ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆ ಸಮಾನತೆ ಸಾಧಿಸಲಿ; ಪ್ರೊ. ಕೆ ರಮೇಶ

Let women achieve equality in the field of science; Prof. K. Ramesh

ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆ ಸಮಾನತೆ ಸಾಧಿಸಲಿ; ಪ್ರೊ. ಕೆ ರಮೇಶ 

ವಿಜಯಪುರ, 05;  ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆ ಸಮಾನತೆ ಸಾಧಿಸಲಿ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್ ಪ್ರೊ. ಕೆ ರಮೇಶ ಹೇಳಿದರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬುಧವಾರ ಆಯೋಜಿಸಿದ್ದ ‘ಸ್ಮಾರ್ಟ ಆಪ್ಟಿಕಲ್ ಮಟೆರಿಯಲ್ಸ ಆ್ಯಂಡ್ ಆ್ಯಂಗುಲರ್ ಮೊಮೆಂಟಮ್‌’ ಎಂಬ ವಿಶೇಷ ಉಪನ್ಯಾಸದಲ್ಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ನಿತ್ಯಜೀನದಲ್ಲಿ ವೈಜ್ಞಾನಿಕ ವಿಚಾರಗಳು, ಆಚರಣೆಗಳು ಬಳಕೆಯಲ್ಲಿ ಇರಬೇಕು. ವಿದ್ಯಾರ್ಥಿನಿಯರ ಜೀವನಕ್ರಮವೂ ವೈಜ್ಞಾನಿಕತೆಯಿಂದ ಒಳಗೊಂಡಿರಬೇಕು ಎಂದರು.  ಕಾರ್ಯಕ್ರಮದಲ್ಲಿ ಶಿಕ್ಷಣ ನಿಕಾಯದ ಡೀನ್ ಪ್ರೊ. ಸಕ್ಪಾಲ್ ಹೂವಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿ ಉಪನ್ಯಾಸಕಿ ವಾಣಿಶ್ರೀ ಕಿರಣಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದ ಸಂಯೋಜಕಿ ಡಾ. ಜಿ ಸೌಭಾಗ್ಯ, ಬೋಧಕ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.