ಬೆಂಗಳೂರು 10: ರಿಯಾಲಿಟಿ ಶೋಗಳ ಅಬ್ಬರದ ನಡುವೆ 2018 ರ ಕನ್ನಡ ಕೋಗಿಲೆ ರಿಯಾಲಿಟಿ ಶೋ ತುಂಬ ದೊಡ್ಡ ಸದ್ದು ಮಾಡಿತ್ತು. ಇದರಲ್ಲಿ ಕನ್ನಡ ಕೋಗಿಲೆ ಶೋ ಕೂಡ ಒಂದು. ಮೂರೆ ಮೂರು ಪೆಗ್ ಹಾಡಿನ ಖ್ಯಾತಿಯ ಹಾಗೂ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ, ಸಂಗೀತ ನಿದರ್ೇಶಕ ಸಾಧುಕೋಕಿಲ ಹಾಗೂ ಖ್ಯಾತ ಗಾಐಕಿ ಅರ್ಚನಾ ಇವರು ನಿಣರ್ಾಯಕರಾಗಿದ್ದ ಈ ಶೋನಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಪಟ್ಟಿಹಾಳ ಗ್ರಾಮದ ಅಚ್ಚ ಗ್ರಾಮೀಣ ಪ್ರತಿಭೆ ದೊಡ್ಡಪ್ಪ ಮಾದರ ವಿಜೇತರಾಗಿದ್ದರು.
ದೊಡ್ಡಪ್ಪ ಆಕೇಸ್ಟ್ರಾಗಳಲ್ಲಿ ಹಾಡುತ್ತ ತೀರ ಬಡತನದಲ್ಲಿ ಬೆಳೆದ ಪ್ರತಿಭೆ. ರಿಯಾಲಿಟಿ ಶೋಗೆ ಆಯ್ಕೆಯಾದಾಗಲೇ ಬೆಳಗಾವಿ ಜಿಲ್ಲೆಯನ್ನು ಬೆಂಗಳೂರು ಮಟ್ಟದಲ್ಲಿ ಪ್ರತಿನಿಧಿಸಿದ ಹೆಮ್ಮೆ ಇವರದು. ಇವರ ಗಾಯನ ಶ್ರಮಕ್ಕೆ ಪ್ರತಿಭೆಗೆ ಮನಸೋತು ಖ್ಯಾತ ಸಂಗೀತ ನಿದರ್ೇಶಕ ಗುರುಕಿರಣ್ ಅವರು ಇವರಿಗೆ ತಮ್ಮ ಸಂಗೀತ ನಿದರ್ೇಶನದಲ್ಲಿ ಒಂದು ಹಾಡು ಹಾಡಿಸುವ ಭರವಸೆ ನೀಡಿದ್ದರು.ಅದರಂತೆ ವಿ.ರವಿಚಂದ್ರನ್ ನಟಿಸಿರುವ ಎಂ.ಎಸ್.ರಮೇಶ್ ನಿದರ್ೇಶನದ 'ದಶರಥ' ಚಿತ್ರದಲ್ಲಿನ 'ಕರಿ ಕೋಟು ಹಾಕೋರೆಲ್ಲ ಕೇಸು ಗೆಲ್ಲೋದಿಲ್ಲ ಎಂಬ ಹಾಡಿಗೆ ದನಿಯಾಗುವ ಮೂಲಕ ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕರಾಗಿ ಪದಾರ್ಪಣೆ ಮಾಡಿದ್ದಾರೆ.