ಸಾಮಥ್ರ್ಯವನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ. ಭಾರತ ವಿಶ್ವಗುರುವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಕಾರಣ ವಿದ್ಯಾಥರ್ಿಗಳು ಕಲಿಕೆಯ ಪ್ರಕ್ರಿಯೆಯಲ್ಲಿ ಶಿಸ್ತುಬದ್ಧತೆ ಅಳವಡಿಸಿಕೊಳ್ಳಬೇಕು ಎಂದರು.
ನಮ್ಮೆದುರು ಇರುವ ಸವಾಲುಗಳನ್ನು ಸ್ವೀಕರಿಸಬೇಕು. ಎಲ್ಲ ಸಂದರ್ಭಗಳನ್ನು ನಿರ್ವಹಿಸಲು ಸಿದ್ಧರಾಗಬೇಕು. ಅವಕಾಶಗಳನ್ನು ಬಳಸಿಕೊಳ್ಳಬೇಕು. ಅದರಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದರು.
ಪದವಿ ಪೂರೈಸುವ ವಿದ್ಯಾಥರ್ಿಗಳು ನಮ್ಮ ರಾಷ್ಟ್ರವನ್ನು ಮುಂದಿನ ಹಂತದ ಆವಿಷ್ಕಾರಗಳಿಗೆ ಕೊಂಡೊಯ್ಯಬಲ್ಲ ಉದ್ಯಮಿಗಳಾಗಬೇಕು ಎಂದು ಪ್ರೇರಣೆ ನೀಡಿದರು.
ಕಾರ್ಯಕ್ರಮ ಸಂಯೋಜಕ ಪ್ರೊ. ವರುಣ ಜೇವಗರ್ಿ ಮಾತನಾಡಿ, ಯುವ ವಿಜ್ಞಾನಿಗಳು ದೇಶದ ಪ್ರತಿಯೊಬ್ಬ ಪ್ರಜೆಯ ಜೀವನದಲ್ಲಿ ಸುಧಾರಣೆ ತರುವ ಆವಿಷ್ಕಾರಗಳಿಗೆ ಮುಂದಾಗಬೇಕು. ಪ್ರತಿಭಾವಂತ ವಿದ್ಯಾಥರ್ಿಗಳು ಮಾನವ ಕುಲದ ಅಭ್ಯುದಯಕ್ಕಾಗಿ ಕಾರ್ಯ ಮಾಡಬೇಕು ಎಂದು ತಿಳಿಸಿದರು. ಅಕ್ಷತಾ ಕಡಟೆ, ಅಮೀನ್ ಅಕಿವತ್, ಡಾ. ಚೆನ್ನರಾಜ್ ರಾಯಚಂದ್ರ, ರಾದೇಶಾಮ ಹೆಡಾ. ಪ್ರೊ. ಆರ್.ಜಿ. ಧಾರವಾಡಕರ, ಪ್ರೊ. ಉದಯಚಂದ್ರ ಮತ್ತಿತರರು ಉಪಸ್ಥಿತರಿದ್ದರು.